Tuesday, November 16, 2010

ಸ್ನೇಹ ಅಂದ್ರೆ ಹೇಗಿರಬೇಕು


ನ್ನ ಒಬ್ಬಳು ಗೆಳತಿಗೆ ಜೀವನದಲ್ಲಿ ಸ್ನೇಹದಿಂದ ಆದ ಮೋಸದ ಬಗ್ಗೆ ಕೇಳಿ ತುಂಬಾ ಬೇಜಾರಾಗಿತ್ತು. ಪ್ರೀತಿಯಲ್ಲಿ ಮೋಸ ಇರುತ್ತೆ ನಿಜ ಆದ್ರೆ ಇದೇನು ಸ್ನೇಹದಲ್ಲೂ ಮೋಸ ಅಡಗಿದೆಯ ಅಂತ ಕೇಳ್ಬೇಡಿ. ಯಾಕಂದ್ರೆ ಮೋಸ ಮಾಡೋ ಹೃದಯ ಇದ್ರೆ ಅದು ಪ್ರೀತಿ, ಸ್ನೇಹ, ಸಂಭಂಧ ಯಾವುದನ್ನು ನೋಡುವುದಿಲ್ಲ, ಕಳ್ಳನಿಗೆ ಕನ್ನ ಹಾಕೋಕೆ ಮನೆಯ ಖಜಾನೆ ಆದ್ರೆ ಏನು ದೇವರ ಹುಂಡಿ ಆದ್ರೆ ಏನು ಅಲ್ವಾ. ಆದ್ರೆ ಸ್ನೇಹದಿಂದ ಮೋಸ ಹೋದೋರೂ ತೀರಾ ಕಡಿಮೆ.

ಮೊದಲು ಪ್ರೀತಿಗೂ ಸ್ನೇಹಕ್ಕೂ ಇರುವ ವ್ಯತ್ಯಾಸ ಏನು ಗೊತ್ತ. ಅದು ಸ್ವಾರ್ಥ, ಸ್ವಾರ್ಥ ಇದ್ದಲ್ಲಿ ಮೋಸ ನಡೆಯೋದು ಸಹಜ, ಪ್ರೀತಿಯಲ್ಲಿ ಆದ್ರೆ ಸ್ವಾರ್ಥ ಇರ್ಬೇಕು ನಿಜ, ನಾವು ಪ್ರೀತಿಸಿದ ಹುಡುಗ / ಹುಡುಗಿ ನಮಗೆ ಮಾತ್ರ ಸ್ವಂತ, ನನ್ನ ಬಿಟ್ಟು ಬೇರೆಯವರನ್ನ ನೋಡಬಾರದು, ಮಾತಾಡಿಸಬಾರದು, ಜಾಸ್ತಿ ಅವರ ಜೊತೆ ಸೇರಬಾರದು ಅಂತ ಬಯಸೋದು ತಪ್ಪೇನೂ ಅಲ್ಲ ಆದ್ರೆ ಅದೇ ಅತಿಯಾದ್ರೆ ಪ್ರೀತಿಗೆ ಮಾರಕ.

ಹಾಗೆ ಸ್ನೇಹದಲ್ಲೂ ಸ್ವಾರ್ಥ ಇದ್ರೆ ಅದು ಕೂಡ ಸ್ನೇಹದ ಅಳಿವಿಗೆ ಕಾರಣವಾಗುತ್ತೆ.

ಪ್ರೀತಿ ಸ್ನೇಹ ಎರಡು, ಒಂದು ಕೈಯಿಂದ ಮರಳನ್ನೂ ಹಿಡಿದುಕೊಂಡಂತೆ ಗಟ್ಟಿಯಾಗಿ ಹಿಡಿದಸ್ಟು ಮರಳು ಜಾರಿ ಜಾರಿ ಹೋಗುತ್ತೆ.

ಸ್ನೇಹದಲ್ಲಿ ಎಂದಿಗೂ ಸ್ವಾರ್ಥಕ್ಕೆ ಜಾಗ ಕೊಡಬೇಡಿ, ನಿಮ್ಮ ಸ್ನೇಹಿತರನ್ನ ಪ್ರೀತಿಯಿಂದನೆ ನೋಡಿ ಆದ್ರೆ ಬೇರೆಯವರ ಸ್ನೇಹ ಮಾಡ್ಬೇಡಿ ಅಂತ ಹೇಳ್ಬೇಡಿ, ಅವರ ಸ್ವಾತಂತ್ರ್ಯಾನ ಕಸಿದುಕೊಳ್ಳೋಕೆ ನೋಡ್ಬೇಡಿ.

ಸ್ನೇಹ ಪ್ರೀತಿಗಿಂತ ವಿಶಾಲವಾದದ್ದು, ಪ್ರೀತಿಯಲ್ಲಿ ಬೀಳದೇ ಇದ್ದೋರು ಇರ್ತಾರೆ ಆದ್ರೆ ಸ್ನೇಹದ ಪರಿಚಯ ಆಗದೆ ಇರೋರು ಯಾರು ಇಲ್ಲ.

ಸ್ನೇಹ ಪ್ರೀತಿಯಿಂದ ಸೋತ ಜೀವಗಳಿಗೆ ಜೀವ ಕೊಡೋ ಸೆಲೆ, ಕಣ್ಣೀರು ಒರೆಸಿ ಅವರ ನೋವನ್ನು ಮರೆಸಿ ಸದಾ ನಗುನಗುತ ಇರುವಂತೆ ಮಾಡೋ ಒಂದು ಶಕ್ತಿ,

ಇಲ್ಲಿ ನನ್ನ ಗೆಳತಿಯ ಬಗ್ಗೆ ಚಿಕ್ಕದಾಗಿ ಹೇಳೋಕೆ ಇಸ್ಟ ಪಡ್ತೆನೆ. ಅವಳು ಅವಳದೇ classmate ಹುಡುಗಿಯ ಜೊತೆ friendship ಮಾಡ್ಕೊಂಡ್ಳು, ಎಲ್ಲ ಹುಡುಗಿಯರು friendship ಮಾಡ್ಕೊತಾರೆ ಆದ್ರೆ ಇವರು ಸ್ವಲ್ಪ ಜಾಸ್ತಿನೆ close ಆಗ್ಬಿಟ್ಟಿದ್ರು, ಅದು ಎಸ್ಟು close ಅಂದ್ರೆ ನೀವು ಪ್ರೀತಿಸುವ ಹುಡುಗ / ಹುಡುಗಿಯ ಪ್ರೀತಿಯನ್ನ ಮೀರಿಸುವಂತಹ ಸ್ನೇಹ, ಒಬ್ಬರನೊಬ್ಬರು ಬಿಟ್ಟು ಇರಲಾಗದಸ್ಟು, ಹೀಗೆ ಇದ್ದಾಗಲೇ ಪೋಸ್ಸೆಸಿವ್ ನಂಥಹ ಭೂತ ಬರೋದು, ಸ್ನೇಹಿತರ ನಡುವೆ ಪೋಸ್ಸೆಸಿವ್ ನೆಸ್ ಬರುತ್ತೆ ಅಂತ ನನಗೆ ಅವಳನ್ನ ನೋಡಿದ್ಮೇಲೆ ಗೊತ್ತಾಗಿದ್ದು.

ಹೀಗೆ ಅವಳಿಗೆ ಅವಳ ಫ್ರೆಂಡ್ ಬೇರೆ ಹುಡುಗಿಯ ಜೊತೆ friendship ಮಾಡೋದು, ಇವಳನ್ನ ದೂರ ಮಾಡಿದ ಹಾಗೆ ಅನ್ನಿಸಿದೆ, ಅದು ತುಂಬಾ ನೋವು ಕೊಟ್ಟಿದೆ,

ಇದರಿಂದ ಅವಳಿಂದ ದೂರ ಸರಿಯೋದೇ ಸರಿ ಅಂತ decide ಮಾಡಿದ್ದಾಳೆ ಅಸ್ಟೆ.

ಆದ್ರೂ ಅಂತ ಸ್ನೇಹವನ್ನ ಮರೆಯೋಕೆ ಆಗದೆ ಅದನ್ನೇ ನೆನೆಸಿಕೊಂಡು ನೋವು ಅನುಭವಿಸ್ತಾ ಇದ್ದಾಳೆ.

ಇಲ್ಲಿ ಅವಳದು ಅವಳ ಸ್ನೇಹಿತೆಯಡೆಗೆ ಇದ್ದಿದ್ದು ಬರಿ ಸ್ನೇಹ ಅಲ್ಲ, ನಮ್ಮಿಬ್ಬರ ಬಿಟ್ಟು ಏನು ಇಲ್ಲ ಈ ಪ್ರಪಂಚಕ್ಕು ನಮಗೂ ಯಾವ ಸಂಭಂಧನು ಇಲ್ಲ, ನಂಗೆ ಅವಳನ್ನ ಬಿಟ್ರೆ ಬದುಕೋ ಶಕ್ತಿ ಇಲ್ಲ, ಅವಳಿಗೂ ಕೂಡ ಹಾಗೆ ಅಂತ ಭ್ರಮೆಯಿಂದ ಕೂಡಿದ್ದ ಸ್ನೇಹ ಅದು,

"ನೀವು ಎಸ್ಟು ಶ್ರೀಮಂತರಾಗಿದ್ದೀರ ಅಂತ ತಿಳಿಯೋದು ನೀವು ಗಳಿಸಿದ ಹಣದಿಂದ ಅಲ್ಲ ನೀವು ಗಳಿಸಿದ ಸ್ನೇಹದಿಂದ" ಅನ್ನೋ ಮಾತು ಅವಳಿಗೆ ಇಸ್ಟ ಆಗಲ್ಲ ಯಾಕಂದ್ರೆ ಅವಳ ಗೆಳತಿ ಬೇರೆ ಯಾರ friendship ಮಾಡೋದು ಇಸ್ಟ ಇರ್ಲಿಲ್ಲ. ಅದು ಕಂಡಿತಾ ತಪ್ಪು.

ಫ್ರೆಂಡ್‌ಶಿಪ್ ಅಲ್ಲಿ ಅವಳು ಸೆಲ್ ಫಿಶ್ ಅದು ಅವಳ ತಪ್ಪಲ್ಲ, ಸ್ನೇಹದ ಬಗ್ಗೆ ಅವಳು ತಿಳ್ಕೊಂಡಿರೋದು ತಪ್ಪು. ಸ್ನೇಹವನ್ನ ಎಲ್ಲರಿಗೂ ಕೊಡಿ ಆಗ ಎಲ್ಲರ ಸ್ನೇಹ ನಿಮ್ಮದಾಗುತ್ತೆ, ಸ್ನೇಹ ಬೆಳೆಸೋದು ಉಳಿಸೋದು ನಮ್ಮ ಕ್ಯೆಲಿದೆ. ನಮ್ಮ ಸ್ನೇಹನ ಎಲ್ಲ ಬಯಸೋ ಹಾಗೆ ನೋಡ್ಕೋಬೇಕು ನಮ್ಮ ಸ್ನೇಹಿತರು ನಮ್ಮ ದೂರ ಮಾಡೋಕೆ ಸಾಧ್ಯವಾಗದಂತ ಆಕರ್ಷಕ ವ್ಯಕ್ತಿತ್ವ ನಮ್ಮದಾಗಬೇಕು. ಸ್ನೇಹ ಇರೋದು ಬೇರೆ ಎಲ್ಲ ನೋವನ್ನು ಮರೆಯೋಕೆ ಸ್ನೇಹದಿಂದ ಮತ್ತೆ ನೋವು ಪಡೋಕೆ ಅಲ್ಲ.

ಮತ್ತೆ ನೀವು ಸ್ನೇಹ ಬೆಳೆಸೋ ವ್ಯಕ್ತಿಯ ಸ್ವಭಾವವನ್ನು ತಿಳಿದುಕೊಳ್ಳಿ, ಅವರನ್ನ ಅರ್ಥ ಮಾಡ್‌ಕೋಳ್ಳಿ

ಅವರ ಸ್ನೇಹ ನಿಮಗೆ ಮಾತ್ರ ಮೀಸಲು ಅಂತ ಅಂದುಕೊಳ್ಳಬೇಡಿ. ನನ್ ಪ್ರಕಾರ ಸ್ನೇಹ ವೆಂಬುದು ಎಲ್ಲರಿಗೂ ಮೀಸಲು. ಅವರಿಗೂ ಸ್ವಾತಂತ್ರ್ಯ ಕೊಡಿ.

Friday, October 22, 2010

SEX ಅನ್ನೋದು ಎರಡು ವೈಕ್ತಿತ್ವಗಳ ಸೆಲೆಬ್ರೆಶನ್ ಆಗಿರಬೇಕು



SEX ಅನ್ನೋದು ಗುಟ್ಟಿನಲ್ಲಿ ಹುಟ್ಟಿ ಪಶ್ಯತಾಪದಲ್ಲಿ ಸಾಯುವಂತಹುದಾಗಿರಬಾರದು. ಸಂಬಂಧ ನೈತಿಕವೋ ಅನೈತಿಕವೋ ಆ ಪ್ರಶ್ನೆ ಒತ್ತಟ್ಟಿಗಿರಲಿ ಆದರೆ ಎರಡು ದೇಹಗಳ ಮಿಲನವೆಂಬುದು ಕೇವಲ ದೇಹ ಮಟ್ಟದ್ದಾಗಿರಬಾರದು ಅದು ಎರಡು ವೈಕ್ತಿತ್ವಗಳ ಸೆಲೆಬ್ರೆಶನ್ ಆಗಿರಬೇಕು. ಸೆಲೆಬ್ರೆಶನ್ ಆಫ್ Two ಪರ್ಸನಲಾಟೀಸ್ ಯಾವಾಗ ಕಾಮವೆಂಬುದು ಕದ್ದು ಹುಟ್ಟಿ ಕದ್ದು ಸಂಬ್ರಮಿಸುತ್ತದೋ ಆಗ ಅದು ಕೇವಲ ಒಂದು guilt ನ ಬಿಟ್ಟು ಹೋಗುತ್ತದೆ ಪಶ್ಯತಾಪ ಹೇಸಿಗೆ ಭಯಗಳಲ್ಲಿ ನಮ್ಮನ್ನು ಉಳಿಸಿ ಹೋಗುತ್ತದೆ ಈ ತೆರನಾದ ಸಂಬಂಧ ಏರ್ಪಟ್ಟಾಗ ಕೇವಲ ಆ ಸಂಬಂಧ ಅನೈತಿಕವಾಗಿರುವುದಿಲ್ಲ ಅದಕ್ಕೆ ಸಂಬಂಧ ಪಟ್ಟ0ತ ಇಬ್ಬರ ಬದುಕುಗಳೆಲ್ಲವೂ ಅನೈತಿಕವಾಗಿ ಹೋಗುತ್ತವೆ.

Never do that

- ಇಂತಿ ನಿಮ್ಮ ಪ್ರೀತಿಯ ರಾಜೇಶ (ಪ್ರಜು).

Saturday, October 9, 2010

ಹೆಣ್ಣು ಗಂಡಿನಲ್ಲಿ ಬಯಸೋದು ಏನನ್ನ?




ಹುಡುಗಿಯರು ತಾಯಿ ತಂದೆಯನ್ನು ಮರೆಯುವಂತೆ ಒಬ್ಬ ಹುಡುಗನನ್ನು ಪ್ರೀತಿಸುತ್ತಾಳೇ ಇದಕ್ಕೆ ಕಾರಣವೇನು?
ಅಸ್ಟಕ್ಕು ಹುಡುಗಿ ಹುಡುಗನಿಂದ ಬಯಸೋದು ಏನಾನ್ನ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆ ಇವತ್ತು ನಿನ್ನೆಯದಲ್ಲ, ಅದು ಬಾರಿ ನಮ್ಮಲ್ಲಿ ಅಸ್ಟೆ ಹುಟ್ಟಿಕೊಳ್ಳೋ ಅಂಥದ್ದು ಅಲ್ಲ ಹಲವಾರು ವರ್ಷಗಳಿಂದ ಪ್ರತಿ ಗಂಡಸಿನ ಮನಸ್ಸಲ್ಲು ಉತ್ತರ ಸಿಗದೆ ಉಳಿದಿರೋ ಪ್ರಶ್ನೆ ಅದು.
ಖ್ಯಾತ ಮನಶ್ಯಾಸ್ತ್ರಜ್ಞ ಸಿಗ್ಮಂಡ್ ಪ್ರಾಯ್ಡ್ ಒಂದರ್ಥದಲ್ಲಿ ಸೈಕಾಲಜಿ ಯನ್ನೇ ಅರೆದು ಕುಡಿದವನು ಅವನನ್ನು ಸದಾ ಕಾಡ್ತಾ ಇದ್ದ ಕೊನೆಗೂ ಉತ್ತರ ಸಿಗದೆ ಉಳಿದ ಒಂದೇ ಒಂದು ಪ್ರಶ್ನೆಎಂದರೆ ಆಸ್ಟಕ್ಕೂ ಹೆಣ್ಣು ಗಂಡಸೀನಲ್ಲಿ ಬಯಸೋದು ಏನು ಅನ್ನೋದು?
ಕೆಲವರಿಗೆ ಇದೆಂಥ ಸಿಲ್ಲೀ ಪ್ರಶ್ನೆ ಅನ್ನಿಸಿಬಿಡಬಹುದು ಆದ್ರೆ ಈ ಪ್ರಶ್ನೆ ಆದೆಸ್ಟು ಚರ್ಚಿತ ವಾಗಿದೆ ಅಂದ್ರೆ ಖ್ಯಾತ English ಪತ್ರಿಕೆ "India Today" ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ದೇಶದ ದೊಡ್ಡ ದೊಡ್ಡ ನಗರಗಲ್ಲೆಲ್ಲ ಒಂದು ಸರ್ವೇಯನ್ನೇ ನಡೆಸಿ ಒಂದು ಮುಖ ಪುಟ ವರದಿಯನ್ನೇ ಸೃಷ್ಟಿಸಿ ಬಿಟ್ಟಿತ್ತು.
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದ ಅನೇಕ ಗಂಡಸರ ಪ್ರಕಾರ ಹೆಂಗಸರು ತಮ್ಮಲ್ಲಿ ಬಯೋಸೋದು ಒಂದು ದುಡ್ಡು ಇನ್ನೊಂದು ಸೆಕ್ಸ್.
ಈ ರೀತಿಯ ಉತ್ತರ ಕಂಡುಕೊಂಡ ಗಂಡಸರದ್ದು ಚೀಫ್ ಮೆಂಟಾಲಿಟೀ.
ಅವರಂದುಕೊಂಡಂತೆ ಇದೇನು ಉತ್ತರವೇ ಸಿಗದ ದೊಡ್ಡ ಪ್ರಶ್ನೆಯಲ್ಲ, ಆದ್ರೆ ಉತ್ತರ ಹುಡುಕಿಕೊಳ್ಳೋದು ಅವರವರ ಮನಸ್ಸಿಗೆ ಬಿಟ್ಟಿದ್ದು.
ಇರಬಹುದು ಹುಡುಗಿ ಕೆಲವೊಮ್ಮೆ ಹಣ, ಅಂತಸ್ತು ಸೌಂದರ್ಯಗಳಿಗೂ ಮರುಳಾಗಬಹುದು ಆದ್ರೆ ನಿಜಕ್ಕೂ ಪ್ರೀತಿಸಿದ,
ಮೆಚ್ಚಿ ಮದುವೆಯಾದ ಗಂಡಿನಲ್ಲಿ ಬಯಸೋದೇ ಬೇರೆ.....
ಹುಡುಕ್ತಾ ಹೋದ್ರೆ ಸಾವಿರ ಅರ್ಥ ಸಿಗೋ ಬರೀತಾ ಹೋದ್ರೆ ಎಸ್ಟು ಪುಟಗಳಾದ್ರೂ ಸಾಲದೇ ಇರೋ ಯಾವತ್ತಿಗೂ ಮುಗಿಯದ ವಸ್ತು, ಪ್ರೀತಿ
ಹೌದು ಒಬ್ಬ ಹೆಣ್ಣು ತಾನು ಮೆಚ್ಚಿದ ಗಂಡಿನಲ್ಲಿ ಬಯೋಸೋದು ಅಂತ ನಿಸ್ಕಲ್ಮಶ ಪ್ರೀತಿಯನ್ನೇ ಒಂದು ಹುಡುಗಿ ಒಂದು ಹುಡುಗನಿಗೆ ಮನಸೋಲೋದೇ ಅವನೆಸ್ಟು ನನ್ನನ್ನು ಪ್ರೀತಿಸ್ತಾನೆ ಅನ್ನೋ ಕಾರಣಕ್ಕೆ. ಯಾವಾಗ್ಲೂ ಅಸ್ಟೆ.
ಹೆತ್ತವರನ್ನೆಲ್ಲ ತೊರೆದು ಬಂದ ಹೆಣ್ಣು ತಾನು ಪ್ರೀತಿಸಿದ ಗಂಡಿನಲ್ಲಿ ಬಯಸೋದು ಎಂದು ಮುಗಿಯದ ಹಿಡಿ ಪ್ರೀತಿಯನ್ನ ಆ ಪ್ರೀತಿ ಬರಿ ಪ್ರೀತಿ ಆಗಿದ್ರೆ ಏನು ಪ್ರಯೋಜನ ಅದರೊಟ್ಟಿಗೆ ಅದೇ ಮಟ್ಟದ ಪ್ರಾಮಾಣಿಕತೆ ಇರಬೇಕು, ಪ್ರಾಮಾಣಿಕತೆಯೇ ಇಲ್ಲದ ಪ್ರೀತಿ ಯಾವತ್ತೂ ಪ್ರೀತಿ ಅನ್ನಿಸಿಕೊಳ್ಳಲಾರದ್ದು. ಆಲ್ಮೋಸ್ಟ್ ಎಲ್ಲ ಗಂಡಸರು ತಮ್ಮ ಹೆಂಡತಿಯನ್ನ ಪ್ರೀತಿಸೋದು ಹಾಸಿಗೆಯಲ್ಲಿ ಮಾತ್ರ. ಅಂತ ಪ್ರೀತಿಯನ್ನ ಹೆಣ್ಣು ಯಾವತ್ತೂ ಬಯಸೋದಿಲ್ಲ ಅವಳಿಗೆ ತನ್ನನ್ನೇ ತನ್ನೋಬಳನ್ನೇ ಪ್ರಾಮಾಣಿಕವಾಗಿ ಪ್ರೀತಿಸೋ ಗಂಡು ಬೇಕು.
ಪ್ರೀತಿ ಪ್ರಾಮಾಣಿಕತೆ ಎರಡಿದ್ದ ಮಾತ್ರಕ್ಕೆ ಜೀವನ ನಡೆಯೋದಿಲ್ಲ ಅನ್ನೋ ಸತ್ಯ ಗೊತ್ತಿರೋದ್ರಿಂದನೆ ಹೆಣ್ಣು ಅದೇ ಮಟ್ಟದ Security ಯನ್ನ expect ಮಾಡ್ತಾಳೆ ಅವಳಿಗೊಂದು ಸಾಮಾಜಿಕ ಭದ್ರತೆ ಬೇಕಿರುತ್ತೆ. ಬೇಕಿರುತ್ತೆ ಅನ್ನೋ ದಕ್ಕಿಂತ ಹೆಚ್ಚಾಗಿ ಅವಳಿಗೆ ಅದರ ಅವಶ್ಯಕತೆ ಇರುತ್ತೆ. ಆ Security ಇಲ್ಲದೇ ಹೆಣ್ಣು ಸಮಾಜದಲ್ಲಿ ಬದುಕೋದು ಕಸ್ಟ. ಅವಳಿಗೆ ಎಂಥ ದೊಡ್ಡ ಕೆಲಸವೇ ಇರಲಿ ಸಾವಿರಾರು ರೂಪಾಯಿ ಸಂಬಳವೇ ಬರ್ತಿದ್ರು ಅವಳು ತನ್ನ ಗಂಡನ security ನ ಸದಾ ಬಯಸುತ್ತಾಳೇ. ಹಾಗೊಂದು care, concern, security feelings ಗಳನ್ನ ಕೊಡೋ ಗಂಡಸು ಯಾವತ್ತೂ ಈಸ್ಟವಾಗುತ್ತಾನೆ.
ಹೆಣ್ಣು ಭಾವನಾಜೀವಿ ಕನಸು ಕಾಣೋದ್ರಲ್ಲೇ ತನ್ನರ್ಧ ಆಯುಸ್ಸನ್ನ ಕಳಿತಾಳೆ ಅಂಥವಳಿಗೆ ಭಾವನೆಗಳಿಗೆ ಬೆಲೆ ಕೊಡದ ಗಂಡ ಸಿಕ್ಕಿಬಿಟ್ರೆ ಏನು ಗತಿ? ಹುಡುಗಿಯರು ಯಾವಾಗ್ಲೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವಾಗ ಅಂಥವನ್ನೆಲ್ಲ ಗಮನಿಸ್ತಾರೆ ಹಾಗಾಗೆ ಈ ಪಾಸಿಟಿವ್ ಗುಣಗಳ ಮುಂದೆ ರೂಪ, ಹಣ, ಅನ್ನೋ ಅಂಶಗಳು ತೃಣ ಅನ್ನಿಸಿಬಿಡುತ್ತೆ, ಇವನು ನನ್ನನ್ನ ಚೆನ್ನಾಗಿ ಅರ್ಥ ಮಾಡ್ಕೊತಾನೆ ನನ್ನ ಭಾವನೆಗಳಿಗೆ ಸ್ಪಂದಿಸ್ತಾನೆ ಅಂತ ಗೊತ್ತಾದ ತಕ್ಷಣ ಹುಡುಗಿಯರು ಮುಲಾಜಿಲ್ಲದೇ ಅವನ ಪ್ರೀತಿಯಲ್ಲಿ ಬಿದ್ದು ಬಿಡ್ತಾರೆ ಅದಕ್ಕೆ ನಾನು ಹೇಳಿದ್ದು ಅವರ ಬಯಕೆಯ ಪಟ್ಟಿಯಲ್ಲಿ ಭಾವುಕತೆಯೂ ಒಂದು ಅಂತ.
ಈಸ್ಟೆಲ್ಲಾ ಕೊಡ್ತೀನಲ್ಲ ಅಂದ ಮಾತ್ರಕ್ಕೆ ಗಂಡಸಿಗೆ ಅವಳನ್ನ ಯಾವತ್ತೂ dominate ಮಾಡೋ ಹಕ್ಕಿಲ್ಲ ಹೆಣ್ಣು ಯಾವತ್ತೂ ಅದನ್ನ ಸಹಿಸೋದಿಲ್ಲ. ಅವಳು ತನ್ನ ಪತಿಯಿಂದ ಅವನ ತಾಯಿ ತಂಗಿಯರಿಗೆ ಸಿಗುವಸ್ಟೆ ಗೌರವವನ್ನು expect ಮಾಡ್ತಾಳೆ ಅದು ತಪ್ಪು ಅಲ್ಲ ಪ್ರೀತಿಸ್ತಾನೆ ಅಂದ ಮಾತ್ರಕ್ಕೆ ಗೌರವವಿಲ್ಲದೇ ನಡ್ಕೋಬೇಕು ಅಂತ ಏನಿಲ್ಲವಲ್ಲ.
ತಾನು ಪ್ರೀತಿಸಿದ ಗಂಡನಿಂದ ತನಗೆ ಎಸ್ಟು ಪ್ರೀತಿ ಸಿಗುತ್ತೋ ಅಸ್ಟೆ ಗೌರವ ಕೂಡ ಸಿಗಬೇಕು ಅಂತ ಅವಳು ಬಯಸುತ್ತಾಳೇ.
ಹಾಗಾದ್ರೆ ಹುಡುಗಿಯರು ಗಂಡಸರಲ್ಲಿ ಬಯೋಸೋದು ಈಸ್ಟೆನಾ ಅಂತ ಪ್ರಶ್ನೆ ಮಾಡ್ಬೇಡಿ ಹಾಗೆ ಮಾಡೋಕೆ ಮುಂಚೆ ಅದನ್ನೆಲ್ಲ ಕೊಡೋಕೆ ನಿಮ್ಮ ಕ್ಯೆಯಲ್ಲಿ ಸಾಧ್ಯಾನ ಅಂತ ಯೋಚಿಸಿ, ಆಫ್ ಕೋರ್ಸ್ ಹೆಂಗಸರು ಹಣ ಮತ್ತು ಸೆಕ್ಸ್ ಎರಡನ್ನೂ ಬಯಸುತ್ತಾರೆ . ಆದ್ರೆ ಅವು ಅಸ್ಟೆನೂ ಮುಖ್ಯ ಅಲ್ಲ. ಅವೆರಡನ್ನೇ ಬಯಸುತ್ತಾಳೇ ಅನ್ನೋದಾದ್ರೆ ಒಬ್ಬನನ್ನೇ ಪ್ರೀತಿಸಬೇಕಾಗಿಲ್ಲ, ಅವುಗಳನ್ನು ಪಡ್ಕೋಳೋಕೆ ಅವನಿಗೋಸ್ಕರ ತನ್ನ ಜೀವನವನ್ನು ಮೀಸಲಿಡಬೇಕಾಗಿಲ್ಲ, ಅವುಗಳನ್ನು ಪಡೆದುಕೊಳ್ಳೋಕೆ ಬೇರೇನೇ ದಾರಿಗಳಿವೆ ಆದ್ರೆ ಹೆಣ್ಣು ಅಂತ ಜೀವನವನ್ನು ಬಯಸೋದಿಲ್ಲ, ಅವಳು ಪ್ರೀತಿಗೆ ಪ್ರತಿಯಾಗಿ ಪ್ರೀತಿ, ಪ್ರಾಮಾಣಿಕತೆಗೆ ಪ್ರತಿಯಾಗಿ ಪ್ರಾಮಾಣಿಕತೆ, ಭದ್ರತೆ, ಗೌರವಗಳ ಹೊರತಾಗಿ ಗಂಡು ಕೊಡೋ ದುಡ್ಡು ಮತ್ತು ದ್ಯೆಹಿಕ ಸುಖ ಎರಡು ಯಾವತ್ತು ತೃಪ್ತಿ ನೀಡಲಾರವು.
ಪ್ರತಿ ಪ್ರೇಮಿಯು ಪ್ರತಿ ಗಂಡನು ಮೊದಲು ತನ್ನ ಹೆಂಡತಿ ಪ್ರೇಯಸಿ ಏನನ್ನ ಬಯಸಿ ತನ್ನನ್ನ ಪ್ರೀತ್ಸಿದ್ದಾಳೆ ಅನ್ನೋದನ್ನ ತಿಳ್ಕೋಬೇಕು ಆಗ ಗೊತ್ತಾಗುತ್ತೆ ಹುಡುಗಿ ಎಸ್ಟೇ ಸುಂದರಿ ಬುದ್ದಿವಂತೆ ಯಾಗಿದ್ರು ಸಹ ಅವಳು ಮನಸೋಲೋದು ಪ್ರೀತಿ ಪ್ರಾಮಾಣಿಕತೆ ಸುರಕ್ಷತೆಗಳಿಗೆ ಅಂತ.

Friday, October 8, 2010

ಹುಡುಗ I Love You ಹೇಳಲೇ ಬೇಕಾ?




"ಬಯಸಿದ ವಸ್ತುಗಳನ್ನು ತೆಗೆದುಕೊಳ್ಳುವುದಕೋಸ್ಕರ, ಏನು ಬೇಕಾದ್ರೂ ಮಾಡೋಕೆ ತಯಾರು"
ಇದು ಹುಡುಗರ mentality ಅವರೆಸ್ಟು strong ಆಗಿರ್ತರೋ ಅಸ್ಟೆ ಧಾರಾಳಿಗಳು ಕೂಡ. ಆದ್ರೆ ಈ ಧಾರಾಳಿಗಳು ಏಕೋ ಪ್ರೀತಿ ವಿಷಯದಲ್ಲಿ ಜಿಪುಣರಾಗಿರುತ್ತಾರೆ, ಆದೆಸ್ಟು ಜಿಪುಣ ಅಂದ್ರೆ ತಾವು ಮನಸಾರೇ ಮೆಚ್ಚಿ ಪ್ರೀತಿಸಿದ ಹುಡುಗಿಗೆ ಒಂದೇ ಒಂದು ಸಲವೂ I Love You ಅಂತ ಹೇಳದಿರುವಸ್ಟು. ಮೊದಲನೆ ಸಲ ಪ್ರಪೋಸ್ ಮಾಡೋವಾಗಾದ್ರೆ ಹುಡುಗಿ ಎಲ್ಲಿ ಬ್ಯೆದುಬಿಡ್ತಾಳೋ ಅನ್ನೋ ಭಯ ಕಾಡುತ್ತೆ, ನಿಜ ಅದು ಓಕೇ ಕೂಡ. ಆದರೆ ಪ್ರಪೋಸ್ ಮಾಡಿ, ಪ್ರೀತಿಯು ಶುರುವಾಗಿ ಆ ಪ್ರೀತಿ ವರ್ಷಾನುಗಟ್ಟಲೇ ಹಳೆಯದು ಆಗಿ ಯೆಸ್ಟೋ ಕಸ್ಟಗಳನ್ನು face ಮಾಡಿ, ಮದುವೆಯ ಹಂತ ತಲುಪಿದ ಮೇಲೂ I Love You ಅಂತ ಹೇಳೋಕೆ ಏನಪ್ಪಾ ಕಸ್ಟ?
ಇದು ಪ್ರೀತಿಸಿದ ಪ್ರತಿ ಹುಡುಗಿಯ complaint.
ಒಬ್ಬ ಹುಡುಗನನ್ನು ನೀನು ನಿನ್ನ ಹುಡುಗಿಯನ್ನ ಎಸ್ಟು ಪ್ರೀತಿಸ್ತೀಯ ಅಂತ ಕೇಳಿ ನೋಡಿ
ಅವಳ ಜೊತೆ ಎಲ್ಲಿ ಬೇಕಾದ್ರೂ ಎಸ್ಟು ಬೇಕಾದ್ರೂ ಸುತ್ತಾಡ್ತೀನಿ, ಏನು ಬೇಕಾದ್ರೂ ಮಾಡ್ತೀನಿ, ಇನ್ನಿಲ್ಲದಸ್ಟು ಕೇರ್ ತಗೊತೇನೆ, ಅವಳನ್ನೇ ಮದುವೆ ಆಗ್ತೀನಿ.
ಅಂತೆಲ್ಲ ಅನ್ನುತ್ತಾನೆ. ಆದರೆ ಪ್ರೀತಿ ಅದನ್ನವನು ಬಾಯೀ ಬಿಟ್ಟು ಹೇಳುವುದಿಲ್ಲ. ಈ ಉತ್ತರ ಅವನ ಮತ್ತು ಅವಳ ಪ್ರೀತಿ ಮೇಲೆ ಅನುಮಾನ ಹುಟ್ಟಿಸಿಬಿಡಬಹುದಾದರೂ ಅಸಲಿಗೆ ಅಲ್ಲಿ ಅನುಮಾನ ಪಡುವಂಥಾದ್ದೇನು ಇರುವುದಿಲ್ಲ. ಅವನು ತನ್ನ ಪ್ರೀತಿಯಲ್ಲಿ ಅವಳಸ್ಟೆ ಸೀರೀಯಸ್ ಮತ್ತು ಸಿನ್ಸಿಯಾರ್.
ಆದ್ರೆ ಹುಡುಗಿಯಸ್ಟು ಬೋಲ್ಡ್ ಅಲ್ಲ, ತಮ್ಮ ಫೀಲಿಂಗ್ಸ್ ಹುಡುಗರು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.
"Words cannot say
What the heart speaks,
But the face will say
What that heart seeks"
ಅನ್ನೋ ಉಕ್ತಿಗೆ ಹೇಳಿ ಮಾಡಿಸಿದ ವ್ಯಕ್ತಿತ್ವ ಹುಡುಗರದು. ಅದನ್ನ ಹುಚ್ಚು ಹುಡುಗಿಯರು ಅರ್ಥ ಮಾಡಿಕೊಳ್ಳಬೇಕಸ್ಟೆ. ಪ್ರತಿ ಹುಡುಗನು ತನ್ನ ಹುಡುಗಿ ಬಗ್ಗೆ ಪೋಸ್ಸೆಸಿವ್ ಆಗಿರ್ತನೆ ಅವಳನ್ನು ಪ್ರಾಣ ಹೋಗುವಸ್ಟು ಪ್ರೀತಿಸ್ತಾನೆ ಬೇರೊಬ್ಬ ಅವಳೆಡೆಗೆ ಕಣ್ಣೆತ್ತಿ ನೋಡಿದ್ರೂ ಸಾಕು ಕೆಂಡಾಮಂಡಲವಾಗ್ತಾನೆ, ಯಾವುದನ್ನು express ಮಾಡೋ ರೀತಿ ಗೊತ್ತಿಲ್ಲ ಅಸ್ಟೆ.
ಹುಡುಗರ ಪ್ರಕಾರ ಪ್ರೀತಿ ಎಂದರೆ ಆರಾಧನೆ. ಅದು ಮನಸ್ಸಿನಲ್ಲಿರಬೇಕೆ ಹೊರತು ಬೀದಿಗೆ ಬಂದು ಬೀಳಬಾರದು
ಮನಸ್ಸಿನಲ್ಲಿ ಇಟ್ಟುಕೊಂಡು ಕಾಪಾಡಬೇಕಾದ ಪ್ರೀತಿನ ಸಮಯ ಸಂಧರ್ಭ ಸಿಕ್ಕಿದಾಗಲೆಲ್ಲ express ಮಾಡೋಧು childish ಅನ್ನಿಸಿಕೊಳ್ಳುತ್ತೆ.



ತಮ್ಮ ಪ್ರೀತಿ ಎಲ್ಲರ ಮಾತಿನ ವಿಷಯವಾಗಿರಬಾರದು ಅನ್ನೋದು ಹುಡುಗರ ಆಸೆ, ಸದಾ ಗಾಸ್ಸಿಪ್ ಗಳಿಂದ ದೂರ ಉಳಿಯ ಬಯಸುವ ಹುಡುಗರು, ತಾವಾದನ್ನು express ಮಾಡಿದ್ರೆ ಎಲ್ಲಿ ಎಲ್ಲರಿಗೂ ತಿಳಿದುಬಿಡುತ್ತೋ ಅಂತ ಆತಂಕಗೊಂಡು ಮನದಲ್ಲೇ ಬಚ್ಚಿಟ್ಟುಕೊಳ್ಳುತ್ತಾರೆ. ಹೇಳಿದ ಸಮಯಕ್ಕಿಂತ ಐದೋ ಹತ್ತೋ ನಿಮಿಷ late ಆಗಿ ಬಂದ ಅಂತಲೋ, ನೆನ್ನೆ ತಾನು ಮಾಡಿದ ಫೊನಿಗೆ respond ಮಾಡಲಿಲ್ಲ ಅಂತಲೋ ಕ್ಯಾತೆ ತೆಗೆಯುವ ಹುಡುಗಿಯರು ಸದಾ ಅವನು ತನ್ನ ಪ್ರೀತಿ ವ್ಯಕ್ತ ಪಡಿಸಲಿ ಅಂತ ಹಾತೊರೆಯುತ್ತಿರುತ್ತಾರೆ ಸದಾ ಭಾವನಾತ್ಮಕ ಪ್ರಪಂಚದಲ್ಲಿರೋ ಹುಡುಗಿಯರು ತಾವು ಪ್ರೀತಿಸೋ ಹುಡುಗನಿಂದ ಅಸ್ಟು ಮಾತ್ರದ ಪ್ರೀತಿಯನ್ನು expect ಮಾಡೋದು ತಪ್ಪು ಅಲ್ಲ. ನಿಜ ಆದರೆ ಮಾತಿನಲ್ಲಿ ಯಾವುದನ್ನು express ಮಾಡಲು ಇಚ್ಚಿಸದ ಹುಡುಗರು ಅದಕ್ಕೆ ಬೇರೆಯದೇ ದಾರಿ ಹುಡುಕಿಕೊಂಡಿರುತ್ತಾರೆ.
ತಮ್ಮ ಉತ್ಕಟ ಪ್ರೀತಿಯನ್ನು ಸಮಯ ಸಿಕ್ಕಾಗಲೆಲ್ಲ ಅವರು ವ್ಯಕ್ತ ಪಡಿಸುತ್ತಲೆ ಇರುತ್ತಾರೆ. ಅದನ್ನು ಹುಡುಗಿಯರು ಕಂಡುಕೊಳ್ಳಬೇಕಾಸ್ಟೆ.
ಹುಡುಗ ತಾನು ಪ್ರೀತಿಸಿದ ಹುಡುಗಿಯನ್ನು ತನ್ನ ಕುಟುಂಬದ ಸದಸ್ಯರಿಗೆ, ತನಗೆ ಆಪ್ತರಾದವರಿಗೆ ಪ್ರತಿಯೊಬ್ಬರಿಗೂ ಪರಿಚಯಿಸುತ್ತಾನೆ ಇದರರ್ಥ ಆಕೆಯ ಬಗೆಗೆ ಅವರಿಗೂ ಅವರ ಬಗ್ಗೆ ಅವಳಿಗೂ ತಿಳಿದಿರಲಿ ಎಂದು ಆಕೆ ಸದಾ ತನ್ನ ಆತ್ಮೀಯರೊಡನೆ ಬೆರೆಯಲಿ ಎಂದು ಬಯಸುತ್ತಾನೆ.
ಹೀಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿ ತನ್ನ ಕುಟುಂಬದ ಸದಸ್ಯರಲ್ಲಿ, ಆತ್ಮೀಯರಲ್ಲಿ ಅವಳು ತನಗೆ ತುಂಬಾ ಬೇಕಾದವಳು ಎಂಬುದನ್ನು ತೋರ್ಪಡಿಸುತ್ತಾನೆ.
ಕಾರಣವೇ ಇಲ್ಲದೇ ತನ್ನ ಹುಡುಗಿಗೆ ಉಡುಗೊರೆಗಳನ್ನು ನೀಡ್ತಾನೆ. ಇದು ಹುಡುಗರು ತಮ್ಮ ಪ್ರೀತಿ ವ್ಯಕ್ತಪಡಿಸೋ ಇನ್ನೊಂದು ರೀತಿ.
ದಿನದ ಹೆಚ್ಚು ಸಮಯವನ್ನು ಅವಳೊಟ್ಟಿಗೆ ಕಳೆಯುವ ಮೂಲಕ Family & Friendsಗಿಂತ ಅವಳಿಗೆ ಜಾಸ್ತಿ importance ಕೊಡ್ತಾನೆ.
ತಾನು ಪ್ರೀತಿಸಿದ ಹುಡುಗಿಗೆ ಒಂದು ಚಿಕ್ಕ ನೋವು, ತೊಂದರೆಯೂ ಆಗದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡ್ತಾನೆ, ಕೆಲವೊಮ್ಮೆ ಮಾತಿನಲ್ಲಿ ಹೇಳಿಕೊಳ್ಳಲು ಇಸ್ಟ ಪಡದ ಹುಡುಗರು ಪತ್ರ ಬರೆಯುತ್ತಾರೆ ಈಗಂತೂ E-Mail, SMS ಎಂಬ ಹೊಸ ಹೊಸ ಬಗೆಗಳಿದ್ದೆ ಇದೆಯಲ್ಲಾ,
ಈಗೀಗ ಪ್ರೀತಿಯಲ್ಲಿ, ಪ್ರೇಮಿಗಳ ನಡುವೆ Physical distance ಅನ್ನೋದು ಸಂಪೂರ್ಣ ಕಾಣೆಯಾಗಿದೆ, ನಂಬಿಕೆಯಸ್ಟೆ ಮುಖ್ಯವಾಗಿದೆ.
ಕೆಲವು ಹುಡುಗರು ತಮ್ಮ ಪ್ರೀತಿಯನ್ನು ಚುಂಬಿಸುವ ಮೂಲಕವೂ ವ್ಯಕ್ತಪಡಿಸುತ್ತಾರೆ,

ಎಸ್ಟೇಲ್ಲಾ ತುಮಲ ಆತಂಕಗಳ ನಡುವೆಯೂ ಬೇರೆ ಬೇರೆ ವಿಧಗಳಿಂದ ಹುಡುಗರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಾಗ "ಇಲ್ಲ ನಂಗೆ I Love You ಅನ್ನೋದೇ ಬೇಕು" ಅನ್ನೋದು ಎಸ್ಟು ಸರಿ, ತಮ್ಮ ನಡೆಯಲ್ಲೇ ಹೊರಹೊಮ್ಮಿಸುವ ಪ್ರೀತಿಯನ್ನು ಹುಡುಗಿಯರು ಅರ್ಥ ಮಾಡಿಕೊಳ್ಳಬೇಕಾಸ್ಟೆ.
ಮಾಡ್ಕೊತೀರಲ್ವಾ?

Thursday, October 7, 2010

ಹುಡುಗಿಯರು ಯಾಕೆ ಪದೇ ಪದೇ ಮೋಸ ಹೋಗುತ್ತಾರೆ


ಒಂದು ಮೋಸ ಸರಿ actually ಅದೇ ದುಬಾರಿ. ಆದ್ರೂ ನಾವು ಎಲ್ಲ ಗೊತ್ತಿದ್ದೂ ಯಾಕೆ ಎರಡನೆ ಮೋಸಕ್ಕೆ ತಲೆ ಕೊಟ್ಟುಬಿಡುತ್ತೇವೆ?
ಇದರ ಹಿಂದೆ ಏನಾದರೂ ಸಿದ್ದಾಂತ ಇದೆಯಾ? ಮನಸ್ಸು ಹಾಗೇಕೆ ಕೆಲಸ ಮಾಡುತ್ತದೆ? ಈ ಬಗ್ಗೆ ತುಂಬಾ ಸಲ ಯೋಚನೆ ಮಾಡಿದ್ದೇನೆ.
ಮೊದಲನೆಯದಾಗಿ ನಾವು ವಂಚನೆಗೊಳಗಾಗಿದ್ದೇವೆ, ಎಂಬ ವಿಷಯ ನಿಮಗೆ ಗೊತ್ತಾದಾಗ ನೋವೀಗಿಂತ ಅವಮಾನದಿಂದ ನರಳುತ್ತೇವೆ.
ಇಬ್ಬರು ಮಾತಾಡಿಕೊಂಡು ನಾವಿನ್ನೂ ಹೊಂದಿಕೊಂಡು ಇರಲಾಗುವುದಿಲ್ಲ ಅಂತ ನಿರ್ಧರಿಸಿ split ಆಗುತ್ತೇವಲ್ಲ? ಆಗ ಕೇವಲ ನೋವಿರುತ್ತೆ, ಅವಮಾನವಲ್ಲ ಆದ್ರೆ, dump ಆದಾಗ ನೋವೀಗಿಂತ ಅವಮಾನ ನಮ್ಮನ್ನ ದಹಿಸುತ್ತದೆ. ಅವಮಾನದ ಮುಂದಿನ ಸ್ಟೆಪ್ಪೆ ರಿವೇಂಜು.
ನಮಗೆ ಮೋಸ ಮಾಡಿದ ವೈಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅತ್ಯಂತ ಸುಲಭವಾಗಿ ನಮ್ಮ ex-boyfriend ಮೇಲೆ ತೀರಿಸಿಕೊಳ್ಳಬಹುದಾದ ಸೇಡು ಅಂದರೆ ಅವರಿಗೆ ಗೊತ್ತಾಗುವಂತೆ ಇನ್ನೊಬ್ಬರನ್ನು ಪ್ರೀತಿಸಿಬಿಡುವುದು. ಈ ಕೆಲಸವನ್ನು ಅನೇಕರು ಅದರಲ್ಲೂ ಜಾಸ್ತಿ ಹುಡುಗಿಯರು ಎಸ್ಟು ಬೇಗ ಮತ್ತು ಎಸ್ಟು ನೆಗ್ಲೇಜೆಂಟ್ ಆಗಿ ಮಾಡುತ್ತಾರೆಂದರೆ, ತಾವು ಪ್ರೀತೀಸಿರುವ ಎರಡನೆಯ ವ್ಯಕ್ತಿ ಎಂಥವನು ಅಂತ ಕೂಡ ನೋಡುವುದಿಲ್ಲ ಅವನು ನಂಬಿಕೆಗೆ ತಕ್ಕವನ ಎಂಬುವುದನ್ನು ಕೂಡ ನೋಡುವುದಿಲ್ಲ. blind ಆಗಿ ಪ್ರೀತಿಸಿಬಿಡುತ್ತಾರೆ.
ಅದಕ್ಕಿಂತ ದೊಡ್ಡ ತಪ್ಪು ಅವರು ಮಾಡುವುದೆಂದರೆ, ಎರಡನೆಯವನೆದುರು ಒಂದು ಚೂರು ಬಿಡದೆ ತಮ್ಮ ಮೊದಲ ಪ್ರೇಮದ ಬಗ್ಗೆ ಆದ ಮೋಸದ ಬಗ್ಗೆ ತಾವು ಅನುಭವಿಸಿದ ನೋವು ಮತ್ತು ಸಂಕಟಗಳ ಬಗ್ಗೆ ಎಲ್ಲವನ್ನು ಹೇಳಿಕೊಂಡು ಬಿಡುತ್ತಾರೆ. infact ಎರಡನೆಯವನನ್ನು ಪ್ರೀತಿಸುವುದಕ್ಕೆ ಮೊದಲೇ ಈ ಕೆಲಸ ಮಾಡಿ ಬಿಟ್ಟಿರುತ್ತಾರೆ ಅವನ್ನನಾಗ ಕೇವಲ best friend ಅಂದುಕೊಂಡಿರುತ್ತಾರೆ ಹೀಗೆ ಹೇಳಿಕೊಳ್ಳಲು ಇರುವ ಒಂದೇ ಕಾರಣವೆಂದರೆ ಮೊದಲನೆ ಪ್ರೀತಿಯಲ್ಲಿ ವಂಚಿತರಾದ ಹೊಸತರಲ್ಲಿ ಮನಸ್ಸು ತುಂಬಾ ಸಾಂತ್ವನ, simpathy, ಒಳ್ಳೆಯ ಮಾತುಗಳನ್ನು ಬಯಸುತ್ತಿರುತ್ತದೆ.
ಎರಡನೆಯವನಿಂದ ಒಳ್ಳೆಯ ಮಾತೇನೋ ಹೊರಡುತ್ತದೆ ಒಳ್ಳೆಯ ಸಂಬಂಧ build up ಆಗುತ್ತದೆಂಬ ಭರವಸೆ ಖ0ಡಿತಾ ಇರುವುದಿಲ್ಲ.
ಎರಡನೆಯವನ ಕ್ಯೆಗೆ ಆ ಹುಡುಗಿ ತನಗೆ ಗೊತ್ತಿಲ್ಲದೇ ತನ್ನ ದೇಹದ ಬೀಗದ ಕ್ಯೆಗಳನ್ನು ಒಪ್ಪಿಸಿಬಿಡುತ್ತಾಳೆ ಮೊದಲನೆಯವನ ಹಾಗೆ ಇವನು ವಂಚಿಸಲಿಕ್ಕಿಲ್ಲ ಅಂತ ನಂಬಿಕೊಂಡು ಬಿಟ್ಟಿರುತ್ತಾಳೆ ಅದಕ್ಕಿಂತ ಮಿಗಿಲಾಗಿ ನನ್ನ ಬಗ್ಗೆ ಎಲ್ಲ ಗೊತ್ತಿದ್ದೂ ಸ್ವೀಕರಿಸಿದ್ದಾನೆ ನಂಗೊಂದು affair ಇತ್ತು. ನಾನು ದೈಹಿಕವಾಗಿ ಉಪಯೋಗಿಸಲ್ಪಟ್ಟವಳು, ನನ್ನ affair ಬಗ್ಗೆ ಅನೇಕರಿಗೆ ಗೊತ್ತಿದೆ ಹಾಗಿದ್ದೂ ಇವನು ನಿಜಕ್ಕೂ ಒಳ್ಳೆಯ ಮನುಷ್ಯ, ನಂಬಿಕಸ್ಥ, ನಿಜವಾದ ಪ್ರೇಮಿ ಅಂದುಕೊಳ್ಳುತ್ತಳೇ, ಮತ್ತು ಅಲ್ಲೇ ದೊಡ್ಡ ತಪ್ಪನ್ನು ಮಾಡಿರುತ್ತಳೇ ಇದಲ್ಲದೇ ಅವಳಿಗೆ ಲೈಂಗಿಕತೆ ಎಂಬುದು ಮೊದಲಿನಂತೆ ತೀರಾ ಭಯ ಹುಟ್ಟಿಸುವಂಥ ಹೊಸ ಅನುಭವವಾಲ್ಲಾ ದೇಹ ಕೂಡ ಇನ್ನೊಂದು ಅನುಭವಕ್ಕೆ ಹಾತೊರೆಯುತ್ತಿರುತ್ತದೆ. ಎರಡನೆಯವನನ್ನು ಪೂರ್ತಿ ನಂಬಿರುವುದರಿಂದ, ಆ ನಂಬಿಕೆ ದೇಹವನ್ನು ಬೇಗನೇ ಅವನಿಗೆ ಶರಣಾಗಿಸುತ್ತದೆ. ಹೆಂಗಸು ಎಂಥ ಕಾಮನೆಯನ್ನು ನಿಗ್ರಹಿಸಬಲ್ಲಳು ಆದರೆ ನಂಬಿಕೆ ಎಂಬುದು ಎಲ್ಲ ನಿಗ್ರಹಗಳನ್ನು ತೆಗೆದು ಬಿಡುತ್ತದೆ. ಎರಡನೆ ಮೋಸ ಸಲೀಸಾಗಿ ಆಗಿ ಹೋಗುತ್ತದೆ.
ಈ ಸಮಸ್ಯೆಗಿರುವ ಒಂದೇ ಪರಿಹಾರ ಎಂದರೆ ಮೊದಲ ಗೆಳೆತನದ ಬಗ್ಗೆ ಯಾರೊಂದಿಗೂ ಮಾತನಾಡಬಾರದು ಅಂತ ನಿರ್ಧರಿಸುವುದು ಯಾವ ಕಾರಣಕ್ಕೂ best friend ನನ್ನು ಪ್ರಿಯಕರನ್ನನ್ನಾಗಿ ಮಾಡಿಕೊಳ್ಳದಿರುವುದು, ಅವಶ್ಯಕತೆಯೇ ಇಲ್ಲದೇ ವಿನಾಕಾರಣ ತನ್ನ ಗತಿಸಿ ಹೋದ ಪ್ರೇಮದ ಬಗ್ಗೆ ಮಾತನಾಡದೇ ಇರುವುದು.
ಹೀಗೆ ಎರಡನೆಯ ಬಾರಿಗೆ ಮೋಸ ಹೋಗುವ ಸಮಸ್ಯೆ ಹುಡುಗರಿಗೆ ಇರುವುದಿಲ್ಲವೆಂದಲ್ಲ. ಆದರೆ ಅದು ಹುಡುಗಿಯರಿಗಿರುವಸ್ಟೂ ತೀವ್ರವಾಗಿರುವುದಿಲ್ಲ.

ಒಂದು ಸಲ ಮೋಸ ಅಂದರೇನು ಅಂತ ಗೊತ್ತಾದ ಮೇಲೆ ಹುಡುಗ ತುಂಬಾ ಹುಷಾರಾಗಿಬಿಡುತ್ತಾನೆ. ಅವನು ಪೆಟ್ಟು ತಿಂದ ಮೃಘಕ್ಕಿರುವಂಥ ವರ್ತನೆ. ಕೆಲವೊಮ್ಮೆ ತುಂಬಾ ಪೋಸ್ಸೆಸಿವ್ ಆಗಿ ಬಿಡುತ್ತಾನೆ. ಮೊದಲ ಹುಡುಗಿ ಹೇಗೆ ಕೈ ತಪ್ಪಿ ಹೋದಳು ಎಂಬುದು ಗೊತ್ತಿರುತ್ತದಲ್ಲ?. ಅಂಥದ್ದು ಪುನರಾವರ್ತನೆ ಆಗದಂತೆ ಹಾಗೆ ಕೈ ತಪ್ಪಿ ಹೋಗಲು ಎರಡನೆಯವಳಿಗೆ ಚಾನ್ಸ್ ಕೊಡದಂತೆ ಮೈ ತುಂಬಾ ಕಣ್ನಾಗಿ ಏಚ್ಚರಗೊಂಡು ಅವಳಿಗೆ ಸರ್ಪಗವಲಾಗಿ ಬಿಡುತ್ತಾನೆ. ಮತ್ತು ಈ ಕಾರಣಕ್ಕಾಗಿಯೇ ಎರಡನೆಯ ಪ್ರೀತಿಯನ್ನು ಕಳೆದುಕೊಂಡು ಬಿಡುತ್ತಾನೆ. ಅವನಿಗೆ ಗೊತ್ತಿರದ ಸಂಗತಿ ಎಂದರೆ ಪ್ರೀತಿ ಮತ್ತು ನಂಬಿಕೆಗಳು ಪ್ರಶಾಂತವಾದ ವಾತಾವರಣದಲ್ಲಿ ಮಾತ್ರ ಹುಟ್ಟಿ ಬೆಳೆಯುತ್ತವೆ ಕೋಣೆಯ ಕತ್ತಲಲ್ಲಿ ಅಪನಂಬಿಕೆಯ ಇಕ್ಕಳದಲ್ಲಿ ಅಲ್ಲ.!
ತಮ್ಮ ಹುಡುಗನನ್ನು dump ಮಾಡಿ ಬಂದ ಹುಡುಗಿಯರನ್ನು ಅದಕ್ಕೆ ಕಾರಣವೇನೆಂದು ನಿಲ್ಲಿಸಿ ಕೇಳಿ ನೋಡಿ: "ಅವನು ಉಸಿರಾಡಲಿಕ್ಕೂ ಬಿಡದಸ್ಟು ಪೋಸ್ಸೆಸಿವ್ ಆಗಿದ್ದ ಅದನ್ನ ಭರಿಸೋಕಗದೆ dump ಮಾಡಿದೆ." ಅಂತ ಅನೇಕರು ವಿವರಿಸುತ್ತಾರೆ. ಇಲ್ಲಿ ಕೂಡ ಹುಡುಗ ತೀರ ಅನಾವಶ್ಯಕವಾಗಿ ತನ್ನ ಮೊದಲ affair ಬಗ್ಗೆ ಎರಡನೆಯ ಗೆಳತಿಯೊಂದಿಗೆ ತುಂಬಾ ಮಾತಡಿರುತ್ತಾನೆ. ofcourse ಮೊದಲಿನ ಸಂಬಂಧವನ್ನು ಮುಚ್ಚಿಡಬೇಕೆಂದು ನಾನು ಹೇಳುತ್ತಿಲ್ಲ, ಆದರೆ ಎರಡನೆ ಸಂಬಂಧದ ಪಡಸಾಲೆಯುದ್ದಕ್ಕೂ ಮೊದಲನೆ ಸಂಬಂಧದ ನೆನಪುಗಳ ಚಾದರ ಹಾಸಬೇಕಿಲ್ಲ ಅಲ್ಲವೇ?
ಕೆಲವೊಮ್ಮೆ ಹುಡುಗಿಯರು ಮೊದಲ ಸಲ ಯಾವ ತಪ್ಪುಗಳನ್ನು ಮಾಡಿ ಒಂದು ಸಂಬಂದವನ್ನು ಕಳೆದುಕೊಂಡಿರುತ್ತಾರೋ ಅವೇ ಕಾರಣಗಳನ್ನು ಎರಡನೆಯ ಬಾರಿಯೂ ಮಾಡಿರುತ್ತಾರೆ ಹೀಗಾಗಿ ಎರಡನೆಯ ಬಾರಿಯೂ ಮೋಸ ಅವರಿಗೆ ಗೊತ್ತಿಲ್ಲದೇ ಸಲೀಸಾಗಿ ಆಗಿಬಿಟ್ಟಿರುತ್ತದೆ.
ಒಂದು ಸಲ ಮೋಸ ಹೋದೆವು ಅಂದಾದ ತಕ್ಷಣ ಪ್ರೀತಿ ಇರದಿದ್ದರೆ ನಮ್ಮಿಂದ ಬದುಕಲು ಸಾಧ್ಯವೇ ಇಲ್ಲವೇನೋ ಎಂಬಂತೆ ಎರಡನೆ ಸಂಬಂಧಕ್ಕೆ ಹಾತೊರೆಯುವುದೇ ಬಲುದೊಡ್ಡ ತಪ್ಪು.
ನಿಜ ಹೇಳುವುದಾದ್ರೆ ಮೊದಲ ಮೋಸ ನಮಗೆ ಪಾಠ ಆಗಬೇಕು ನಮ್ಮನ್ನು ನಾವು ತಿದ್ದಿಕೊಳ್ಳಲು ಅದು ದೊಡ್ಡ ಅವಕಾಶವಾಗಿರಬೇಕು ಹುಡುಗಿಯರು "ಮೋಸ ಹೋಗಿರುವುದು ಮುಖ್ಯವಾಗಿ ನನ್ನ ದೇಹಕ್ಕೆ" ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೇಹ ಎಸ್ಟು ಬಲಹೀನವಾದದ್ದು ಅಂದರೆ ಶೀಲದ ಬಗ್ಗೆ ವಿಪರೀತವಾದ ಪ್ರಾಮುಖ್ಯತೆ ಇರುವ ಈ ಸಮಾಜದಲ್ಲಿ ಅದನ್ನು ಎರಡನೆಯ ಮೋಸಕ್ಕೆ ಒಳಪಡಿಸಬಾರದು ಎಂಬುದನ್ನು ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕು ಹಾಗೆ ಮೋಸಹೋದ ದೇಹದೊಳಗಿನ ಮನಸ್ಸನ್ನು ವ್ಯಕ್ತಿತ್ವವನ್ನು ತುಂಬಾ ಬದಲಾಯಿಸಿಕೊಳ್ಳಬೇಕು ಮೊದಲ ಸಲ ಆಗಿದ್ದು ಯಾತಕ್ಕೆ ಅಂತ ಒಬ್ಬರೇ ಕುಳಿತು ಯೋಚಿಸಬೇಕು.
ಒಬ್ಬ ಹುಡುಗಿ ಮೋಸ ಹೋದಾಗ ನನ್ನಂಥವಳನ್ನು ಮೋಸ ಮಾಡೋಕೆ ಕಾರಣವೇ ಇಲ್ಲ ಅಂದುಕೊಳ್ಳುತ್ತಲೇ ಇರುತ್ತಾಳೇ. ನಾನು ಒಳ್ಳೆಯವಳಾಗಿದ್ದರಿಂದಲೇ ಮೋಸ ಹೋದೆ ಒಳ್ಳೆಯವಳಾಗಿದ್ದೆ ತಪ್ಪಾ ಅಂತ ಅಂದುಕೊಳ್ಳುತ್ತಾಳೇ
ಎರಡು ತಪ್ಪು. ಒಳ್ಳೆಯವಳಾಗಿರುವುದಕ್ಕೂ easy ಆಗಿ ಮೋಸ ಹೋಗುವಸ್ಟು ಪೆದ್ಡಿಯಾಗಿರುವುದಕ್ಕೂ ತುಂಬಾ ವ್ಯತ್ಯಾಸವಿದೆ. ಒಳ್ಳೆಯವರು alert ಆಗಬೇಕು ಅಂತೇನಿಲ್ಲ ಮೋಸ ಹೋಗುವುದು ಒಳ್ಳೆಯತನದ ಲಕ್ಷಣವಲ್ಲ. ಅದು ದಡ್ಡರ, ಬೇಜವಾಬ್ದರಿತನವಿರುವವರ, ಬದುಕಲು ಗೊತ್ತಿಲ್ಲದ ಅಮಾಯಕರ ಲಕ್ಷಣ ಎರಡನೆಯ ಸಲ ಮೋಸ ಹೋಗುವುದಿದೆಯಲ್ಲ ಅದು stupidity.
ಮೊದಲಸಲ ಮೋಸ ಹೋಗಿದ್ದು ಯಾಕೆ ಅಂತ ಗೊತ್ತು ಮಾಡಿಕೊಂಡರೆ ಎರಡನೇ ಮೋಸ ಹೋಗುವುದು ಸಾಧ್ಯನೆ ಇಲ್ಲ.
ಮೊದಲನೆಯವನು ಕೇವಲ ದೇಹಕ್ಕೆ ಮೋಸವೆಸಾಗಿರುತ್ತಾನೆ, ಎರಡನೆಯವನು ಬದುಕಿನೊಳಕ್ಕೆ ಪ್ರವೇಶಿಸುವುದರೊಳಗೆ ಹುಡುಗಿ ತನ್ನ ಇಡೀ ವ್ಯಕ್ತಿತ್ವವನ್ನೇ ಬದಲಾಯಿಸಿಕೊಂಡು ಬಿಡಬೇಕು ಏಕಾಂದ್ರೆ ಎರಡನೆಯವನು 'ಇವಳಲ್ಲಿರುವುದು ದೇಹ ಮಾತ್ರ' ಅಂತ ಗೊತ್ತಾದ ತಕ್ಷಣ ಮತ್ತೆ ಆ ದೇಹಕ್ಕೆ ಮೊದಲಿನವನಿಗಿಂತ ಸುಲಭವಾಗಿ ಮೋಸ ಮಾಡಿ ಹೊರಟು ಹೋಗುತ್ತಾನೆ ಹಾಗೆ ಹೊರಟು ಹೋಗಲಿಕ್ಕೆ ಅವನಿಗೆ ಸಾಧ್ಯವೇ ಆಗಬಾರದು ಅಂತಹದೊಂದು ಆಕರ್ಷಕ ವ್ಯಕ್ತಿತ್ವವನ್ನು ಹುಡುಗಿ ಬೆಳೆಸಿಕೊಳ್ಳಬೇಕು ಯಾಕಂದ್ರೆ ದೇಹ ಯಾವತ್ತಿದ್ದರೂ ಗಂಡಸಿನ ಪಾಲಿಗೆ ಶಾಶ್ವತ ಆಕರ್ಷಣೆಯಲ್ಲ. ಆದರೆ “ವ್ಯಕ್ತಿತ್ವ”
ಯಾವತ್ತಿಗೂ ಮುಗಿಯದ ಆಕರ್ಷಣೆ. ಮೊದಲನೆಯವನು ಯಾಕೆ ಮೋಸ ಮಾಡಿ ಬಿಟ್ಟು ಹೋದ ಎಂದರೆ ಅವನಿಗೆ ಕೇವಲ ಹುಡುಗಿಯ ದೇಹ ಸಿಕ್ಕಿತ್ತು ಅಲ್ಲಿ ವ್ಯಕ್ತಿತ್ವವಿರಲಿಲ್ಲ, ಅವನ ಆಸಕ್ತಿ ಹಿಡಿದಿಡುವಂಥಹ ಬೇರೇನೂ ಇರಲಿಲ್ಲ. ಇದ್ದದ್ದು ಕೇವಲ ದೇಹವಾದ್ದರಿಂದ ಅದನ್ನವನು ತುಂಬಾ ದಿನ ಪ್ರೀತಿಸಲು ಸಾಧ್ಯವಾಗಲಿಲ್ಲ
ಪ್ರೀತಿಸಿದ್ದು ಸಾಕು ಎನ್ನಿಸಿದಾಗ ಎದ್ದು ಹೋದ ಆದರೆ ವ್ಯಕ್ತಿತ್ವವನ್ನು ವಂಚಿಸಿ ಹೋಗುವುದು ಸಾಧ್ಯನೇ ಇಲ್ಲ. ಎರಡನೆಯವನು ಕಾಲಿಡುವ ಹೊತ್ತಿಗೆ ಅಂತಹಾದೊಂದು ವ್ಯಕ್ತಿತ್ವ ನಿಮ್ಮದಾಗಿರಬೇಕು ನಾವು ಮಾಡಿಕೊಳ್ಳುವ ಆಣೆ ಪ್ರಾಮಣಗಳು ಆ ಕ್ಷಣಕ್ಕೆ ಅದ್ಬುತ ಅನ್ನಿಸಲುಬಹುದು ಆದರೆ ಅವೆಲ್ಲವೂ ಕೇವಲ ಬಾವುಕತೆಗೆ ಮತ್ತು ದೇಹಕ್ಕೆ ಸಂಬಂಧಪಟ್ಟ ಆಣೆ ಪ್ರಾಮಣಗಳಾಗಿರುತ್ತವೆ ಅವುಗಳನ್ನು ಮೀರಿದ್ದು ವ್ಯಕ್ತಿತ್ವ “ನಿನ್ನಂಥವಳನ್ನು dump ಮಾಡಿ ಹೋಗಲಿಕ್ಕೆ ಸಾಧ್ಯನೆ ಇಲ್ಲ” ಅಂತ ಎರಡನೆಯವನಿಗೆ ಬಲವಾಗಿ ಅನ್ನಿಸಬೇಕು ಅಂತ ವ್ಯಕ್ತಿತ್ವ ನಿಮ್ಮದಾಗಬೇಕು ಅದು ಆಗದಿದ್ದ ಪಕ್ಷದಲ್ಲಿ ದೇಹಕ್ಕೆ ವಂಚನೆ ಆಗುತ್ತಲೇ ಇರುತ್ತದೆ.
ಇದೆಲ್ಲ ಒಂದು ಕಾರಣವಾದರೆ ನಾವು ಎಂಥವರನ್ನು ಪ್ರೀತಿಸುತ್ತೇವೆ ಎಂಬುದು ಕೂಡ ವಂಚನೆಗಳಿಗೆ ಕಾರಣವಾಗುತ್ತದೆ.
ವಿವಾಹಿತ ಗಂಡಸರನ್ನು ಪ್ರೀತಿಸುವವರು, ಅನೇಕ ದುರಭ್ಯಾಸಗಳಾನಿಟ್ಟುಕೊಂಡಿರುವವರನ್ನು ಪ್ರೀತಿಸುವವರು, ನಿಷಿದ್ಧ ಸಂಬಂಧಗಳಲ್ಲಿ ಪ್ರೀತಿ ಬೆಳೆಸಿಕೊಳ್ಳುವವರು, ಯಾರೊಂದಿಗೂ ಬೇರೆಯದೇ ಗುಮ್ಮನ ಗುಸುಕಾರಂತಿರುವವರನ್ನು ಪ್ರೀತಿಸುವವರು, ಹೆಂಗಸರ ಮೇಲೆ ದ್ಯೆಹಿಕವಾಗಿ ದಬ್ಬಾಳಿಕೆ ಮಾಡುವವರನ್ನು ಪ್ರೀತಿಸುವವರು, ಫ್ಲರ್ಟ್ ಮಾಡುವುದನ್ನೇ ವೃತ್ತಿ ಮಾಡಿಕೊಂಡ ಮೇಸ್ಟ್ರುಗಳು, ವ್ಯಾಪರಸ್ತರು, ಸೇಲ್ಸ್ ಮನ್ ಗಳು, ಡ್ರೈವರ್ ಗಳು ಮುಂತಾದವರನ್ನು ಪ್ರೀತಿಸುವವರು,

ವಿಪರೀತ ಅನುಕಂಪ ಬೇಡುವವರನ್ನು ಪ್ರೀತಿಸುವವರು ಕಂಡಿತವಾಗಿ ಅಲ್ಲದಿದ್ದರೂ ಅವರು ಮೋಸ ಹೋಗುವ ಅವಕಾಶ ಜಾಸ್ತಿ.
ಒಂದು ಮೋಸ ಕೂಡ ಒಬ್ಬ ಸೂಕ್ಷ್ಮ ಸಂವೇಧನೆಗಳ ವ್ಯಕ್ತಿಗೆ ಭರಿಸುವುದು ಕಸ್ಟವೆ ಅಂತದರಲ್ಲಿ ಎರಡನೆಯ ಮೋಸಕ್ಕೆ ತಲೆಕೊಡಬೇಕೆ?
ಕೊಡದಿರಿವುದು ನಿಮ್ಮ ಕೈಯಲ್ಲಿದೆ.

Monday, October 4, 2010

ಪ್ರೀತಿಯೆಂದರೇನು?



ಹೀಗೆ ಪ್ರೀತಿಯೆಂದರೇನು, ಹುಡುಕುತ್ತಾ
ಹೊರಟೆ ಒಂದು ಸಂಜೆ,
ತುಂತುರು ಹನಿಯನ್ನು ಕೇಳಿದೆ,
ನನ್ನ ಸ್ಪರ್ಶಕ್ಕೆ ಮೈ ಅರಳಿಸಿದ ಭೂದೇವಿಯು
ಮೈ ಗಂಧ ಪಡೆವ ಪರಿಯೇ
ಪ್ರೀತಿಯೆಂದಿತು!

ನಲಿವ ಗುಲಾಬಿಯ ಕೇಳಿದೆ,
ನನ್ನ ಮಕರಂದ ಕದ್ದ ದುಂಬಿ
ನಾನೊಪ್ಪುವ ರೀತಿಯಲ್ಲೇ ಸಂತ್ಯೆಸಿ
ಸಂತೋಷಿಸುವ ಪರಿಯೆಂದಿತು.

ಪಾರ್ಕಿನ ಕತ್ತಲಲ್ಲಿ ಒತ್ತಿಕೊಂಡು ಕುಳಿತ ಪ್ರೇಮಿಗಳ ಕೇಳಿದೆ,
ಆಕೆ ಅವನ ಬಿಗಿಯಾದ ಬಾಹು ಬಂಧನವೆಂದಳು,
ಆತ ಅವಳ ಮಿದುವೆದೆಯಲ್ಲಿ ಉಸಿರು ಕಟ್ಟಿಸಿಕೊಂಡು
ನರಳುವುದೆಂದ.

ನಿಜಕ್ಕೂ ಪ್ರೀತಿಯೆಂದರೆ

ಕದಿಯುವುದು,
ಪಡೆಯುವುದು,
ಬಂಧಿಸುವುದು,
ನರಳುವುದು,

ಮತ್ತು ಉಸಿರು ಕಟ್ಟಿಸಿಕೊಳ್ಳುವುದು
ನೀವೇನಂತೀರ?

Saturday, September 18, 2010

ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

ಪ್ರತಿ ಹುಟ್ಟು ಹಬ್ಬಕ್ಕೂ ಎಲ್ಲರಿಗಿಂತ ಮೊದಲು ನಿನಗೆ ನಾನೇ wish ಮಾಡಬೇಕು ಅಂತ ಆಸೆ ಪಡ್ತಾ ಇದ್ದೋನೂ ನಾನು, ಹಾಗೆನೆ ಮಾಡ್ತಾನು ಇದ್ದೇ.
ಸೆಪ್ಟೆಂಬರ್ 18 ರ ರಾತ್ರಿ 11.59.59 ಮುಗಿಯೊದನ್ನೇ ರೆಪ್ಪೆ ಅಲುಗಾಡಿಸದೇ ಟೈಮ್ ನೋಡ್ಕೊಂಡು celebrate ಮಾಡ್ತಾ ಇದ್ದೇ, ಆದ್ರೆ ಇವತ್ತು ನಂಗೆ ಇದು ನಿನ್ನ ಮೂರನೇ ವರ್ಷದ ಹುಟ್ಟುಹಬ್ಬ. ನಾವು ಪ್ರೀತಿ ಮಾಡೋಕೆ ಶುರು ಮಾಡಿ ಅದನ್ನ ಬೇಡ ಅಂತ ಬಿಟ್ಟು ಇಲ್ಲಿಗೆ 3 ವರ್ಷ ಆಯ್ತು ಅಲ್ವಾ. ಮೊದಲನೆ ವರ್ಷ


ಅಂದ್ರೆ 2008 ಸೆಪ್ಟೆಂಬರ್ 19 ರ ರಾತ್ರಿ, ದಿನ ಮಾತಾಡೋ ರೀತಿ ಮಾತಾಡ್ತಾ ಇವತ್ತು ಏನೇನು ವಿಶೇಷ ಇದೆ ಅಂತ ಎಲ್ಲಾನೂ ಕೇಳಿದೆ ನೀನು, ನಾನು ನಂಗೆ ಗೊತ್ತಿರೋ ಅಸ್ಟು ಹೇಳಿದ್ದೆ. ಆಮೇಲೆ ನನ್ನ ಪ್ರೀತಿ ಬಗ್ಗೆ ಕೇಳಿದೆ ನನ್ನ ಎಸ್ಟು ಲವ್ ಮಾಡ್ತೀಯಾ ಅಂತ, ಆವಾಗ ನಾನು ಎಲ್ಲರ ತರ ಸಾಯೋವರೆಗೂ ಅಥವಾ ಜೀವಕ್ಕಿಂತ ಜಾಸ್ತಿ ಮಾಡ್ತೀನಿ ಅಂತ ಹೇಳದೇ ಅದರ ಬದಲು ನಿನ್ನ ನಾ ಸತ್ತ ಮೇಲೂ ಪ್ರೀತಿಸುವೆ ಅಂದಿದ್ದೆ ನೆನಪಿದೆಯಾ.
ಅದು ನಿನಗೆ ನೆನಪಿದೆಯೊ ಇಲ್ವಾ ಗೊತ್ತಿಲ್ಲ ಆದ್ರೆ ಆವಾಗ ನೀನು ಅಸ್ಟು ಪ್ರೀತಿಸೋ ಹುಡುಗಿಗೆ ಒಂದೇ ಒಂದು birthday wish ಮಾಡೋಕಾಗಲ್ವಾ date ನೆನಪು ಇಟ್ಕೊಳೋಕೆ ಆಗಲ್ವಾ ಅಂದಿದ್ದೆ. ಆ ಮಾತು ಇನ್ನೂ ನನ್ನಲ್ಲಿ ಕಣ್ಣೀರು ತರಿಸುತ್ತೆ. ನಿಂಗೊತ್ತ ಅವತ್ತು ನಿನಗಿಂತ ನಾನೇ ಬೇಜಾರ್ ಮಾಡ್ಕೊಂಡಿದ್ದು ಜಾಸ್ತಿ ಅಂತ ಆದ್ರೂ ನಾನು ನಿಂಗೆ ತುಂಬಾ hurt ಮಾಡಿದ್ದೇನೆ ಅಲ್ವಾ, ಇರಲಿ ಬಿಡು ಇವಾಗ ನಿನ್ ಮಾಡ್ತಾ ಇರೋದ್ರ ಮುಂದೆ ಅದು ಒಂದು ಹುಲ್ಲು ಕಡ್ಡಿಗೆ ಸಮ ಅಲ್ವಾ.
ಆದ್ರೂ ಅವತ್ತು ರಾತ್ರಿ ನಾನು ನಿಂಗೆ ಏನು ಗಿಫ್ಟ್ ಕೊಡೋಕಾಗಲ್ಲ ಅಂದ್ರೂ ನೀನು ಕೇಳಿದ ಗಿಫ್ಟ್ ಏನು ಹೇಳು. ನನಗೋಸ್ಕರ ಇವತ್ತಿಂದಾ ಆ ಹಾಳು ಸಿಗರೇಟು ಮತ್ತು ಕೊಡಿಯೋದನ್ನ ಬಿಟ್ ಬಿಡು ಅಂತ. ಅಲ್ಲೇ ಗೊತ್ತಾಗುತ್ತೆ ಹುಡುಗಿ ನಿನ್ ಮನಸ್ಸು ಎಂಥದ್ದು ಅಂತ ನಾನು ಏನು ಯೋಚನೆ ಮಾಡದೇ ಸತ್ಯಹರಿಶ್ಚಂದ್ರನ ತರ promise ಮಾಡ್ಬಿಟ್ಟೆ. ಅವತ್ತು ನೀ ಪಟ್ಟ ಕುಶಿನ ನಾನ್ಯಾವತ್ಛು ನೋಡೇ ಇರ್ಲಿಲ್ಲ. ಆದ್ರೆ ನನ್ನಲ್ಲಿರೋ ವೀಕ್‌ನೆಸ್ಸ್ ಈ ಹಾಳು bad habits ಅದು ನಿನ್ ಕುಶಿನ ತುಂಬಾ ದಿನ ಉಳಿಸಲಿಲ್ಲ. ಆ ಕೊರಗು ಇನ್ನೂ ಇದೆ. ನೀನು ಪ್ರತಿ ಸಲ ಅದ್ನೆ ಹೇಳ್ತಾ ಇದ್ದೇ ಕೊಟ್ಟ ಗಿಫ್ಟ್ ನೇ ವಾಪಸ್ಸು ತಗೊಂಡಲ್ಲ ಅಂತ.
ಅದ್ಕೆ ಇರಬೇಕು ಅನ್ಸುತ್ತೆ ನೀನು ನಾನು ಕೊಟ್ಟ ಎಲ್ಲ ಗಿಫ್ಟ್ ನು ವಾಪಸು ಮಾಡ್ಬಿಟ್ಟೆ. ಆದ್ರೆ ಹೃದಯ ಒಂದು ಬಿಟ್ಟು
ಆಮೇಲೆ ಎರಡನೆ ವರ್ಷ ಗೊತ್ತ 2009 Sep 18th ರಾತ್ರಿ ನಾನೇ ಅಲ್ವಾ ಫರ್ಸ್ಟ್ ಫೋನ್ ಮಾಡಿ ವಿಶ್ ಮಾಡಿದ್ದು
ಆಮೇಲೆ ಏನೇನು ನಡೀತು ಅಂತ ಸ್ವಲ್ಪ ನಂಗೆ ನೆನಪಿಲ್ಲ.
ಏನೇ ಆದ್ರೂ ಅದೆರಡಕ್ಕಿಂತ ಇವಾಗ ಸೆಲೆಬ್ರೇಟ್ ಮಾಡ್ತಾ ಇದ್ಯಲ್ಲಾ ನಿನ್ನ 21 ನೇ ವರ್ಷದ ಹುಟ್ಟುಹಬ್ಬ ನಾನು ಸಿಕ್ಕಿದ ಮೇಲೆ
3 ನೇ ವರ್ಷದ ಹುಟ್ಟುಹಬ್ಬ ಇದು ತುಂಬಾ ಮಹತ್ವದ್ದು ಅಲ್ವಾ.
ಯಾಕಂದ್ರೆ ಇವಾಗ ನನ್ನಿಂದ ನಿಂಗೆ ಯಾವುದೇ ಹಾರೈಕೆ ಬೇಡ ಅಲ್ವಾ
ಯಾವುದೇ promise ಅವಶ್ಯಕತೆ ಇಲ್ಲ ಅಲ್ವಾ. ಅದ್ಕೆ ನನ್ನಿಂದ ದೂರ ಹೋಗಿದ್ದೀಯ.
ಹೊಸ ಜಾಗ, ಹೊಸ ಜನ, ಹೊಸ ಫ್ರೆಂಡ್ಸ್, ಒಟ್ಟಿನಲ್ಲಿ ನಿನಗದು ಹೊಸ ರೀತಿಯ ಹುಟ್ಟುಹಬ್ಬ.
ಬರಿ ನಿನಗೇನೂ ನಂಗೂ ಕೂಡ ಹೊಸ ರೀತಿ ಅಲ್ವಾ.....
ಮನಸಲ್ಲಿ ಎಸ್ತೋ ಆಸೆ ಇಟ್ಕೊಂಡು,
ನನ್ ಹುಡುಗಿ ಬರ್ತ್‌ಡೇ ಹೀಗೆ ಇರಲಿ ಅಂತ ಕನಸು ಕಟ್ಟಿ ಕೊನೆಗೆ ನಿನಗೆ ಒಂದು ವಿಶ್ ಮಾಡೋಕೂ ಆಗದೆ ಇರೋ ಪರಿಸ್ಥಿತಿ
ನಿನಗೆ ನನ್ ವಿಶ್ ಮಾಡದೇ ಇದ್ರು ನಿನ್ನ ಹುಟ್ಟುಹಬ್ಬ ಚೆನ್ನಾಗೆ ಇರುತ್ತೆ. ಮತ್ತೆ ಗೊತ್ತಿದ್ರು ಯಾಕೆ ಈಸ್ಟೆಲ್ಲಾ ಹೇಳ್ತೀಯ ಅಂದ್ಕೊಬೇಡ
ಯಾಕಂದ್ರೆ ನನ್ನ ದೇಹದಲ್ಲಿ ಇರೋದು ಪ್ರೀತಿ ತುಂಬಿಕೊಂಡು ನಿನ್ನ ಪ್ರೀತಿಗೆ ಹಂಬಲಿಸುತ್ತ ಭಾವನೆಗಳ ಮೇಲೆ ನಿಂತೀರೋ ಹೃದಯ, ನಿನ್ ತರ ಕಲ್ಲು ಹೃದಯ ಅಲ್ಲ.
ನೀನು ಎಲ್ಲೇ ಇರು ಹೇಗೆ ಇರು ಯಾರನ್ನೇ ಮದುವೆ ಮಾಡ್ಕೋ ನಿನ್ನ ಪ್ರತಿ ಹುಟ್ಟುಹಬ್ಬಕ್ಕೆ ನಾನೇ ಫರ್ಸ್ಟ್ ವಿಶ್ ಮಾಡೋದು
ಅದು ಹೇಗೆ ಅಂತ ನಿನ್ ಮನಸನ್ನ ಕೇಳ್ಕೋ
“ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. “

Sunday, September 12, 2010

ಎಲ್ಲೇ ಇದ್ದರು ನಗು ನಗುತ ಇರು.

ಯಾಕೋ ಏನೋ ನಿನ್ನ ಸ್ವಲ್ಪನಾದ್ರೂ ಮರೀಬೇಕು ಅಂತ try ಮಾಡಿದ್ರೂ
ನಿನ್ನ ನೆನಪೇ ಜಾಸ್ತಿ ಆಗುತ್ತೆ
ನಾನೇನಾದ್ರೂ ಹಾಗೆ ನಿನ್ನ ಪೂರ್ತಿಯಾಗಿ ಮರೆತರೆ ಒಂದಲ್ಲ ಒಂದು ದಿನ ಬಂದು
ನನ್ನ ಮುಂದೆ ನಿಂತು ಕೇಳ್ತೀಯಾ ಅಲ್ವಾ "ಸತ್ತ ಮೇಲೂ ನಿನ್ನ ನಾ ಪ್ರೀತಿಸ್ತೀನಿ" ಅಂತ ಹೇಳ್ತಾ ಇದ್ಯಲ್ಲಾ,
ಮತ್ತೆ ಯಾಕೆ ನನ್ನ ಮರೆತೆಬಿಟ್ಟೆ ಅಂತ.
ಆಗ ಹೇಳೋಕೆ ಏನು ಇರುತ್ತೆ, ನಾನು ನಿನ್ ಥರಾನೆ ಎಲ್ಲ ಮುಗಿದು ಹೋದ ಕಥೆ.
ಇನ್ಮೇಲೆ ನನಗು ನಿನಗೂ ಯಾವ ಸಂಬಂಧ ಇಲ್ಲ ಅಂತ ಹೇಳಿಬಿಡ್ಲಾ.
ಅಥವಾ ನೀನು ಮೋಸ ಮಾಡಿ ಬಿಟ್ಟು ಹೋದ ಹುಡುಗಿ ನಿನ್ನ ನೆನಪಿನ ಅವಶ್ಯಕತೆ ಇಲ್ಲ ಅಂತ ಹೇಳಲಾ.
ಇಲ್ಲ, ನಾನು ಒಬ್ಬ ಸಾಧಾರಣ ಹುಡುಗ ನಂಗೂ ಮನಸ್ಸಿದೆ ಅದಕ್ಕೂ ಪ್ರೀತಿ ಬೇಕು ಅನ್ನಿಸುತ್ತೆ,
ನಿಂಗಿಂತ ಜಾಸ್ತಿ ಪ್ರೀತಿ ಕೊಡೋ ಹುಡುಗಿ ಸಿಗಬಹುದು ಮತ್ಯಾಕೆ ನಿನ್ನ ನೆನಪು ಅಂತ ಹೇಳಲಾ.

ಆ ರೀತಿ ಹೇಳೋದು ಸುಲಭ ಆದ್ರೆ ಮರೆಯೋದೇ ಕಸ್ಟ.
ಅದು ಎಲ್ಲರಿಗೂ ಹಾಗೆ ಅಂತ ನಾನ್ ಹೇಳ್ತಾ ಇಲ್ಲ ಪ್ರೀತಿಸಿ ಮದುವೆ ಆಗಿ ಹತ್ತು ಇಪ್ಪತ್ತು ವರ್ಷ
ಆದ್ಮೇಲೂ ಗಂಡ ಹೆಂಡತಿ ಡೈವೋರ್ಸ್ ಮಾಡ್ಕೊಂಡು, ಮತ್ತೆ ಹೊಸ ಜೋಡಿ ಹುಡುಕೋ ಕೆಲಸ ಮಾಡ್ತಾರೆ.
ಆದ್ರೆ ನನ್ ಪಾಲಿಗೆ ನೀನು ಸಿಕ್ಕಿದ್ದು ಕೇವಲ ಎರಡು
ವರ್ಷ ಆದ್ರೂ ನಾನು ನಿನ್ನ ನನ್ನ ಜನುಮ ಜನುಮದ ಪ್ರೇಯಸಿ ಅಂತ ಡಿಸೈಡ್ ಮಾಡಿದ್ದೀನಿ.
ನಂಗೊತ್ತು ನೀನು ಈ ಜನ್ಮದಲ್ಲಿ ಸಿಗಲ್ಲ ಅಂತ ಆದ್ರೂ ನೀನೆ ಹೇಳಿದ್ದೀಯಲ್ಲ ಮುಂದಿನ ಜನ್ಮ
ಅಂತ ಇದ್ರೆ ನಾವೀಬ್ರೂ ಒಂದಾಗೋಣ ಅಂತ ಅಸ್ಟೆ ಸಾಕು ನಂಗೆ.
ಆಮೇಲೆ ನಾನು ಯಾಕೆ ನಿನ್ನ ಮರೆಯೋಕೆ ಆಗಲ್ಲ ಅಂತ ಹೇಳಿದೆ ಗೊತ್ತ?,
ನೋಡೋಕೆ ತುಂಬಾ ಸುಂದರವಾಗಿದ್ದೀಯ ಮದ್ವೆ ಆದ್ರೆ ನಿನ್ನನ್ನೇ ಮದುವೆ ಆಗ್ಬೇಕು ಅಂತ ಅಲ್ಲಾ.
ಅದು ನಿನಗೂ ಗೊತ್ತು ನಾವೀಬ್ರೂ ಲವ್ ಮಾಡೋವಾಗ ಒಬ್ಬರನ್ನೊಬ್ಬರು ನೋಡೇ ಇರ್ಲಿಲ್ಲ ಅಂತ.
ನೀನು ನನ್ನ ನೋಡಿದ್ಮೇಲೆ ಏನಪ್ಪಾ ತುಂಬಾ ಬ್ಲ್ಯಾಕ್ ಇದ್ದಾನೆ ತುಂಬಾ ಬ್ಯಾಡ್ ಹ್ಯಾಬಿಟ್ಸ್ ಇದೆ ಅಂತ
ನಿನ್ ಪ್ರೀತಿನ ಕಡಿಮೆ ಮಾಡ್ಲಿಲ್ಲ. ನಾನು ಹಾಗೆ ಕಣೇ. ನಿನ್ನ ಜಾಗದಲ್ಲಿ ಬೇರೆ ಯಾವ ಹುಡುಗಿ
ಹೇಗೆ ಇದ್ದರು ಪ್ರೀತಿಗೆ ಮೋಸ ಮಾಡ್ತಾ ಇರ್ಲಿಲ್ಲ.
ಮತ್ತೆ, ನಾನು ನಿನ್ನ ಜಾಸ್ತಿ ಲವ್ ಮಾಡ್ತಾ ಇದ್ದೀನಿ ಅಂತಾನೂ ನಿನ್ನ ಮರೆಯೋಕೆ ಆಗಲ್ಲ ಅಂತ ಹೇಳಲಿಲ್ಲ.
ನಿನ್ನ ಮರೆಯದೇ ಇರೋದಕ್ಕೆ ಇರೋ ಒಂದೇ ಒಂದು ಕಾರಣ ಅಂದ್ರೆ ಅದು

ನೀನು ಕೊಟ್ಟ ಪ್ರೀತಿ.
ನೀ ಕೊಟ್ಟ ಪ್ರೀತಿಗೆ ನಾನು ಏನು ಕೊಟ್ಟರು ಕಡಿಮೆನೆ ಅಲ್ವಾ....
ಅದ್ಕೆ ಆ ಪ್ರೀತಿನ ಜೀವನ ಪೂರ್ತಿ ನೆನಪಿಟ್ಟ್ಕೋತೇನೆ. ಆ ನೆನಪಿನಿಂದ ನಿನ್ನ ನೋಡ್ತೆನೆ, ನಿನ್ ಜೊತೆ ಮಾತಾಡ್ತೆನೆ,
ಅದು ನಂಗೆ ಮಾತ್ರ ಕುಶಿ ಕೊಡುತ್ತೆ ಆದ್ರೆ ಅದೇ ನೆನಪು ನಿನ್ನ ನೋಹಿಸುತ್ತೆ. ಎಲ್ಲವನ್ನು ಮರೆತು ಹೊಸ ಜೀವನ
ಶುರು ಮಾಡೋ ಆತುರದಲ್ಲಿ ಒಂದು ಪುಟ್ಟ ಮನಸ್ಸಿನ ಯೋಚನೆ ಯಾಕೆ ನಿನಗೆ ಮರೆತು ಬಿಡು.
ಆ ಹೃದಯ ಎಲ್ಲೇ ಇದ್ದರು ನಿನ್ನ
ಪ್ರೀತಿ ಮಾಡ್ತಾನೆ ಇರುತ್ತೆ ಅಂತ ಮಾತ್ರ ನೆನಪು ಇಟ್ಕೋ.
ನಾನು ಸ್ವಲ್ಪ ಜಾಸ್ತಿನೆ ಭಾವಜೀವಿ ನಂಗೆ ಯಾವುದನ್ನು ಅಸ್ಟು ಸುಲಭವಾಗಿ ಮರೆಯೋದಿಲ್ಲ.
ನನ್ನ ಹತ್ತಿರಕ್ಕೆ ಬಂದ ಏನೇ ವಸ್ತು ಆದ್ರೂ ತುಂಬಾ ಹಚ್ಚಿಕೊಂಡು ಬಿಡ್ತೆನೆ ಅದ್ಕೆ ಮತ್ತೆ ಕಳ್ಕೊಂಡ್ರೇ
ತುಂಬಾ ನೋವು ಅನುಭವಿಸ್ತೇನೆ ಅದು ಫ್ರೆಂಡ್ಸ್ ಆಗಿರಲಿ ಅಥವಾ ನಾನು ಉಪಯೋಗಿಸುವ ಯಾವುದೇ
ವಸ್ತು ಆಗಿರಲಿ ನನ್ನ ಮತ್ತು ಅದರ ನಡುವೆ ಒಂದು ಅವಿನಾಭಾವ ಸಂಬಂದ ಇರುತ್ತೆ.
ಅದು ನಾನು ಬರೆಯೋ ಪೆನ್ನು ಆಗಿರಬಹುದು ತಲೆ ಬಾಚೋ ಕೋಮು ಆಗಿರಬಹುದು,
ಎರಡು ರೂಪಾಯಿ ಕೊಟ್ಟರೆ ಹೊಸದೆ ಸಿಗಬಹುದು
ಆದ್ರೆ ಆ ಸಂಬಂದ ಮತ್ತೆ ಸಿಗಲ್ಲ. ಅದ್ಕೆ ನಾನು ಏನನ್ನು ಕಳ್ಕೊಳ್ಳೋದಕ್ಕೆ ಈಸ್ಟಾ ಪಡಲ್ಲ
ಎಸ್ಟೇ ಕಸ್ಟ ಆದ್ರೂ ಹುಡುಕ್ತೇನೆ. ಆದ್ರೆ ನನ್ನ ಲೈಫ್ ಪಾರ್ಟ್ನರ್ ನ ನಾನು ಕಳ್ಕೊಂಡುಬಿಟ್ಟೆ.

ನನ್ನ ಪ್ರೀತಿ ಮಾಡಿ ಬಿಟ್ಟು ಹೋದ ಹುಡುಗಿಗೆ ನಾನು ಆಶಿಸುವುದು ಎಲ್ಲೇ ಇದ್ದರು ನಗು ನಗುತ ಇರು ಅಂತ ಅಸ್ಟೆ.
ಅದಕ್ಕಿಂತ ಜಾಸ್ತಿ ಏನೇ ಕೊಟ್ಟರು ಅದು ನಿನಗೆ ಬೇಡವಾದ ವಸ್ತು.
ನಿನಗೆ ಜೀವನದ ಕೊನೆಯಲ್ಲಾದರೂ ನನ್ನ ನೆನಪು ಆದ್ರೆ ನೋಡೋಕೆ ದಯವಿಟ್ಟು ಬರಬೇಡ. ಯಾಕಂದ್ರೆ
ನಿನ್ನ ನೋಡದೇ ನಿನ್ನ ನೆನಪಿನಲ್ಲೇ ಹೇಗೋ ಜೀವನ ಕಳಿತ ಇರ್ತೇನೆ. ಮತ್ತೆ ನಿನ್ನ ನೋಡಿದ್ರೆ ನಾನು ಬದುಕೋದೇ ಕಸ್ಟ.
ನಿನಗೆ ದಿನ ಬೆಳಗ್ಗೆ ಎದ್ದ ಮೇಲೆ ನನ್ನ wake up ಮಾಡೋ ಹಾಗೆ ಬೇರೆ ಹುಡುಗನಾ ಎಳಿಸಬಹುದು,
ಅಲ್ಲಿಂದ ರಾತ್ರಿ ಜೋ ಜೋ ಹಾಡೀ ಮಲಗುವವರೆಗೂ ನಿನ್ನ ಬೆಟ್ಟದಸ್ತು
ಪ್ರೀತಿನಾ ಕೊಡಬಹುದು. ಆದ್ರೆ ನಂಗೆ ಇನ್ಮೇಲೆ ಅದೆಲ್ಲ ಸವಿನೆನಪು
ಅಸ್ಟೆ ಅಲ್ಲ ನಾನು ಸಾಯೋವರೆಗೂ ಜೋಪಾನ ಮಾಡ್‌ಬೆಕಾದ ಅಸ್ತಿ ಅದು.

Friday, July 9, 2010

ಪ್ರೀತಿಯ ಗೆಳತಿಗೆ ಕೊನೆಯ ಪ್ರೇಮ ಪತ್ರ

ಜೀವನದ ಪಯಣದಲಿ ಯಾವುದೋ ಒಂದು ನಿಲ್ದಾಣದಲಿ ಸಿಕ್ಕವಳು ನೀನು. ಸಿಕ್ಕ ಹಾಗೇ ಇಳಿದು ಹೋಗುವೆ ಅಂತ ನನಗೆ ಗೊತ್ತಿರಲಿಲ್ಲ. ಆದರೂ ಇಳಿದುಹೋಗುತ್ತಿರುವೆ, ಆದರೆ ನೀನು ಉಳಿಸಿಹೋದ ನೆನಪುಗಳು, ಕೆರಳಿಸಿಹೋದ ಭಾವನೆಗಳು ನನ್ನ ಸುಮ್ಮನೇ ಬಿಟ್ಟಾವೇ..!! No chance. ನೀನು ಮದುವೆಯ ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗುವೆ ಎಂದು ತಿಳಿದಾಗಿನಿಂದ, ನಾನು ನಾನಾಗಿಲ್ಲ. ಬಾಲ್ಯದಲ್ಲಿ ತಾಯಿಯನ್ನು ಬಿಟ್ಟು ಶಾಲೆಗೆ ಹೋಗಲಾರದೇ ಅಳುವ ಕಂದನ ಹಾಗೇ, ತುಂಬಾ ಜತನದಿಂದ ಕಾಪಾಡಿಕೊಂಡಿದ್ದ ವಸ್ತು ಕಳೆದುಹೋದಾಗ ಆಗುವ ಯಾತನೆಯ ಹಾಗೇ, ಅನುಭವಿಸಲೂ ಆಗದೇ, ಮರೆಯಲೂ ಆಗದೇ ಒದ್ದಾಡುತ್ತಿರುವ ನನ್ನ ಮನದ ಅಳು ನೀನೋಮ್ಮೆ ಕೇಳಬೇಕು ಕಣೇ. ಆ ಅಳು ನಿನಗೆ ಅಳು ತರಿಸದೆ ಇರಬಹುದು, ನನ್ನ ಬಗ್ಗೆ ಪ್ರೀತಿ ಹೆಚ್ಚಿಸದೇ ಹೋಗಬಹುದು ಆದರೆ ಖಂಡಿತ ನನ್ನ ಪ್ರೀತಿಯ ಆಳ ನಿನಗೆ ತಿಳಿಸಿಯೇ ತಿಳಿಸುತ್ತೆ.

ನನ್ನ ಬದುಕಿನೊಳಗೆ ನೀ ಬಂದ ಘಳಿಗೆ ನನಗರಿವಿರಲಿಲ್ಲ , ನೀನು ನನ್ನ ಉಸಿರಾಗುವೆ ಎಂದು. ಅಕಾಲದಲ್ಲಿ ಮಳೆ ಬಂದ ಹಾಗೆ ನಿರೀಕ್ಷೆಯೇ ಇಲ್ಲದ ಹೊತ್ತಲಿ ನೀನು ನನ್ನ ಬದುಕೊಳಗೆ ಸಲೀಸಾಗಿ ನಡೆದುಬಂದೆ, ಅಲ್ಲಿವರೆಗೂ ಸಲೀಸಾಗಿದ್ದ ನನ್ನ ಬದುಕು ನಿನ್ನ ನೆನಪಲಿ ಮತ್ತೊಂದು ಮಜಲಿಗೆ ಮಗ್ಗಲು ಬದಲಾಯಿಸಿಬಿಟ್ಟಿತು. ಅಲ್ಲಿಂದ ನಮ್ಮಿಬ್ಬರ ನಡುವೆ ಸಾಗಿದ್ದು ಬರೀ ಮಾತು ಮತ್ತು ಪ್ರೇಮದ ಗಮ್ಮತ್ತು. ಇವತ್ತಿಗೂ ನನಗೆ ಆಶ್ಚರ್ಯವಾಗೋದು ಯಾಕೆ ಗೊತ್ತಾ..? ಇದುವರೆಗೂ ನನ್ನ ನಿನ್ನ ಪ್ರೇಮಗೀತೆಯಲಿ ಒಂದೇ ಒಂದು ಅಪಸ್ವರವೇಳದಿರುವುದು! ಸಾಮಾನ್ಯವಾಗಿ ಎಲ್ಲ ಪ್ರೇಮಿಗಳ ಮಧ್ಯೆ ಬರೋ ವಿಲನ್ಸ್ ಗಳಾಗಲೀ, ಆಸ್ತಿ-ಅಂತಸ್ತಾಗಲಿ, ಮತ್ತೂ ಉತ್ತಮ ಸಂಗಾತಿ ಸಿಗಬಹುದಿತ್ತು ಎಂಬಂತಹ ಯೋಚನೆಯಾಗಲಿ, ನಮ್ಮೀರ್ವರ ನಡುವೆ ಬಾರದಿರುವುದು!! ಎಂತಹ ಅನ್ಯೋನ್ಯವಾಗಿತ್ತು ಅಲ್ವಾ ನಮ್ಮ ಪ್ರೇಮ?

ಬಹುಶಃ ದೇವರಿಗೆ ಅದೇ ಕಾರಣಕ್ಕೆ ನಮ್ಮ ಮೇಲೆ ಕಿಬ್ಬೊಟ್ಟೆಯ ಸಂಕಟ ಎದುರಾದ ಹಾಗೆ ಆಗಿದೆ. ಅಪಸ್ವರವಿಲ್ಲದ ನಮ್ಮ ಪ್ರೇಮಗೀತೆಗೆ ವಿರಹದ ಚರಣ ಬರೆಯಲು ಹೊರಟಿದ್ದಾನೆ. ಜಾತಿ, ತಂದೆ, ತಾಯಿ ಮತ್ತು ನಮಗೇನು ಮಾಡದ, ಆದರೆ ನಮ್ಮಿಂದ ಎಲ್ಲಾ ಪಡೆಯುವ ಸಮಾಜ ಸನಿಹವಾಯಿತು, ಮದುವೆಮಾತು ದೂರಾವಾಗುವ ಹಾಗಾಯಿತು, ಪ್ರೀತಿಗಾಗಿ ಅಳುವ ಹೃದಯಗಳ ಮೇಲೆ ಜವಾಬ್ದಾರಿಗಳ ಸವಾರಿ. ಎಲ್ಲಾ ವಿಧಿ ಲೀಲೆ..! ನಡೆಯಲಿ ಬಿಡು. ನಿನ್ನ ನೆರಳಾಗುವ ಬಯಕೆಯಲ್ಲಿ ನಿನ್ನ ಗೆಳೆಯನಾಗಿ, ನಿನಗೇನೂ ಆಗದೇ, ತಲೆಯೇರಿ ನಿಂತ ಸೂರ್ಯನ ವರಸೆಗೆ ನನ್ನ ನೆರಳು ನಿನ್ನ ಪಾದ ಸೇರಿಹೋಯಿತಲ್ಲ..!! ಆಗಲೇ ನಾನು ತಟಸ್ಥನಾಗಿಬಿಟ್ಟೆ ಕಣೇ. ನಿನ್ನ ಮರೆಯಲಾರದೇ, ನೀನಿಲ್ಲದೇ ಬದುಕುವುದ ತಿಳಿಯಲಾರದೇ , ಬಾನಿನಾಚೆ ಶೂನ್ಯದ ಕಡೆ ದೃಷ್ಠಿ ನೆಟ್ಟು ಬದುಕಿಗೆ ಭಾರವಾಗಿಬಿಟ್ಟೆ.

ಈಗಲೂ ನಾವು ಮದುವೆಯಾಗೋಣವಾ..? ಎಂದು ನಿನ್ನ ಕೇಳುವಾಸೆ, ಆದರೆ ಅದಾಗದು ಎಂಬುದು ವಾಸ್ತವ. ಇನ್ನು ಮುಂದೆ ನಾನು ತೀರಾ ಒಬ್ಬಂಟಿ. ಆದರೆ ನನ್ನ ಕಾಡಿದಷ್ಟು ನಿನ್ನ ಕಾಡದು ಈ ಒಬ್ಬಂಟಿತನ ಅಲ್ಲವಾ..? ನೀನಾದರೋ ಇನ್ನು ಮುಂದೆ ಸದಾ ಜೊತೆ ಜೊತೆ. ನವದಾಂಪತ್ಯ, ನವೋಲ್ಲಾಸಗಳ ಮಧ್ಯೆ ನನ್ನ ನೆನಪು ನಿನ್ನ ಕಾಡದಿರಬಹುದು. ಕಾಡದಿರಲಿ ಅಂತ ದೇವರಲ್ಲಿ ಬೇಡುವುದೇ ನಾ ನಿನಗೆ ಕೊಡುವ 'ಒಲವಿನ ಉಡುಗೊರೆ'.

Friday, January 22, 2010

ಕೊನೆಯ ಮಾತು




ಪ್ರೀತಿಯ ಗೆಳೆಯ ಗೆಳತಿಯರೇ ಇದು ನಾನು ಇದುವರೆಗೂ ನನ್ನ ಪ್ರೀತಿಯ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗುವ ಸಮಯ, ಜೀವಕ್ಕೆ ಜೀವ ಕೊಡುತ್ತೇನೆ ಎಂದ ಹುಡುಗಿ ಸಣ್ಣ ಮನಸ್ತಾಪಕ್ಕೆ ನನ್ನ ಪ್ರೀತಿಯನ್ನೇ ದಿಕ್ಕರಿಸಿ ನಡೆದು ಹೋದ ದಿನ. ಆ ನಿರ್ದಾರದಲ್ಲಿ ಅವಳಿಗಿಂತ ಅವಳ ಸ್ನೇಹಿತೇಯರ ಪ್ರಭಾವವೇ ಹೆಚ್ಚು.

ಜೀವನಪೂರ್ತೀ ಆಸರೆಯಾಗುವೆ, ಉಸಿರು ನಿಂತರು ನಿನ್ನ ಮರೆಯಲಾರೆ ಅಂದ ಹುಡುಗಿ ಇದ್ದಕಿದ್ದಂತೆ ನಡೆದು ಹೋದದ್ದಕ್ಕೆ ಕಾರಣ ಮಾತ್ರ ಚಿಕ್ಕದು.
ಹುಡುಗಿಯರಿಗೆ ಕಣ್ಣೀರು ಜಾಸ್ತಿ ಬರುತ್ತೆ ಯಾಕೆ ಗೊತ್ತ? ಹುಡುಗರನ್ನ ನಂಬಿಸೋದಕ್ಕೆ ಅಸ್ಟೆ. ಅಲ್ಲಿ ನಿಜವಾದ ಪ್ರೀತಿ ಇರೋದಿಲ್ಲ, ಇದ್ದರು ಅದು ಕ್ಷಣಿಕ.
ಒಂದು ಹುಡುಗಿ ಒಂದೇ ಹುಡುಗನನ್ನ ಜೀವನಪೂರ್ತಿ ಪ್ರೀತಿಸೋ ಕಾಲ ಈಗಿಲ್ಲ ಆದ್ರೆ ಆ ರೀತಿ ಹುಡುಗರು ಇನ್ನೂ ಇದ್ದಾರೆ ಅಂತ ಅವರಿಗೆ ಗೊತ್ತಿಲ್ಲ.
ಅವ್ರಿಗೆ ನಿಜವಾದ ಪ್ರೀತಿಯ ಅರಿವಿಲ್ಲ.
ಹುಡುಗರ ಮನಸ್ಸಿನ ನೋವು ತಿಳಿಯೋದಿಲ್ಲ,
ಹುಡುಗರಿಗೆ ಇರುವ ತಾಳ್ಮೆ ಇರೋದಿಲ್ಲ,
ಮರೆಯೋದು ಅಂದ್ರೆ ತುಂಬಾ ಸುಲಭ,
ಅವರ ಪ್ರಕಾರ ಪ್ರೀತಿ ಅಂದ್ರೆ ಟೈಮ್ ಪಾಸ್,
ಪ್ರೀತಿ ಅಂದ್ರೆ ತಿಂದು ಬಿಸಾಕೋ ಎಲೆ ಇದ್ದ ಹಾಗೆ,
ಬದಲಿಸೋ ಬಟ್ಟೆ ಇದ್ದ ಹಾಗೆ,

ಈ ಹುಡುಗಿಯರಿಂದ ಮೋಸ ಹೋದವರು ಸಾವಿರಾರು ಅದರಲ್ಲಿ ನಾನು ಒಬ್ಬ,
ಪ್ರೀತಿಗಾಗಿ ಎಲ್ಲವನ್ನು ಕಳೆದುಕೊಂಡೆ ಈಗ ಆ ಪ್ರೀತಿಯೇ ನನ್ನ ದೂರ ತಳ್ಳಿದೆ,
ಅವಳಿಗೆ ನನ್ನ ಮನಸು ಬೇಡ, ನನ್ನ ಪ್ರೀತಿ ಬೇಡ, ಆ ಸುಮಧುರ ನೆನಪು ಬೇಡ,
ನನ್ನನ್ನ ಪೂರ್ತಿಯಾಗಿ ಮರೆತು ನನ್ನ ಅಣಕಿಸುತ್ತಿರುವ ನನ್ನ ಪ್ರೀತಿಯ ಹುಡುಗಿಗೆ ಜೀವನದಲ್ಲಿ ಕೊನೆಯದಾಗಿ
ಒಂದು ಪತ್ರ ಬರೆಯಬೇಕೆಂದಿದ್ದೇನೆ.
ಸದ್ಯದಲ್ಲೇ ಇಲ್ಲಿ ನಿಮ್ಮ ಜೊತೆ ನನ್ನ ಭಾವನೆಯನ್ನು ಹಂಚಿಕೊಳ್ಳುತ್ತೇನೆ.

ಮತ್ತು ಇಲ್ಲಿ ಹೇಳಿರುವ ಮಾತುಗಳು ಕೆಲವು ಹುಡುಗಿಯರಿಗೆ ಮಾತ್ರ ಅನ್ವಹಿಸುತ್ತವೆ.
ನನಗೆ ಎಲ್ಲ ಹುಡುಗಿಯರ ಬಗ್ಗೆ ಗೌರವ ಇದೆ ಪ್ರೀತಿಗೆ ಮೋಸ ಮಾಡಿದ ಹುಡುಗಿಯರನ್ನು ಹೊರತುಪಡಿಸಿ,
ನಾನು ಪ್ರೀತಿ ಮಾಡಿದ ಹುಡುಗಿ ನನ್ನನ್ನು ಮರೆತಿರಬಹುದು ನನ್ನ ಪ್ರೀತಿ ಅವಳಿಗೆ ಬೇಡವಾಗಿರಬಹುದು ಆದ್ರೆ ನನ್ನ ಪ್ರೀತಿ ಯಾವಾಗಲು ಶಾಶ್ವಥ
ಅದಕ್ಕೆ ಎಂದು ಸಾವಿಲ್ಲ, ನನ್ನ ಪ್ರೀತಿನ ನಾನೇ ಪ್ರೀತಿಸ್ತೇನೆ.
YES I REALLY LOVE MY FEELINGS,
I LOVE MY FEELINGS,
I LIKE MY FEELINGS,
I LIVE WITH MY FEELINGS.

ಗೆಳೆಯರೇ ಇಂದು ನನ್ನ ಹುಡುಗಿಯ ಎಲ್ಲ ಫೋಟೋಗಳನ್ನು ಅವಳಿಗೋಸ್ಕರ ಅಲ್ಲದಿದ್ದರೂ ಅವಳ ಪ್ರಾಣ ಸ್ನೆಹಿತೆಗೊಸ್ಕರ ತೆಗೆಯುತ್ತಿದ್ದೇನೆ.



Wednesday, January 20, 2010

ಹೊರಡುವ ಸಡಗರ

ಹೊರಡುವ ಸಡಗರ





ನನ್ನ ಪ್ರೀತಿಯ ಸ್ನೇಹ ಹೋಗಲೇ ಬೇಕು ಅನ್ನುವ ನಿನ್ನ ಸಡಗರಕ್ಕೆ ನಾನು ಅಡ್ಡ ಬರುವುದಿಲ್ಲ. ಬಿಟ್ಟು ಹೊರಡುತ್ತಿರುವುದಕ್ಕೆ ಕಾರಣವನ್ನೂ ಕೇಳುತ್ತಿಲ್ಲ. ಮತ್ತೆ ನಿನಗೆ ಪತ್ರ ಬರೆಯುತ್ತೇನೋ ಇಲ್ಲವೋ? ಗುಂಡಗಿರುವ ಭೂಮಿ ಎಷ್ಟೇ ಚಿಕ್ಕದು ಅಂದುಕೊಂಡರೂ ಮತ್ತೆ ಭೇಟಿಯಾಗುತ್ತೇವೋ ಇಲ್ಲವೋ ; ಅದೇ ಹಳೆಯ ಮಮತೆಯಿಂದ. ಆಡುವ ಮಾತು ಕೊನೆಯವೇ ಆದರೂ ನಾಲ್ಕು ಘಳಿಗೆ ಕೂತು ಮಾತನಾಡಿ ಬಿಡೋಣ. ಹೀಗೆ ಬಾ, ಎದುರಿಗೆ ಕುಳಿತುಕೋ.


ಒಂದು ಮಾತು ಹೇಳುತ್ತೇನೆ ಕೇಳು. ಒಂದೂವರೆ ವರ್ಷವೆಂಬುದು ಸುಮ್ಮನೆ ಸರಿದು ಹೋದ ಕಾಲವಲ್ಲ. ಐದು ನೂರಾ ನಲವತ್ತೇಳು ದಿನಗಳ ಒಟ್ಟು ಮೊತ್ತ. ನೀನು ಬದುಕಲಿರುವ ಸಂಪೂರ್ಣ ನೂರು ವರ್ಷಗಳ ಜೀವಿತಾವಧಿಯಲ್ಲಿ ಈ ಒಂದೂವರೆ ವರ್ಷಗಳದ್ದು ನಿನ್ನ ಮಟ್ಟಿಗೆ ಚಿಕ್ಕ ಮೊತ್ತವೇ ಇರಬಹುದು. ಆದರೆ ನನ್ನ ಪಾಲಿಗೆ ಅದು ಸಾವಿರಾರು ಸೂರ್ಯೋದಯ-ಸೂರ್ಯಾಸ್ತಗಳ ಮಹಾ ಸಂಭ್ರಮ. ಪ್ರತಿ ಮುಂಜಾವೂ ನನ್ನ ಪಾಲಿಗೆ ಹೊಸ ವಸಂತ.

ನಿನ್ನ ನೆನಪಿನ ಗೆಜ್ಜೆ ಕಟ್ಟಿಕೊಂಡೇ ಏಳುತ್ತಿದ್ದೆ. ಇವತ್ತು ಅವಳು ಸಿಗುತ್ತಾಳೆ. ಹೀಗೆ ಮಾತಾಡ್ತಾಳೆ. ಮೃದುವಾಗಿ ನಗುತ್ತಾಳೆ. ಪುಟ್ಟ ಪತ್ರ ಬರೆದುಕೊಂಡು ಬಂದಿರುತ್ತಾಳೆ. ತುಟಿಯ ತಿರುವಿನಲ್ಲಿ ಯಾಕೋ ಸಣ್ಣ ಮುನಿಸು. ನಂಗೊತ್ತು ಅಂಥದ್ದೇನೂ ನಾನು ಮಾಡಿಲ್ಲ. ಆದರೂ ನನ್ನ ಹುಡುಗಿ ಸುಮ್ಮ ಸುಮ್ಮನೆ ಅನುಮಾನಿಸುತ್ತಾಳೆ. ಅನುಮಾನವೆಂದರೆ ಅದು ಅನುಮಾನವೂ ಅಲ್ಲ. ಚಿಕ್ಕ ಅಸಹನೆ. ನಾನು ಯಾರೊಂದಿಗೂ ಮಾತನಾಡಬಾರದು. ಹುಡುಗಿಯರ ಮಾತು ಹಾಗಿರಲಿ, ಗೆಳೆಯರೊಂದಿಗೂ ತುಂಬ ಹೊತ್ತು ಮಾತಾಡಬಾರದು. 'ಅವರೊಂದಿಗೆ ಕುಳಿತು ಹರಟುವ ಅಷ್ಟು ನಿಮಿಷದ ಹೊತ್ತು ನನ್ನ ಮರೆತು ಬಿಟ್ಟಿರುತ್ತೀಯಲ್ಲ' ಅಂತ ಜಗಳ ತೆಗೆಯುತ್ತಾಳೆ. ಹೇಗೆ ಹೇಳಲಿ ಈ ಹುಡುಗಿಗೆ? ನನ್ನ ಪ್ರತಿ ಉಸುರಿನಲ್ಲೂ ನೀನಿದ್ದೀಯ. ನನ್ನ ಪ್ರತಿ ಕದಲಿಕೆ ನಿನ್ನ ಅಣತಿ. ನೀನಿಲ್ಲದೆ ನನ್ನ ಅಸ್ತಿತ್ವವಿಲ್ಲ. I am only yours. ಹಾಗಂತ ನನ್ನ ಮನಸ್ಸಿಗೆ ಪದೇಪದೆ ಹೇಳಿಕೊಂಡು ನಿನ್ನ ಬಳಿಗೆ ಬಂದರೆ, ನೀನು ಅದೆಲ್ಲ ಮರೆತು ಹೋಗುವಂತೆ ಇಷ್ಟಗಲ ನಗೆಯಾಗುತ್ತಿದ್ದೆ, ಸೂರ್ಯಕಾಂತಿ ಹೂವಿನ ಹಾಗೆ.

ಮೊದಲಿನಿಂದಲೂ ಅಷ್ಟೆ. ನಿನ್ನ ವರ್ತನೆ ಹೀಗೇ ಇರುತ್ತದೆ ಅನ್ನುವ ಹಾಗಿರಲಿಲ್ಲ. ಒಮ್ಮೆ ಪ್ರೀತಿಯ ಹೂಬಿಸಿಲು, ಮತ್ತೊಮ್ಮೆ ಚೆಲುವಿನ ಬೆಳದಿಂಗಳು, ಒಮ್ಮೆ ಬೇಸರದ ಕಡುಮೋಡ, ಇನ್ನೊಮ್ಮೆ ದಿವ್ಯನಗೆಯ ಧರೆದೀಪ, ಹುಚ್ಚು ಹೊಳೆಯಂತಹ ಅಪ್ಪುಗೆ, ಮೆದೆಯಲ್ಲಿ ಬಿದ್ದು ಉರುಳಿದ ಸುಸ್ತು. ಇದ್ದ ಒಂದೂವರೆ ವರ್ಷಗಳಲ್ಲಿ ಅದೆಷ್ಟು ಅನಂತವೆನ್ನಿಸುವಂತಹ ಪ್ರೀತಿ ಕೊಟ್ಟೆ ಹುಡುಗೀ? ಅಷ್ಟು ಪ್ರೀತಿ ಪಡೆದ ನಾನು ಕೊನೆಯ ದಿನವೇ ಸತ್ತು ಹೋಗಬೇಕಾಗಿತ್ತು. ಈ ಪತ್ರ ಬರೆಯಲು ಅಸಲು ಬದುಕಿರಬಾರದಿತ್ತು. ಆದರೆ ನೀನು, ಇದು ಕೊನೆಯ ದಿನವಾದೀತು ಎಂಬ ಸುಳಿವೇ ಕೊಡಲಿಲ್ಲ. ನೀನು ಕಳಿಸಿದ ಕರೆಯಲ್ಲಿ ಕಲುಷ ಕಾಣಲಿಲ್ಲ. ನಾನು ಸಂಭ್ರಮದಿಂದ ನಡೆದು ಬಂದೆ.

ಹೆಬ್ಬಾಗಿಲಲ್ಲಿ ಎಂದಿನಂತೆ ಪ್ರಣತಿಯಿತ್ತು. ಒಳಗೆ ಉಲಿಯುತ್ತಿದ್ದುದು ಸಣ್ಣ ವೀಣೆ. ಎಲ್ಲ ಬಾಗಿಲುಗಳಿಂದಲೂ ಹೊಂಬೆಳಕು ಬರುತ್ತಿತ್ತು. ಬಾಗಿಲಲ್ಲಿ ಇದಿರಾದವಳ ತುರುಬಿನಲ್ಲಿ ಮಲ್ಲಿಗೆ, ದವನ. ಕೈಹಿಡಿದು ಕರೆದೊಯ್ದು ಅಭ್ಯಂಜನ ಮಾಡಿಸಿದೆ. ಕರ್ಪೂರ ಬೆರೆತ ಎಣ್ಣೆಯಲ್ಲಿ ತೋಯ್ದು ಮೈಗೆ ಸ್ವಚ್ಛ ಸೀಗೆಯ ಲೇಪ. ನೀನು ಮೈಯೊರೆಸುತ್ತಿದ್ದರೆ ನನ್ನಲ್ಲಿ ಮಗುವೊಂದು ಹಿತವಾಗಿ ಹೊರಳುತ್ತಿತ್ತು. ಅಷ್ಟು ಪ್ರೀತಿಯಿಂದ ನೀನು ಯಾವತ್ತೂ ಉಣಬಡಿಸಿರಲಿಲ್ಲವೇನೋ? ಬೆರಳ ತುದಿಯಲ್ಲಿ ಮೊಸರಕೆನೆ ನೆಕ್ಕಿಸಿದವಳು ಯಾವಾಗ ಜೇನು ಬೆರೆಸಿದ್ದೆಯೋ? ನೀನು ಒಂದೊಂದಾಗಿ ಕಿಟಕಿಯ ಪರದೆಗಳನ್ನು ಹಾಕುತ್ತ ಬಂದೆ. ಅದು ಮೇಘ ಮಂಥನದ ಆಹ್ವಾನ. ನನ್ನೊಳಗಿನ ನಾಭಿಯಾಳದಲ್ಲಿ ಪ್ರಾಣ ಬಂದಿತ್ತು. ನಿನ್ನ ಮೈಯ ಘಮದಲ್ಲಿ ಈಸು ಬಿದ್ದ ಘಳಿಗೆ, ನನ್ನನ್ನು ನಾನು ಇಡಿಯಾಗಿ ಮರೆತಿದ್ದೆ.

ಆಗಲೇ ಅಲ್ಲವಾ ನೀನು ಬಿಟ್ಟು ಹೋಗುವ ಮಾತನಾಡಿದ್ದು? ವೀಣೆಯ ಮೊದಲ ತಂತಿ ಖಟ್ಟನೆ ತುಂಡಾದ ಸದ್ದು. ನಿಜ ಹೇಳು, ಇದೆಲ್ಲ ನಿನಗೆ ಒಂದೂವರೆ ವರ್ಷಗಳ ಮುಂಚೆಯೇ ಗೊತ್ತಿತ್ತಾ? ಒಂದು ಸಲ ಹೇಳಿ ಬಿಡು, ಅಪ್ಪಿಕೊಂಡ ಎರಡು ಸುಕೋಮಲ ಕೈಗಳ ಪೈಕಿ ಯಾವುದರಲ್ಲಿ ಚೂರಿ ಅಡಗಿಸಿಕೊಂಡಿದ್ದೆ? ನೀನು ಆ ಮಾತು ಹೇಳಿದ ಮೇಲೂ ನಾನು ಏಕೆ ಸತ್ತು ಹೋಗಲಿಲ್ಲ. ಬಿಡು, ನಿನ್ನಲ್ಲಿ ಉತ್ತರವಿದ್ದಿದ್ದರೆ ನೀನಾದರೂ ಯಾಕೆ ಹೀಗೆಲ್ಲ ಮಾಡುತ್ತಿದ್ದೆ? ಮರಣದಂಡನೆ ವಿಧಿಸಿಯಾದ ಮೇಲೆ ನ್ಯಾಯಾಧೀಶನ ಮನಸ್ಸಿನಲ್ಲಿ ನಿಟ್ಟುಸಿರಿನ ಹೊರತು ಮತ್ತೇನೂ ಉಳಿದಿರುವುದಿಲ್ಲ. ಅಲ್ಲಿ ದಯೆಯಿರುವುದಿಲ್ಲ. ಕರುಣೆಯಿರುವುದಿಲ್ಲ. ಕೊಂದೆನೆಂಬ ಪಶ್ಚಾತ್ತಾಪವಿರುವುದಿಲ್ಲ. ಕೇವಲ ನಿರ್ದಯತೆ ರಾಜ್ಯವಾಳುತ್ತಿರುತ್ತದೆ.

ಆಯಿತು, ನಿನ್ನ ನಿರ್ಧಾರವೇ ಜಾರಿಗೆ ಬರಲಿ. ನಿನ್ನ ಪಾಲಿಗೆ ಇದೊಂದು ಚಿಕ್ಕ ಹೊರಳು. ಇಲ್ಲಿ ಮುಳುಗಿದವಳಿಗೆ ಅಲ್ಲಿ ಮೇಲೆದ್ದರೆ ಇನ್ನೊಬ್ಬನ ತೋಳಿನಾಸರೆ. ಅವನು ನನಗಿಂತ ಚೆಲುವನಿರಬಹುದು. ರಸಿಕ? ಯಾಕಾಗಬಾರದು? ಶ್ರೀಮಂತ, ಸುಶಿಕ್ಷಿತ, ಗಂಭೀರ, ಧೈರ್ಯವಂತ- ಎಲ್ಲವೂ ಆಗಿರುತ್ತಾನೆ. ಆಗಿರಲಿ ಬಿಡು. ಆದರೆ ನನಗಿಂತ ಹೆಚ್ಚು ಪ್ರೀತಿಸುವವನಾಗಿರಲಾರ. ಅಹಂಕಾರಪಡಲಿಕ್ಕೆ ಅದೊಂದೇ ನನಗೆ ಉಳಿದಿರುದು. ಅಷ್ಟನ್ನಾದರೂ ಉಳಿಸಿ ಹೋಗು. ಜಗತ್ತಿನ ಇನ್ಯಾವ ಗಂಡಸು ಕೂಡ ನಿನಗೆ ಆ ಒಂದೂವರೆ ವರ್ಷಗಳನ್ನು ಹಿಂತಿರುಗಿಸಲಾರ. ಬೇಕಾದರೆ ನನ್ನ ನಾಳೆಗಳನ್ನು ಒಯ್ದುಬಿಡು. ಅವುಗಳ ಅವಶ್ಯಕತೆ ಇನ್ನು ನನಗಿಲ್ಲ. ಬೆಳಕು ತನ್ನ ಸಂತೆ ಮುಗಿಸಿ ಹೋದ ಮನೆಯಲ್ಲಿ ಪ್ರಣತಿ ಅಪ್ರಸ್ತುತ.

'ಮತ್ತೆ ಬಾ' ಹಾಗಂತ ಕರೆಯಲಾರೆ. ಬಂದರೂ ಬಂದೇನು ಎಂಬ ಭ್ರಮೆ ಹುಟ್ಟಿಸಿ ಹೋಗಬೇಡ. ಎಲ್ಲ ಹುಡುಗಿಯರೂ ಮಾಡು ತಪ್ಪು ಮಾಡಬೇಡ. ಎದುರಿಗೆ ಸಿಕ್ಕಾಗ ಹಳೆಯ ಕನಸು, ಕನವರಿಗೆ ಬೇಡ. ಇದು ಇಲ್ಲಿಗೆ ಮುಗಿಯಲಿ, ಎಲ್ಲ ಒಳ್ಳೆಯವುಗಳೂ ಒಮ್ಮೆ ಮುಗಿದು ಹೋಗುವಂತೆ.


ಇಂತಿ ನಿನ್ನ ಪ್ರೀತಿಯ ರಾಜೇಶ

ನನ್ನ ಪ್ರೀತಿಯ ಸ್ನೇಹ,

ನನ್ನ ಪ್ರೀತಿಯ ಸ್ನೇಹ,



ಪ್ರೀತಿ ಮಾಡಿದ್ದು ನನ್ನ ತಪ್ಪಾ ಅಥವಾ ನಿನ್ನ ಪ್ರೀತಿ ಮಾಡಿದ್ದು ತಪ್ಪಾ ನಂಗೆ ಗೊತ್ತಿಲ್ಲ ಆದ್ರೆ ಒಂದಾಂತ್ತು ನಿಜ ಪ್ರೀತಿ ಶುರು ಆದ್ಮೇಲೆ ನಾನು ತುಂಬಾ ಬದಲಾಗಿದ್ದೀನಿ ನಾನು ನನ್ನ ಪಾಡಿಗೆ ಇರೋದಕ್ಕೆ ಆಗ್ತಾ ಇಲ್ಲ ನೀನು ನನ್ನ ತುಂಬಾ Disturb ಮಾಡ್ತಾ ಇದ್ದೀಯಾ ಅದರಿಂದ ನಿಂಗೆ ಏನು ಸಿಗುತ್ತೆ ಅಂತ ಗೊತ್ತಿಲ್ಲ ಆದ್ರೆ ನಂಗೆ ಮಾತ್ರ ತುಂಬಾ ಬೇಜಾರಾಗುತ್ತೆ ನಿನ್ನ ಹಟ ನನಗೆ ತಲೆ ಕೆಡಿಸುತ್ತೆ ನಾನು ಸ್ವಲ್ಪ ಮುಂಗೋಪಿ ಅದು ನಿನಗೂ ಗೊತ್ತು ಆದ್ರೂ ಯಾಕೆ ನನ್ನ ವಿಪರೀತ ಕಾಡಿಸ್ತೀಯ ನಿಂಗೆ ಯಾಕೆ ಹಾಗಾಗಿದೆ ಅಂತ ನಾನೇ ಹೇಳ್ತೇನೆ ಕೇಳು ನೀನು ನನ್ನ ಜಾಸ್ತಿ ಪ್ರೀತಿಸ್ತೀಯ ಎಲ್ಲಿ ನಂಗೆ ನನ್ ಹುಡುಗ ಸಿಗಲ್ವೋ ಅಂತ ಭಯ. ನೀನು ನನ್ ಮೇಲೆ ಇಟ್ಟಿರೋ ಪ್ರೀತಿಗೆ ನನ್ ಯಾವತ್ತೂ ಮೋಸ ಮಾಡಲ್ಲ ಆ ನಂಬಿಕೆ ಬೆಳೆಸ್ಕೋ ಆಗ ನಿನ್ನ ಮನಸ್ಸು ಫ್ರೀ ಆಗುತ್ತೆ. ಯಾಕೆಂದ್ರೆ ಪ್ರೀತಿಗೆ ನಂಬಿಕೆನೇ ಮುಖ್ಯ ಅದು ನಮ್ಮ ಪ್ರೀತಿನಾ ಕಾಪಾಡುತ್ತೆ ನೀನು ನನ್ನ ಬಗ್ಗೆ ತಪ್ಪಾಗಿ ತಿಳ್ಕೊಂಡಿದ್ದಿಯ ನಾನು ನೀನು ತಿಳ್ಕೊಂಡಿರೋ ಥರ ಕೆಟ್ಟ ಹುಡುಗ ಅಲ್ಲ ಆದ್ರೆ ನೀನು ಹಾಗೆ ಆಗೋ ಥರ ಮಾಡ್ತಾ ಇದ್ದೀಯಾ ನಿಂಗೆ ಇನ್ನೊಂದು ವಿಷಯ ಗೊತ್ತಾ ನಿನ್ನ ಲವ್ ಮಾಡೋಕೆ ಶುರು ಆದ ದಿನದಿಂದ ನಾನು ಯಾರ ಜೊತೇನು ಜಾಸ್ತಿ ಮಾತು ಆಡಲ್ಲ ಅದ್ರಿಂದ ತುಂಬಾ ಜನ ಫ್ರೆಂಡ್ಸ್ ಕಳ್ಕೊಂಡೆ ಅದೆಲ್ಲ ನಿನಗೋಸ್ಕರ. ನಿನ್ನಲ್ಲಿ ಪೋಸ್ಸೆಸ್ಸಿವೆನೆಸ್ಸ್ ಜಾಸ್ತಿ ಇದೆ ಅದ್ಕೆ ನನ್ನ ಮೇಲೆ ಸಂಶಯ ಪಡ್ತೀಯ ಅದ್ಕೆ ನಂಗೆ ತುಂಬಾ ಹರ್ಟ್ ಆಗುತ್ತೆ ನನ್ನ ಬಗ್ಗೆ ಬೇರೆ ಯಾರೇ ಏನೇ ಅಂದ್ರೂ OK ಆದ್ರೆ ನಾನು ಪ್ರೀತಿಸಿದ ಹುಡುಗಿನೆ ನನ್ನ ನಂಬಲ್ಲ ಅಂದ್ರೆ ಅದು ನಂಗೆ ತುಂಬಾ ಹರ್ಟ್ ಆಗೋ ವಿಷಯ.

ನೀನು ನಿನ್ನದೆ ಯೋಚನೆಯಿಂದ ಹೇಳ್ತೀಯ ನೀವು ನನ್ನ ನೆಗ್ಲೆಕ್ಟ್ ಮಾಡ್ತೀಯಾ ಅಂತ ಆದ್ರೆ ನೀನು ನನ್ನ ಪ್ಲೇಸ್ ನಲ್ಲಿ ನಿಂತಕೊಂಡು ಯೋಚನೆ ಮಾಡು ನೀನು ಆಗಿದ್ರೆ ಏನು ಮಾಡ್ತೀಯಾ ಅಂತ. ಇವಾಗ ನೀನು ಕಾಲೇಜ್ ಗೆ ಹೋಗೋ ಹುಡುಗಿ ನಿಂಗೆ ಅದೆಲ್ಲ ಅರ್ಥ ಆಗಲ್ಲ ನಂಗೆ ಸಾವಿರಾರು ಟೆನ್ಶನ್ ಇರುತ್ತೆ ಅದೆಲ್ಲ ಇದ್ರು ದಿನಕ್ಕೆ ಅರ್ಧ ಗಂಟೆ ಮಾತ್ಆಡ್ತೀನಿ ಆದ್ರೆ ಆ ಅರ್ಧ ಗಂಟೆಲೀ ನೀನು ನೂರು ಸಲ ಜಗಳ ಮಾಡ್ತೀಯಾ ಅದು ನಂದೇ ತಪ್ಪು ಇರಬಹುದು ಆದ್ರೆ ನೀನು ಅದ್ಕೆ ಅಡ್ಜಸ್ಟ್ ಮಾಡ್ಕೋಬೇಕು ನನ್ನಲ್ಲಿ ಫಾಲ್ಟ್ ಏನಿದೆ ಅಂತಾನೆ ಹುಡುಕ್ತಿಯ ಅದ್ಬಿಟ್ಟು ನನ್ನ ಅರ್ಥ ಮಾಡ್‌ಕೊಳ್ಳೋಕೆ ಟ್ರೈ ಮಾಡು ನಮ್ಮಿಬ್ಬರ ಮಧ್ಯೆ ಈ ಪ್ರೀತಿ ಹೀಗೆ ಇರಬೇಕು ಅಂದ್ರೆ ಅದ್ಕೆ ಹೊಂದಾಣಿಕೆ ಕೂಡ ಮುಖ್ಯ.


ನನ್ನ ನೀನು
Understand ಮಾಡ್‌ಕೊಳ್ಳಿಲ್ಲ ಅಂದ್ರೆ ನನ್ನ ಮೇಲೆ ಪ್ರೀತಿ ಹೇಗೆ ಬರುತ್ತೆ. ಅಂತೂ ಇದೆ ಅಂದ್ರೆ ಅದು ನೀರ ಮೇಲಿನ ಗುಳ್ಳೆಯಂತೆ ಯಾವಾಗ ಬೇಕಾದ್ರೂ ಒಡೆದು ಹೋಗುತ್ತೆ. ಹಾಗೆ ಆಗಬಾರದು ನಮ್ಮ ಪ್ರೀತಿ. ನಿಂಗೆ ಪ್ರೀತಿಸೋದು ಮಾತ್ರ ಗೊತ್ತು ಆದ್ರೆ ಅದನ್ನ ಕಾಪಾಡೋದು ಗೊತ್ತಿಲ್ಲ. anyway bye take care I LOVE YOU