ಇಂತಿ ನಿಮ್ಮ ಪ್ರೀತಿಯ ರಾಜೇಶ (ಪ್ರಜು).
9686333367
ಇಂತಿ ನಿಮ್ಮ ಪ್ರೀತಿಯ ರಾಜೇಶ (ಪ್ರಜು).
9686333367
"ನಿನ್ನ ನಾ ಸತ್ತ ಮೇಲೂ ಪ್ರೀತಿಸುವೆ"
ಅಬ್ಬಾ ಇದೆಂಥ ಮಾತು, ಕಲ್ಪನೆಗೂ ಮಿತಿ ಇರಬಾರದೇ.. ಬದುಕಿದ್ದಾಗಲೆ ಜೀವನಪೂರ್ತಿ ಒಂದೇ ಹುಡುಗಿಯನ್ನ ಪ್ರೀತಿಸೋದು ಕಸ್ಟ. ಇನ್ನೂ ಸತ್ತ ಮೇಲೆ ಏನಿರುತ್ತೆ ಬರಿ ಮಣ್ಣು.. ಸತ್ತ ಮೇಲೆ ನಾವಿದ್ರೆ ತಾನೆ ಪ್ರೀತಿ ಮಾಡೋಕೆ ಸಾಧ್ಯ ಅಂತ ಎಲ್ಲರ ಪ್ರಶ್ನೆ. ಆದ್ರೆ ಈ ಮಾತು ಕೇವಲ ಕಲ್ಪನೆಯಲ್ಲ, ಅಥವಾ ಪ್ರೀತಿಯ ತೋರಿಕೆ ಅಲ್ಲ ಅನ್ನೋ ಸತ್ಯ ಬಹುಶ: ಯಾರಿಗೂ ಗೊತ್ತಿರಲ್ಲ, ಸ್ವತ ಆ ಪ್ರೀತಿಯ ಪಡೆದ ಹುಡುಗಿಗೆ ಗೊತ್ತಿಲ್ಲ ಅಂದಮೇಲೆ ಬೇರೆಯವರಿಗೆ ಹೇಗೆ ಗೊತ್ತಾಗುತ್ತೆ ಅಲ್ವಾ?.
ನನ್ನ ಪ್ರಕಾರ ಪ್ರೀತಿ ಅನ್ನೋದು ಕೇವಲ ದೇಹಕ್ಕೆ ಸಂಬಂಧಪಟ್ಟಿದ್ದಲ್ಲ, ಅದು ಎರಡು ಆತ್ಮಗಳ ಮಿಲನ, ಹಾಗಂತ ಎಲ್ಲರ ಪ್ರೀತಿಯು ಹಾಗೆ ಇರಲ್ಲ ಕೆಲವರ ಪ್ರೀತಿ ಕೇವಲ ದೇಹ ಮಟ್ಟದ್ದಾಗಿರುತ್ತೆ. ಅಲ್ಲಿ ದ್ಯೆಹಿಕ ಆಕರ್ಷಣೆ ಬಿಟ್ಟು ಬೇರೇನು ಇರೋದಿಲ್ಲ. ಅಂತ ಪ್ರೀತಿ ನಶಿಸೋದಕ್ಕೆ ಕೇವಲ 5 ನಿಮಿಷ ಸಾಕು.
ಆದರೆ, ಈ ದೇಹಕ್ಕೂ ಮೀರಿದ ಒಂದು Entity ನಮ್ಮಲ್ಲಿ ಇದೆಯೆಂದು ನಮಗೇ ಕೆಲವೊಮ್ಮೆಅರಿವಾಗುತ್ತೆ. ಇದನ್ನು ಒಂದು ಶಕ್ತಿ(Energy) ಅಥವಾ ಆತ್ಮ ಎಂದು ಕರೆಯುತ್ತೇವೆ. ದೇಹ ಹೇಗೆ ತಂದೆತಾಯಿಯರಿಂದ ಬಂದಿದೆಯೋ, ಹಾಗೆ ಆತ್ಮ ಹಿಂದಿನ ಜನ್ಮದ ಆತ್ಮದಿಂದ transform ಆಗಿ ಬಂದಿರುತ್ತೆ. ಶಕ್ತಿ ಸೃಷ್ಟಿಯಾಗುವುದಿಲ್ಲ, ಮತ್ತು ಸಾಯುವುದಿಲ್ಲ, transform ಮಾತ್ರ ಆಗುತ್ತೆ(thermodynamics law ಪ್ರಕಾರ). ಹೀಗಾಗಿ ಆತ್ಮ ದೇಹದೊಡನೆ ಸಾಯುವುದಿಲ್ಲ, ಬದಲಾಗಿ ಇನ್ನೊಂದು ದೇಹ ಸೇರುತ್ತೆ, ಅಷ್ಟೆ ಅದೇ ಪ್ರೀತಿ ಆತ್ಮಪೂರ್ವಕವಾಗಿದ್ದರೆ ಆತ್ಮ ಇರುವವರೆಗೂ ಆ ಪ್ರೀತಿ ಶಾಶ್ವತ. ಸಾವು ಎಂಬುದು ದೇಹಕ್ಕೆ ಹೊರತು ಆತ್ಮಕ್ಕಲ್ಲ, ಆತ್ಮ ಚಿರಂತರ, ಎಂದಿಗೂ ನಾಶವಾಗದ ಒಂದು ಚೈತನ್ಯ.
ಇಲ್ಲಿ "Love at first sight" ಅಂತಾರಲ್ಲ ಅದನ್ನ ನಿಜವಾದ ಪ್ರೀತಿ ಅಂತ ಹೇಳೋದು ತಪ್ಪು, ಮೊದಲ ನೋಟದಲ್ಲಿ ಹುಟ್ಟೋದು ಕೇವಲ ಆಕರ್ಷಣೆ. ಆದ್ರೆ ಇಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗಲೆ ನಿಜವಾದ ಪ್ರೀತಿ ಸಾಧ್ಯ.
ನಿಜವಾದ ಪ್ರೀತಿ ಅಂದ್ರೆ ಇಬ್ಬರು ಪರಸ್ಪರ ಅವರ ಆತ್ಮವನ್ನು ಪ್ರೀತಿಸುವುದು.
ಆತ್ಮಕ್ಕೆ ಸಾವಿಲ್ಲ ಅನ್ನೋ ಸತ್ಯನ ಎಲ್ಲರೂ ನಂಬಿರೋ ಹಾಗೆ ನನ್ನ ಪ್ರೀತಿಗೆ ಸಾವಿಲ್ಲ ಅಂತ ನಾನು ನಂಬಿದ್ದೀನಿ so ನನ್ನ ಹುಡುಗಿಯನ್ನ ನಾ ಸತ್ತ ಮೇಲೂ ಪ್ರೀತಿಸುವೆ.

ನನ್ನ ಒಬ್ಬಳು ಗೆಳತಿಗೆ ಜೀವನದಲ್ಲಿ ಸ್ನೇಹದಿಂದ ಆದ ಮೋಸದ ಬಗ್ಗೆ ಕೇಳಿ ತುಂಬಾ ಬೇಜಾರಾಗಿತ್ತು. ಪ್ರೀತಿಯಲ್ಲಿ ಮೋಸ ಇರುತ್ತೆ ನಿಜ ಆದ್ರೆ ಇದೇನು ಸ್ನೇಹದಲ್ಲೂ ಮೋಸ ಅಡಗಿದೆಯ ಅಂತ ಕೇಳ್ಬೇಡಿ. ಯಾಕಂದ್ರೆ ಮೋಸ ಮಾಡೋ ಹೃದಯ ಇದ್ರೆ ಅದು ಪ್ರೀತಿ, ಸ್ನೇಹ, ಸಂಭಂಧ ಯಾವುದನ್ನು ನೋಡುವುದಿಲ್ಲ, ಕಳ್ಳನಿಗೆ ಕನ್ನ ಹಾಕೋಕೆ ಮನೆಯ ಖಜಾನೆ ಆದ್ರೆ ಏನು ದೇವರ ಹುಂಡಿ ಆದ್ರೆ ಏನು ಅಲ್ವಾ. ಆದ್ರೆ ಸ್ನೇಹದಿಂದ ಮೋಸ ಹೋದೋರೂ ತೀರಾ ಕಡಿಮೆ.
ಮೊದಲು ಪ್ರೀತಿಗೂ ಸ್ನೇಹಕ್ಕೂ ಇರುವ ವ್ಯತ್ಯಾಸ ಏನು ಗೊತ್ತ. ಅದು ಸ್ವಾರ್ಥ, ಸ್ವಾರ್ಥ ಇದ್ದಲ್ಲಿ ಮೋಸ ನಡೆಯೋದು ಸಹಜ, ಪ್ರೀತಿಯಲ್ಲಿ ಆದ್ರೆ ಸ್ವಾರ್ಥ ಇರ್ಬೇಕು ನಿಜ, ನಾವು ಪ್ರೀತಿಸಿದ ಹುಡುಗ / ಹುಡುಗಿ ನಮಗೆ ಮಾತ್ರ ಸ್ವಂತ, ನನ್ನ ಬಿಟ್ಟು ಬೇರೆಯವರನ್ನ ನೋಡಬಾರದು, ಮಾತಾಡಿಸಬಾರದು, ಜಾಸ್ತಿ ಅವರ ಜೊತೆ ಸೇರಬಾರದು ಅಂತ ಬಯಸೋದು ತಪ್ಪೇನೂ ಅಲ್ಲ ಆದ್ರೆ ಅದೇ ಅತಿಯಾದ್ರೆ ಪ್ರೀತಿಗೆ ಮಾರಕ.
ಹಾಗೆ ಸ್ನೇಹದಲ್ಲೂ ಸ್ವಾರ್ಥ ಇದ್ರೆ ಅದು ಕೂಡ ಸ್ನೇಹದ ಅಳಿವಿಗೆ ಕಾರಣವಾಗುತ್ತೆ.
ಪ್ರೀತಿ ಸ್ನೇಹ ಎರಡು, ಒಂದು ಕೈಯಿಂದ ಮರಳನ್ನೂ ಹಿಡಿದುಕೊಂಡಂತೆ ಗಟ್ಟಿಯಾಗಿ ಹಿಡಿದಸ್ಟು ಮರಳು ಜಾರಿ ಜಾರಿ ಹೋಗುತ್ತೆ.
ಸ್ನೇಹದಲ್ಲಿ ಎಂದಿಗೂ ಸ್ವಾರ್ಥಕ್ಕೆ ಜಾಗ ಕೊಡಬೇಡಿ, ನಿಮ್ಮ ಸ್ನೇಹಿತರನ್ನ ಪ್ರೀತಿಯಿಂದನೆ ನೋಡಿ ಆದ್ರೆ ಬೇರೆಯವರ ಸ್ನೇಹ ಮಾಡ್ಬೇಡಿ ಅಂತ ಹೇಳ್ಬೇಡಿ, ಅವರ ಸ್ವಾತಂತ್ರ್ಯಾನ ಕಸಿದುಕೊಳ್ಳೋಕೆ ನೋಡ್ಬೇಡಿ.
ಸ್ನೇಹ ಪ್ರೀತಿಗಿಂತ ವಿಶಾಲವಾದದ್ದು, ಪ್ರೀತಿಯಲ್ಲಿ ಬೀಳದೇ ಇದ್ದೋರು ಇರ್ತಾರೆ ಆದ್ರೆ ಸ್ನೇಹದ ಪರಿಚಯ ಆಗದೆ ಇರೋರು ಯಾರು ಇಲ್ಲ.
ಸ್ನೇಹ ಪ್ರೀತಿಯಿಂದ ಸೋತ ಜೀವಗಳಿಗೆ ಜೀವ ಕೊಡೋ ಸೆಲೆ, ಕಣ್ಣೀರು ಒರೆಸಿ ಅವರ ನೋವನ್ನು ಮರೆಸಿ ಸದಾ ನಗುನಗುತ ಇರುವಂತೆ ಮಾಡೋ ಒಂದು ಶಕ್ತಿ,
ಇಲ್ಲಿ ನನ್ನ ಗೆಳತಿಯ ಬಗ್ಗೆ ಚಿಕ್ಕದಾಗಿ ಹೇಳೋಕೆ ಇಸ್ಟ ಪಡ್ತೆನೆ. ಅವಳು ಅವಳದೇ classmate ಹುಡುಗಿಯ ಜೊತೆ friendship ಮಾಡ್ಕೊಂಡ್ಳು, ಎಲ್ಲ ಹುಡುಗಿಯರು friendship ಮಾಡ್ಕೊತಾರೆ ಆದ್ರೆ ಇವರು ಸ್ವಲ್ಪ ಜಾಸ್ತಿನೆ close ಆಗ್ಬಿಟ್ಟಿದ್ರು, ಅದು ಎಸ್ಟು close ಅಂದ್ರೆ ನೀವು ಪ್ರೀತಿಸುವ ಹುಡುಗ / ಹುಡುಗಿಯ ಪ್ರೀತಿಯನ್ನ ಮೀರಿಸುವಂತಹ ಸ್ನೇಹ, ಒಬ್ಬರನೊಬ್ಬರು ಬಿಟ್ಟು ಇರಲಾಗದಸ್ಟು, ಹೀಗೆ ಇದ್ದಾಗಲೇ ಪೋಸ್ಸೆಸಿವ್ ನಂಥಹ ಭೂತ ಬರೋದು, ಸ್ನೇಹಿತರ ನಡುವೆ ಪೋಸ್ಸೆಸಿವ್ ನೆಸ್ ಬರುತ್ತೆ ಅಂತ ನನಗೆ ಅವಳನ್ನ ನೋಡಿದ್ಮೇಲೆ ಗೊತ್ತಾಗಿದ್ದು.
ಹೀಗೆ ಅವಳಿಗೆ ಅವಳ ಫ್ರೆಂಡ್ ಬೇರೆ ಹುಡುಗಿಯ ಜೊತೆ friendship ಮಾಡೋದು, ಇವಳನ್ನ ದೂರ ಮಾಡಿದ ಹಾಗೆ ಅನ್ನಿಸಿದೆ, ಅದು ತುಂಬಾ ನೋವು ಕೊಟ್ಟಿದೆ,
ಇದರಿಂದ ಅವಳಿಂದ ದೂರ ಸರಿಯೋದೇ ಸರಿ ಅಂತ decide ಮಾಡಿದ್ದಾಳೆ ಅಸ್ಟೆ.
ಆದ್ರೂ ಅಂತ ಸ್ನೇಹವನ್ನ ಮರೆಯೋಕೆ ಆಗದೆ ಅದನ್ನೇ ನೆನೆಸಿಕೊಂಡು ನೋವು ಅನುಭವಿಸ್ತಾ ಇದ್ದಾಳೆ.
ಇಲ್ಲಿ ಅವಳದು ಅವಳ ಸ್ನೇಹಿತೆಯಡೆಗೆ ಇದ್ದಿದ್ದು ಬರಿ ಸ್ನೇಹ ಅಲ್ಲ, ನಮ್ಮಿಬ್ಬರ ಬಿಟ್ಟು ಏನು ಇಲ್ಲ ಈ ಪ್ರಪಂಚಕ್ಕು ನಮಗೂ ಯಾವ ಸಂಭಂಧನು ಇಲ್ಲ, ನಂಗೆ ಅವಳನ್ನ ಬಿಟ್ರೆ ಬದುಕೋ ಶಕ್ತಿ ಇಲ್ಲ, ಅವಳಿಗೂ ಕೂಡ ಹಾಗೆ ಅಂತ ಭ್ರಮೆಯಿಂದ ಕೂಡಿದ್ದ ಸ್ನೇಹ ಅದು,
"ನೀವು ಎಸ್ಟು ಶ್ರೀಮಂತರಾಗಿದ್ದೀರ ಅಂತ ತಿಳಿಯೋದು ನೀವು ಗಳಿಸಿದ ಹಣದಿಂದ ಅಲ್ಲ ನೀವು ಗಳಿಸಿದ ಸ್ನೇಹದಿಂದ" ಅನ್ನೋ ಮಾತು ಅವಳಿಗೆ ಇಸ್ಟ ಆಗಲ್ಲ ಯಾಕಂದ್ರೆ ಅವಳ ಗೆಳತಿ ಬೇರೆ ಯಾರ friendship ಮಾಡೋದು ಇಸ್ಟ ಇರ್ಲಿಲ್ಲ. ಅದು ಕಂಡಿತಾ ತಪ್ಪು.
ಫ್ರೆಂಡ್‌ಶಿಪ್ ಅಲ್ಲಿ ಅವಳು ಸೆಲ್ ಫಿಶ್ ಅದು ಅವಳ ತಪ್ಪಲ್ಲ, ಸ್ನೇಹದ ಬಗ್ಗೆ ಅವಳು ತಿಳ್ಕೊಂಡಿರೋದು ತಪ್ಪು. ಸ್ನೇಹವನ್ನ ಎಲ್ಲರಿಗೂ ಕೊಡಿ ಆಗ ಎಲ್ಲರ ಸ್ನೇಹ ನಿಮ್ಮದಾಗುತ್ತೆ, ಸ್ನೇಹ ಬೆಳೆಸೋದು ಉಳಿಸೋದು ನಮ್ಮ ಕ್ಯೆಲಿದೆ. ನಮ್ಮ ಸ್ನೇಹನ ಎಲ್ಲ ಬಯಸೋ ಹಾಗೆ ನೋಡ್ಕೋಬೇಕು ನಮ್ಮ ಸ್ನೇಹಿತರು ನಮ್ಮ ದೂರ ಮಾಡೋಕೆ ಸಾಧ್ಯವಾಗದಂತ ಆಕರ್ಷಕ ವ್ಯಕ್ತಿತ್ವ ನಮ್ಮದಾಗಬೇಕು. ಸ್ನೇಹ ಇರೋದು ಬೇರೆ ಎಲ್ಲ ನೋವನ್ನು ಮರೆಯೋಕೆ ಸ್ನೇಹದಿಂದ ಮತ್ತೆ ನೋವು ಪಡೋಕೆ ಅಲ್ಲ.
ಮತ್ತೆ ನೀವು ಸ್ನೇಹ ಬೆಳೆಸೋ ವ್ಯಕ್ತಿಯ ಸ್ವಭಾವವನ್ನು ತಿಳಿದುಕೊಳ್ಳಿ, ಅವರನ್ನ ಅರ್ಥ ಮಾಡ್‌ಕೋಳ್ಳಿ
ಅವರ ಸ್ನೇಹ ನಿಮಗೆ ಮಾತ್ರ ಮೀಸಲು ಅಂತ ಅಂದುಕೊಳ್ಳಬೇಡಿ. ನನ್ ಪ್ರಕಾರ ಸ್ನೇಹ ವೆಂಬುದು ಎಲ್ಲರಿಗೂ ಮೀಸಲು. ಅವರಿಗೂ ಸ್ವಾತಂತ್ರ್ಯ ಕೊಡಿ..jpg)
SEX ಅನ್ನೋದು ಗುಟ್ಟಿನಲ್ಲಿ ಹುಟ್ಟಿ ಪಶ್ಯತಾಪದಲ್ಲಿ ಸಾಯುವಂತಹುದಾಗಿರಬಾರದು. ಸಂಬಂಧ ನೈತಿಕವೋ ಅನೈತಿಕವೋ ಆ ಪ್ರಶ್ನೆ ಒತ್ತಟ್ಟಿಗಿರಲಿ ಆದರೆ ಎರಡು ದೇಹಗಳ ಮಿಲನವೆಂಬುದು ಕೇವಲ ದೇಹ ಮಟ್ಟದ್ದಾಗಿರಬಾರದು ಅದು ಎರಡು ವೈಕ್ತಿತ್ವಗಳ ಸೆಲೆಬ್ರೆಶನ್ ಆಗಿರಬೇಕು. ಸೆಲೆಬ್ರೆಶನ್ ಆಫ್ Two ಪರ್ಸನಲಾಟೀಸ್ ಯಾವಾಗ ಕಾಮವೆಂಬುದು ಕದ್ದು ಹುಟ್ಟಿ ಕದ್ದು ಸಂಬ್ರಮಿಸುತ್ತದೋ ಆಗ ಅದು ಕೇವಲ ಒಂದು guilt ನ ಬಿಟ್ಟು ಹೋಗುತ್ತದೆ ಪಶ್ಯತಾಪ ಹೇಸಿಗೆ ಭಯಗಳಲ್ಲಿ ನಮ್ಮನ್ನು ಉಳಿಸಿ ಹೋಗುತ್ತದೆ ಈ ತೆರನಾದ ಸಂಬಂಧ ಏರ್ಪಟ್ಟಾಗ ಕೇವಲ ಆ ಸಂಬಂಧ ಅನೈತಿಕವಾಗಿರುವುದಿಲ್ಲ ಅದಕ್ಕೆ ಸಂಬಂಧ ಪಟ್ಟ0ತ ಇಬ್ಬರ ಬದುಕುಗಳೆಲ್ಲವೂ ಅನೈತಿಕವಾಗಿ ಹೋಗುತ್ತವೆ.
Never do that
- ಇಂತಿ ನಿಮ್ಮ ಪ್ರೀತಿಯ ರಾಜೇಶ (ಪ್ರಜು).










ನನ್ನ ಪ್ರೀತಿಯ ಸ್ನೇಹ,
ಪ್ರೀತಿ ಮಾಡಿದ್ದು ನನ್ನ ತಪ್ಪಾ ಅಥವಾ ನಿನ್ನ ಪ್ರೀತಿ ಮಾಡಿದ್ದು ತಪ್ಪಾ ನಂಗೆ ಗೊತ್ತಿಲ್ಲ ಆದ್ರೆ ಒಂದಾಂತ್ತು ನಿಜ ಪ್ರೀತಿ ಶುರು ಆದ್ಮೇಲೆ ನಾನು ತುಂಬಾ ಬದಲಾಗಿದ್ದೀನಿ ನಾನು ನನ್ನ ಪಾಡಿಗೆ ಇರೋದಕ್ಕೆ ಆಗ್ತಾ ಇಲ್ಲ ನೀನು ನನ್ನ ತುಂಬಾ Disturb ಮಾಡ್ತಾ ಇದ್ದೀಯಾ ಅದರಿಂದ ನಿಂಗೆ ಏನು ಸಿಗುತ್ತೆ ಅಂತ ಗೊತ್ತಿಲ್ಲ ಆದ್ರೆ ನಂಗೆ ಮಾತ್ರ ತುಂಬಾ ಬೇಜಾರಾಗುತ್ತೆ ನಿನ್ನ ಹಟ ನನಗೆ ತಲೆ ಕೆಡಿಸುತ್ತೆ ನಾನು ಸ್ವಲ್ಪ ಮುಂಗೋಪಿ ಅದು ನಿನಗೂ ಗೊತ್ತು ಆದ್ರೂ ಯಾಕೆ ನನ್ನ ವಿಪರೀತ ಕಾಡಿಸ್ತೀಯ ನಿಂಗೆ ಯಾಕೆ ಹಾಗಾಗಿದೆ ಅಂತ ನಾನೇ ಹೇಳ್ತೇನೆ ಕೇಳು ನೀನು ನನ್ನ ಜಾಸ್ತಿ ಪ್ರೀತಿಸ್ತೀಯ ಎಲ್ಲಿ ನಂಗೆ ನನ್ ಹುಡುಗ ಸಿಗಲ್ವೋ ಅಂತ ಭಯ. ನೀನು ನನ್ ಮೇಲೆ ಇಟ್ಟಿರೋ ಪ್ರೀತಿಗೆ ನನ್ ಯಾವತ್ತೂ ಮೋಸ ಮಾಡಲ್ಲ ಆ ನಂಬಿಕೆ ಬೆಳೆಸ್ಕೋ ಆಗ ನಿನ್ನ ಮನಸ್ಸು ಫ್ರೀ ಆಗುತ್ತೆ. ಯಾಕೆಂದ್ರೆ ಪ್ರೀತಿಗೆ ನಂಬಿಕೆನೇ ಮುಖ್ಯ ಅದು ನಮ್ಮ ಪ್ರೀತಿನಾ ಕಾಪಾಡುತ್ತೆ ನೀನು ನನ್ನ ಬಗ್ಗೆ ತಪ್ಪಾಗಿ ತಿಳ್ಕೊಂಡಿದ್ದಿಯ ನಾನು ನೀನು ತಿಳ್ಕೊಂಡಿರೋ ಥರ ಕೆಟ್ಟ ಹುಡುಗ ಅಲ್ಲ ಆದ್ರೆ ನೀನು ಹಾಗೆ ಆಗೋ ಥರ ಮಾಡ್ತಾ ಇದ್ದೀಯಾ ನಿಂಗೆ ಇನ್ನೊಂದು ವಿಷಯ ಗೊತ್ತಾ ನಿನ್ನ ಲವ್ ಮಾಡೋಕೆ ಶುರು ಆದ ದಿನದಿಂದ ನಾನು ಯಾರ ಜೊತೇನು ಜಾಸ್ತಿ ಮಾತು ಆಡಲ್ಲ ಅದ್ರಿಂದ ತುಂಬಾ ಜನ ಫ್ರೆಂಡ್ಸ್ ಕಳ್ಕೊಂಡೆ ಅದೆಲ್ಲ ನಿನಗೋಸ್ಕರ. ನಿನ್ನಲ್ಲಿ ಪೋಸ್ಸೆಸ್ಸಿವೆನೆಸ್ಸ್ ಜಾಸ್ತಿ ಇದೆ ಅದ್ಕೆ ನನ್ನ ಮೇಲೆ ಸಂಶಯ ಪಡ್ತೀಯ ಅದ್ಕೆ ನಂಗೆ ತುಂಬಾ ಹರ್ಟ್ ಆಗುತ್ತೆ ನನ್ನ ಬಗ್ಗೆ ಬೇರೆ ಯಾರೇ ಏನೇ ಅಂದ್ರೂ OK ಆದ್ರೆ ನಾನು ಪ್ರೀತಿಸಿದ ಹುಡುಗಿನೆ ನನ್ನ ನಂಬಲ್ಲ ಅಂದ್ರೆ ಅದು ನಂಗೆ ತುಂಬಾ ಹರ್ಟ್ ಆಗೋ ವಿಷಯ.
ನೀನು ನಿನ್ನದೆ ಯೋಚನೆಯಿಂದ ಹೇಳ್ತೀಯ ನೀವು ನನ್ನ ನೆಗ್ಲೆಕ್ಟ್ ಮಾಡ್ತೀಯಾ ಅಂತ ಆದ್ರೆ ನೀನು ನನ್ನ ಪ್ಲೇಸ್ ನಲ್ಲಿ ನಿಂತಕೊಂಡು ಯೋಚನೆ ಮಾಡು ನೀನು ಆಗಿದ್ರೆ ಏನು ಮಾಡ್ತೀಯಾ ಅಂತ. ಇವಾಗ ನೀನು ಕಾಲೇಜ್ ಗೆ ಹೋಗೋ ಹುಡುಗಿ ನಿಂಗೆ ಅದೆಲ್ಲ ಅರ್ಥ ಆಗಲ್ಲ ನಂಗೆ ಸಾವಿರಾರು ಟೆನ್ಶನ್ ಇರುತ್ತೆ ಅದೆಲ್ಲ ಇದ್ರು ದಿನಕ್ಕೆ ಅರ್ಧ ಗಂಟೆ ಮಾತ್ಆಡ್ತೀನಿ ಆದ್ರೆ ಆ ಅರ್ಧ ಗಂಟೆಲೀ ನೀನು ನೂರು ಸಲ ಜಗಳ ಮಾಡ್ತೀಯಾ ಅದು ನಂದೇ ತಪ್ಪು ಇರಬಹುದು ಆದ್ರೆ ನೀನು ಅದ್ಕೆ ಅಡ್ಜಸ್ಟ್ ಮಾಡ್ಕೋಬೇಕು ನನ್ನಲ್ಲಿ ಫಾಲ್ಟ್ ಏನಿದೆ ಅಂತಾನೆ ಹುಡುಕ್ತಿಯ ಅದ್ಬಿಟ್ಟು ನನ್ನ ಅರ್ಥ ಮಾಡ್‌ಕೊಳ್ಳೋಕೆ ಟ್ರೈ ಮಾಡು ನಮ್ಮಿಬ್ಬರ ಮಧ್ಯೆ ಈ ಪ್ರೀತಿ ಹೀಗೆ ಇರಬೇಕು ಅಂದ್ರೆ ಅದ್ಕೆ ಹೊಂದಾಣಿಕೆ ಕೂಡ ಮುಖ್ಯ.
ನನ್ನ ನೀನು Understand ಮಾಡ್‌ಕೊಳ್ಳಿಲ್ಲ ಅಂದ್ರೆ ನನ್ನ ಮೇಲೆ ಪ್ರೀತಿ ಹೇಗೆ ಬರುತ್ತೆ. ಅಂತೂ ಇದೆ ಅಂದ್ರೆ ಅದು ನೀರ ಮೇಲಿನ ಗುಳ್ಳೆಯಂತೆ ಯಾವಾಗ ಬೇಕಾದ್ರೂ ಒಡೆದು ಹೋಗುತ್ತೆ. ಹಾಗೆ ಆಗಬಾರದು ನಮ್ಮ ಪ್ರೀತಿ. ನಿಂಗೆ ಪ್ರೀತಿಸೋದು ಮಾತ್ರ ಗೊತ್ತು ಆದ್ರೆ ಅದನ್ನ ಕಾಪಾಡೋದು ಗೊತ್ತಿಲ್ಲ. anyway bye take care I LOVE YOU