Monday, January 31, 2011
ನನ್ನ ಕವನ...
ನನ್ನ ಕಿತ್ತು ತಿನ್ನೊ ನೋವು,
ನೀ ನಿನಗಾಗಿ ಬದಲಾದೆ,
ನಾ ನಿನ್ನಿಂದ ಬದಲಾದೆ,
ನಾನು, ನೀನು ಕೊನೆಗೆ ಏಲ್ಲರು,
ಬದಲಾದ್ರು ಈ ಪ್ರೀತಿ ಮಾತ್ರ ಬದಲಾಗಲ್ಲ.
ಆ ಪ್ರೀತಿಯ ಒಂದು ಮಿಂಚು ನೀ,
ಆ ಮಿಂಚಿಗೆ ಸಿಕ್ಕ ಒಣಮರ ನಾ,
ಸುಟ್ಟು ಭಸ್ಮ ಮಾಡಿದ ತೃಪ್ತಿ ನಿನಗೆ,
ಮತ್ತೆ ಚಿಗುರುವ ಗುಟುಕು ಆಸೆ ನನಗೆ,
ಅದ್ರೆ ಒಡಲಲ್ಲಿ ನೀ ಬಿಟ್ಟು ಹೋದ ಬೆಂಕಿ ಇರುವಾಗ,
ಮತ್ತೆ ಚಿಗುರುವ ಮಾತೆಲ್ಲಿ ಸ್ನೇಹ...
ನಿಜ ಹೇಳು ಸ್ನೇಹ ನೀ ನನ್ನ ಮರೆತೆಯ,
ಮರೆಯದಿದ್ರು ಮರೆತಂತೆ ನಟಿಸುವೆಯ,
ಮರೆತದ್ದೆ ಅದ್ರೆ ಹೇಗೆ ಅಂತ ತಿಳಿಸುವೆಯ.
ಅದು ಹುಟ್ಟಿನಿಂದಲೇ ಬರುವ ವಿದ್ಯೆಯ,
ನನಗು ನಿನ್ನ ಮರೆವ ಪಾಠ ಕಲಿಸುವೆಯ,
ನೀ ನನಗೆ ಕಲಿಸಿದರು ನಾ ಮರೆಯೊ ಮಾತೆಲ್ಲಿ ಸ್ನೇಹ.
ಇಂತಿ ನಿನ್ನ ಸತ್ತ ಮೇಲೂ ಪ್ರೀತಿಸುವ - ಪ್ರಜು.
Monday, January 17, 2011
ನಿನ್ನ ನಾ ಸತ್ತ ಮೇಲೂ ಪ್ರೀತಿಸುವೆ

"ನಿನ್ನ ನಾ ಸತ್ತ ಮೇಲೂ ಪ್ರೀತಿಸುವೆ"
ಅಬ್ಬಾ ಇದೆಂಥ ಮಾತು, ಕಲ್ಪನೆಗೂ ಮಿತಿ ಇರಬಾರದೇ.. ಬದುಕಿದ್ದಾಗಲೆ ಜೀವನಪೂರ್ತಿ ಒಂದೇ ಹುಡುಗಿಯನ್ನ ಪ್ರೀತಿಸೋದು ಕಸ್ಟ. ಇನ್ನೂ ಸತ್ತ ಮೇಲೆ ಏನಿರುತ್ತೆ ಬರಿ ಮಣ್ಣು.. ಸತ್ತ ಮೇಲೆ ನಾವಿದ್ರೆ ತಾನೆ ಪ್ರೀತಿ ಮಾಡೋಕೆ ಸಾಧ್ಯ ಅಂತ ಎಲ್ಲರ ಪ್ರಶ್ನೆ. ಆದ್ರೆ ಈ ಮಾತು ಕೇವಲ ಕಲ್ಪನೆಯಲ್ಲ, ಅಥವಾ ಪ್ರೀತಿಯ ತೋರಿಕೆ ಅಲ್ಲ ಅನ್ನೋ ಸತ್ಯ ಬಹುಶ: ಯಾರಿಗೂ ಗೊತ್ತಿರಲ್ಲ, ಸ್ವತ ಆ ಪ್ರೀತಿಯ ಪಡೆದ ಹುಡುಗಿಗೆ ಗೊತ್ತಿಲ್ಲ ಅಂದಮೇಲೆ ಬೇರೆಯವರಿಗೆ ಹೇಗೆ ಗೊತ್ತಾಗುತ್ತೆ ಅಲ್ವಾ?.
ನನ್ನ ಪ್ರಕಾರ ಪ್ರೀತಿ ಅನ್ನೋದು ಕೇವಲ ದೇಹಕ್ಕೆ ಸಂಬಂಧಪಟ್ಟಿದ್ದಲ್ಲ, ಅದು ಎರಡು ಆತ್ಮಗಳ ಮಿಲನ, ಹಾಗಂತ ಎಲ್ಲರ ಪ್ರೀತಿಯು ಹಾಗೆ ಇರಲ್ಲ ಕೆಲವರ ಪ್ರೀತಿ ಕೇವಲ ದೇಹ ಮಟ್ಟದ್ದಾಗಿರುತ್ತೆ. ಅಲ್ಲಿ ದ್ಯೆಹಿಕ ಆಕರ್ಷಣೆ ಬಿಟ್ಟು ಬೇರೇನು ಇರೋದಿಲ್ಲ. ಅಂತ ಪ್ರೀತಿ ನಶಿಸೋದಕ್ಕೆ ಕೇವಲ 5 ನಿಮಿಷ ಸಾಕು.
ಆದರೆ, ಈ ದೇಹಕ್ಕೂ ಮೀರಿದ ಒಂದು Entity ನಮ್ಮಲ್ಲಿ ಇದೆಯೆಂದು ನಮಗೇ ಕೆಲವೊಮ್ಮೆಅರಿವಾಗುತ್ತೆ. ಇದನ್ನು ಒಂದು ಶಕ್ತಿ(Energy) ಅಥವಾ ಆತ್ಮ ಎಂದು ಕರೆಯುತ್ತೇವೆ. ದೇಹ ಹೇಗೆ ತಂದೆತಾಯಿಯರಿಂದ ಬಂದಿದೆಯೋ, ಹಾಗೆ ಆತ್ಮ ಹಿಂದಿನ ಜನ್ಮದ ಆತ್ಮದಿಂದ transform ಆಗಿ ಬಂದಿರುತ್ತೆ. ಶಕ್ತಿ ಸೃಷ್ಟಿಯಾಗುವುದಿಲ್ಲ, ಮತ್ತು ಸಾಯುವುದಿಲ್ಲ, transform ಮಾತ್ರ ಆಗುತ್ತೆ(thermodynamics law ಪ್ರಕಾರ). ಹೀಗಾಗಿ ಆತ್ಮ ದೇಹದೊಡನೆ ಸಾಯುವುದಿಲ್ಲ, ಬದಲಾಗಿ ಇನ್ನೊಂದು ದೇಹ ಸೇರುತ್ತೆ, ಅಷ್ಟೆ ಅದೇ ಪ್ರೀತಿ ಆತ್ಮಪೂರ್ವಕವಾಗಿದ್ದರೆ ಆತ್ಮ ಇರುವವರೆಗೂ ಆ ಪ್ರೀತಿ ಶಾಶ್ವತ. ಸಾವು ಎಂಬುದು ದೇಹಕ್ಕೆ ಹೊರತು ಆತ್ಮಕ್ಕಲ್ಲ, ಆತ್ಮ ಚಿರಂತರ, ಎಂದಿಗೂ ನಾಶವಾಗದ ಒಂದು ಚೈತನ್ಯ.
ಇಲ್ಲಿ "Love at first sight" ಅಂತಾರಲ್ಲ ಅದನ್ನ ನಿಜವಾದ ಪ್ರೀತಿ ಅಂತ ಹೇಳೋದು ತಪ್ಪು, ಮೊದಲ ನೋಟದಲ್ಲಿ ಹುಟ್ಟೋದು ಕೇವಲ ಆಕರ್ಷಣೆ. ಆದ್ರೆ ಇಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗಲೆ ನಿಜವಾದ ಪ್ರೀತಿ ಸಾಧ್ಯ.
ನಿಜವಾದ ಪ್ರೀತಿ ಅಂದ್ರೆ ಇಬ್ಬರು ಪರಸ್ಪರ ಅವರ ಆತ್ಮವನ್ನು ಪ್ರೀತಿಸುವುದು.
ಆತ್ಮಕ್ಕೆ ಸಾವಿಲ್ಲ ಅನ್ನೋ ಸತ್ಯನ ಎಲ್ಲರೂ ನಂಬಿರೋ ಹಾಗೆ ನನ್ನ ಪ್ರೀತಿಗೆ ಸಾವಿಲ್ಲ ಅಂತ ನಾನು ನಂಬಿದ್ದೀನಿ so ನನ್ನ ಹುಡುಗಿಯನ್ನ ನಾ ಸತ್ತ ಮೇಲೂ ಪ್ರೀತಿಸುವೆ.