Tuesday, November 16, 2010

ಸ್ನೇಹ ಅಂದ್ರೆ ಹೇಗಿರಬೇಕು


ನ್ನ ಒಬ್ಬಳು ಗೆಳತಿಗೆ ಜೀವನದಲ್ಲಿ ಸ್ನೇಹದಿಂದ ಆದ ಮೋಸದ ಬಗ್ಗೆ ಕೇಳಿ ತುಂಬಾ ಬೇಜಾರಾಗಿತ್ತು. ಪ್ರೀತಿಯಲ್ಲಿ ಮೋಸ ಇರುತ್ತೆ ನಿಜ ಆದ್ರೆ ಇದೇನು ಸ್ನೇಹದಲ್ಲೂ ಮೋಸ ಅಡಗಿದೆಯ ಅಂತ ಕೇಳ್ಬೇಡಿ. ಯಾಕಂದ್ರೆ ಮೋಸ ಮಾಡೋ ಹೃದಯ ಇದ್ರೆ ಅದು ಪ್ರೀತಿ, ಸ್ನೇಹ, ಸಂಭಂಧ ಯಾವುದನ್ನು ನೋಡುವುದಿಲ್ಲ, ಕಳ್ಳನಿಗೆ ಕನ್ನ ಹಾಕೋಕೆ ಮನೆಯ ಖಜಾನೆ ಆದ್ರೆ ಏನು ದೇವರ ಹುಂಡಿ ಆದ್ರೆ ಏನು ಅಲ್ವಾ. ಆದ್ರೆ ಸ್ನೇಹದಿಂದ ಮೋಸ ಹೋದೋರೂ ತೀರಾ ಕಡಿಮೆ.

ಮೊದಲು ಪ್ರೀತಿಗೂ ಸ್ನೇಹಕ್ಕೂ ಇರುವ ವ್ಯತ್ಯಾಸ ಏನು ಗೊತ್ತ. ಅದು ಸ್ವಾರ್ಥ, ಸ್ವಾರ್ಥ ಇದ್ದಲ್ಲಿ ಮೋಸ ನಡೆಯೋದು ಸಹಜ, ಪ್ರೀತಿಯಲ್ಲಿ ಆದ್ರೆ ಸ್ವಾರ್ಥ ಇರ್ಬೇಕು ನಿಜ, ನಾವು ಪ್ರೀತಿಸಿದ ಹುಡುಗ / ಹುಡುಗಿ ನಮಗೆ ಮಾತ್ರ ಸ್ವಂತ, ನನ್ನ ಬಿಟ್ಟು ಬೇರೆಯವರನ್ನ ನೋಡಬಾರದು, ಮಾತಾಡಿಸಬಾರದು, ಜಾಸ್ತಿ ಅವರ ಜೊತೆ ಸೇರಬಾರದು ಅಂತ ಬಯಸೋದು ತಪ್ಪೇನೂ ಅಲ್ಲ ಆದ್ರೆ ಅದೇ ಅತಿಯಾದ್ರೆ ಪ್ರೀತಿಗೆ ಮಾರಕ.

ಹಾಗೆ ಸ್ನೇಹದಲ್ಲೂ ಸ್ವಾರ್ಥ ಇದ್ರೆ ಅದು ಕೂಡ ಸ್ನೇಹದ ಅಳಿವಿಗೆ ಕಾರಣವಾಗುತ್ತೆ.

ಪ್ರೀತಿ ಸ್ನೇಹ ಎರಡು, ಒಂದು ಕೈಯಿಂದ ಮರಳನ್ನೂ ಹಿಡಿದುಕೊಂಡಂತೆ ಗಟ್ಟಿಯಾಗಿ ಹಿಡಿದಸ್ಟು ಮರಳು ಜಾರಿ ಜಾರಿ ಹೋಗುತ್ತೆ.

ಸ್ನೇಹದಲ್ಲಿ ಎಂದಿಗೂ ಸ್ವಾರ್ಥಕ್ಕೆ ಜಾಗ ಕೊಡಬೇಡಿ, ನಿಮ್ಮ ಸ್ನೇಹಿತರನ್ನ ಪ್ರೀತಿಯಿಂದನೆ ನೋಡಿ ಆದ್ರೆ ಬೇರೆಯವರ ಸ್ನೇಹ ಮಾಡ್ಬೇಡಿ ಅಂತ ಹೇಳ್ಬೇಡಿ, ಅವರ ಸ್ವಾತಂತ್ರ್ಯಾನ ಕಸಿದುಕೊಳ್ಳೋಕೆ ನೋಡ್ಬೇಡಿ.

ಸ್ನೇಹ ಪ್ರೀತಿಗಿಂತ ವಿಶಾಲವಾದದ್ದು, ಪ್ರೀತಿಯಲ್ಲಿ ಬೀಳದೇ ಇದ್ದೋರು ಇರ್ತಾರೆ ಆದ್ರೆ ಸ್ನೇಹದ ಪರಿಚಯ ಆಗದೆ ಇರೋರು ಯಾರು ಇಲ್ಲ.

ಸ್ನೇಹ ಪ್ರೀತಿಯಿಂದ ಸೋತ ಜೀವಗಳಿಗೆ ಜೀವ ಕೊಡೋ ಸೆಲೆ, ಕಣ್ಣೀರು ಒರೆಸಿ ಅವರ ನೋವನ್ನು ಮರೆಸಿ ಸದಾ ನಗುನಗುತ ಇರುವಂತೆ ಮಾಡೋ ಒಂದು ಶಕ್ತಿ,

ಇಲ್ಲಿ ನನ್ನ ಗೆಳತಿಯ ಬಗ್ಗೆ ಚಿಕ್ಕದಾಗಿ ಹೇಳೋಕೆ ಇಸ್ಟ ಪಡ್ತೆನೆ. ಅವಳು ಅವಳದೇ classmate ಹುಡುಗಿಯ ಜೊತೆ friendship ಮಾಡ್ಕೊಂಡ್ಳು, ಎಲ್ಲ ಹುಡುಗಿಯರು friendship ಮಾಡ್ಕೊತಾರೆ ಆದ್ರೆ ಇವರು ಸ್ವಲ್ಪ ಜಾಸ್ತಿನೆ close ಆಗ್ಬಿಟ್ಟಿದ್ರು, ಅದು ಎಸ್ಟು close ಅಂದ್ರೆ ನೀವು ಪ್ರೀತಿಸುವ ಹುಡುಗ / ಹುಡುಗಿಯ ಪ್ರೀತಿಯನ್ನ ಮೀರಿಸುವಂತಹ ಸ್ನೇಹ, ಒಬ್ಬರನೊಬ್ಬರು ಬಿಟ್ಟು ಇರಲಾಗದಸ್ಟು, ಹೀಗೆ ಇದ್ದಾಗಲೇ ಪೋಸ್ಸೆಸಿವ್ ನಂಥಹ ಭೂತ ಬರೋದು, ಸ್ನೇಹಿತರ ನಡುವೆ ಪೋಸ್ಸೆಸಿವ್ ನೆಸ್ ಬರುತ್ತೆ ಅಂತ ನನಗೆ ಅವಳನ್ನ ನೋಡಿದ್ಮೇಲೆ ಗೊತ್ತಾಗಿದ್ದು.

ಹೀಗೆ ಅವಳಿಗೆ ಅವಳ ಫ್ರೆಂಡ್ ಬೇರೆ ಹುಡುಗಿಯ ಜೊತೆ friendship ಮಾಡೋದು, ಇವಳನ್ನ ದೂರ ಮಾಡಿದ ಹಾಗೆ ಅನ್ನಿಸಿದೆ, ಅದು ತುಂಬಾ ನೋವು ಕೊಟ್ಟಿದೆ,

ಇದರಿಂದ ಅವಳಿಂದ ದೂರ ಸರಿಯೋದೇ ಸರಿ ಅಂತ decide ಮಾಡಿದ್ದಾಳೆ ಅಸ್ಟೆ.

ಆದ್ರೂ ಅಂತ ಸ್ನೇಹವನ್ನ ಮರೆಯೋಕೆ ಆಗದೆ ಅದನ್ನೇ ನೆನೆಸಿಕೊಂಡು ನೋವು ಅನುಭವಿಸ್ತಾ ಇದ್ದಾಳೆ.

ಇಲ್ಲಿ ಅವಳದು ಅವಳ ಸ್ನೇಹಿತೆಯಡೆಗೆ ಇದ್ದಿದ್ದು ಬರಿ ಸ್ನೇಹ ಅಲ್ಲ, ನಮ್ಮಿಬ್ಬರ ಬಿಟ್ಟು ಏನು ಇಲ್ಲ ಈ ಪ್ರಪಂಚಕ್ಕು ನಮಗೂ ಯಾವ ಸಂಭಂಧನು ಇಲ್ಲ, ನಂಗೆ ಅವಳನ್ನ ಬಿಟ್ರೆ ಬದುಕೋ ಶಕ್ತಿ ಇಲ್ಲ, ಅವಳಿಗೂ ಕೂಡ ಹಾಗೆ ಅಂತ ಭ್ರಮೆಯಿಂದ ಕೂಡಿದ್ದ ಸ್ನೇಹ ಅದು,

"ನೀವು ಎಸ್ಟು ಶ್ರೀಮಂತರಾಗಿದ್ದೀರ ಅಂತ ತಿಳಿಯೋದು ನೀವು ಗಳಿಸಿದ ಹಣದಿಂದ ಅಲ್ಲ ನೀವು ಗಳಿಸಿದ ಸ್ನೇಹದಿಂದ" ಅನ್ನೋ ಮಾತು ಅವಳಿಗೆ ಇಸ್ಟ ಆಗಲ್ಲ ಯಾಕಂದ್ರೆ ಅವಳ ಗೆಳತಿ ಬೇರೆ ಯಾರ friendship ಮಾಡೋದು ಇಸ್ಟ ಇರ್ಲಿಲ್ಲ. ಅದು ಕಂಡಿತಾ ತಪ್ಪು.

ಫ್ರೆಂಡ್‌ಶಿಪ್ ಅಲ್ಲಿ ಅವಳು ಸೆಲ್ ಫಿಶ್ ಅದು ಅವಳ ತಪ್ಪಲ್ಲ, ಸ್ನೇಹದ ಬಗ್ಗೆ ಅವಳು ತಿಳ್ಕೊಂಡಿರೋದು ತಪ್ಪು. ಸ್ನೇಹವನ್ನ ಎಲ್ಲರಿಗೂ ಕೊಡಿ ಆಗ ಎಲ್ಲರ ಸ್ನೇಹ ನಿಮ್ಮದಾಗುತ್ತೆ, ಸ್ನೇಹ ಬೆಳೆಸೋದು ಉಳಿಸೋದು ನಮ್ಮ ಕ್ಯೆಲಿದೆ. ನಮ್ಮ ಸ್ನೇಹನ ಎಲ್ಲ ಬಯಸೋ ಹಾಗೆ ನೋಡ್ಕೋಬೇಕು ನಮ್ಮ ಸ್ನೇಹಿತರು ನಮ್ಮ ದೂರ ಮಾಡೋಕೆ ಸಾಧ್ಯವಾಗದಂತ ಆಕರ್ಷಕ ವ್ಯಕ್ತಿತ್ವ ನಮ್ಮದಾಗಬೇಕು. ಸ್ನೇಹ ಇರೋದು ಬೇರೆ ಎಲ್ಲ ನೋವನ್ನು ಮರೆಯೋಕೆ ಸ್ನೇಹದಿಂದ ಮತ್ತೆ ನೋವು ಪಡೋಕೆ ಅಲ್ಲ.

ಮತ್ತೆ ನೀವು ಸ್ನೇಹ ಬೆಳೆಸೋ ವ್ಯಕ್ತಿಯ ಸ್ವಭಾವವನ್ನು ತಿಳಿದುಕೊಳ್ಳಿ, ಅವರನ್ನ ಅರ್ಥ ಮಾಡ್‌ಕೋಳ್ಳಿ

ಅವರ ಸ್ನೇಹ ನಿಮಗೆ ಮಾತ್ರ ಮೀಸಲು ಅಂತ ಅಂದುಕೊಳ್ಳಬೇಡಿ. ನನ್ ಪ್ರಕಾರ ಸ್ನೇಹ ವೆಂಬುದು ಎಲ್ಲರಿಗೂ ಮೀಸಲು. ಅವರಿಗೂ ಸ್ವಾತಂತ್ರ್ಯ ಕೊಡಿ.

0 comments:

Post a Comment