Sunday, September 12, 2010

ಎಲ್ಲೇ ಇದ್ದರು ನಗು ನಗುತ ಇರು.

ಯಾಕೋ ಏನೋ ನಿನ್ನ ಸ್ವಲ್ಪನಾದ್ರೂ ಮರೀಬೇಕು ಅಂತ try ಮಾಡಿದ್ರೂ
ನಿನ್ನ ನೆನಪೇ ಜಾಸ್ತಿ ಆಗುತ್ತೆ
ನಾನೇನಾದ್ರೂ ಹಾಗೆ ನಿನ್ನ ಪೂರ್ತಿಯಾಗಿ ಮರೆತರೆ ಒಂದಲ್ಲ ಒಂದು ದಿನ ಬಂದು
ನನ್ನ ಮುಂದೆ ನಿಂತು ಕೇಳ್ತೀಯಾ ಅಲ್ವಾ "ಸತ್ತ ಮೇಲೂ ನಿನ್ನ ನಾ ಪ್ರೀತಿಸ್ತೀನಿ" ಅಂತ ಹೇಳ್ತಾ ಇದ್ಯಲ್ಲಾ,
ಮತ್ತೆ ಯಾಕೆ ನನ್ನ ಮರೆತೆಬಿಟ್ಟೆ ಅಂತ.
ಆಗ ಹೇಳೋಕೆ ಏನು ಇರುತ್ತೆ, ನಾನು ನಿನ್ ಥರಾನೆ ಎಲ್ಲ ಮುಗಿದು ಹೋದ ಕಥೆ.
ಇನ್ಮೇಲೆ ನನಗು ನಿನಗೂ ಯಾವ ಸಂಬಂಧ ಇಲ್ಲ ಅಂತ ಹೇಳಿಬಿಡ್ಲಾ.
ಅಥವಾ ನೀನು ಮೋಸ ಮಾಡಿ ಬಿಟ್ಟು ಹೋದ ಹುಡುಗಿ ನಿನ್ನ ನೆನಪಿನ ಅವಶ್ಯಕತೆ ಇಲ್ಲ ಅಂತ ಹೇಳಲಾ.
ಇಲ್ಲ, ನಾನು ಒಬ್ಬ ಸಾಧಾರಣ ಹುಡುಗ ನಂಗೂ ಮನಸ್ಸಿದೆ ಅದಕ್ಕೂ ಪ್ರೀತಿ ಬೇಕು ಅನ್ನಿಸುತ್ತೆ,
ನಿಂಗಿಂತ ಜಾಸ್ತಿ ಪ್ರೀತಿ ಕೊಡೋ ಹುಡುಗಿ ಸಿಗಬಹುದು ಮತ್ಯಾಕೆ ನಿನ್ನ ನೆನಪು ಅಂತ ಹೇಳಲಾ.

ಆ ರೀತಿ ಹೇಳೋದು ಸುಲಭ ಆದ್ರೆ ಮರೆಯೋದೇ ಕಸ್ಟ.
ಅದು ಎಲ್ಲರಿಗೂ ಹಾಗೆ ಅಂತ ನಾನ್ ಹೇಳ್ತಾ ಇಲ್ಲ ಪ್ರೀತಿಸಿ ಮದುವೆ ಆಗಿ ಹತ್ತು ಇಪ್ಪತ್ತು ವರ್ಷ
ಆದ್ಮೇಲೂ ಗಂಡ ಹೆಂಡತಿ ಡೈವೋರ್ಸ್ ಮಾಡ್ಕೊಂಡು, ಮತ್ತೆ ಹೊಸ ಜೋಡಿ ಹುಡುಕೋ ಕೆಲಸ ಮಾಡ್ತಾರೆ.
ಆದ್ರೆ ನನ್ ಪಾಲಿಗೆ ನೀನು ಸಿಕ್ಕಿದ್ದು ಕೇವಲ ಎರಡು
ವರ್ಷ ಆದ್ರೂ ನಾನು ನಿನ್ನ ನನ್ನ ಜನುಮ ಜನುಮದ ಪ್ರೇಯಸಿ ಅಂತ ಡಿಸೈಡ್ ಮಾಡಿದ್ದೀನಿ.
ನಂಗೊತ್ತು ನೀನು ಈ ಜನ್ಮದಲ್ಲಿ ಸಿಗಲ್ಲ ಅಂತ ಆದ್ರೂ ನೀನೆ ಹೇಳಿದ್ದೀಯಲ್ಲ ಮುಂದಿನ ಜನ್ಮ
ಅಂತ ಇದ್ರೆ ನಾವೀಬ್ರೂ ಒಂದಾಗೋಣ ಅಂತ ಅಸ್ಟೆ ಸಾಕು ನಂಗೆ.
ಆಮೇಲೆ ನಾನು ಯಾಕೆ ನಿನ್ನ ಮರೆಯೋಕೆ ಆಗಲ್ಲ ಅಂತ ಹೇಳಿದೆ ಗೊತ್ತ?,
ನೋಡೋಕೆ ತುಂಬಾ ಸುಂದರವಾಗಿದ್ದೀಯ ಮದ್ವೆ ಆದ್ರೆ ನಿನ್ನನ್ನೇ ಮದುವೆ ಆಗ್ಬೇಕು ಅಂತ ಅಲ್ಲಾ.
ಅದು ನಿನಗೂ ಗೊತ್ತು ನಾವೀಬ್ರೂ ಲವ್ ಮಾಡೋವಾಗ ಒಬ್ಬರನ್ನೊಬ್ಬರು ನೋಡೇ ಇರ್ಲಿಲ್ಲ ಅಂತ.
ನೀನು ನನ್ನ ನೋಡಿದ್ಮೇಲೆ ಏನಪ್ಪಾ ತುಂಬಾ ಬ್ಲ್ಯಾಕ್ ಇದ್ದಾನೆ ತುಂಬಾ ಬ್ಯಾಡ್ ಹ್ಯಾಬಿಟ್ಸ್ ಇದೆ ಅಂತ
ನಿನ್ ಪ್ರೀತಿನ ಕಡಿಮೆ ಮಾಡ್ಲಿಲ್ಲ. ನಾನು ಹಾಗೆ ಕಣೇ. ನಿನ್ನ ಜಾಗದಲ್ಲಿ ಬೇರೆ ಯಾವ ಹುಡುಗಿ
ಹೇಗೆ ಇದ್ದರು ಪ್ರೀತಿಗೆ ಮೋಸ ಮಾಡ್ತಾ ಇರ್ಲಿಲ್ಲ.
ಮತ್ತೆ, ನಾನು ನಿನ್ನ ಜಾಸ್ತಿ ಲವ್ ಮಾಡ್ತಾ ಇದ್ದೀನಿ ಅಂತಾನೂ ನಿನ್ನ ಮರೆಯೋಕೆ ಆಗಲ್ಲ ಅಂತ ಹೇಳಲಿಲ್ಲ.
ನಿನ್ನ ಮರೆಯದೇ ಇರೋದಕ್ಕೆ ಇರೋ ಒಂದೇ ಒಂದು ಕಾರಣ ಅಂದ್ರೆ ಅದು

ನೀನು ಕೊಟ್ಟ ಪ್ರೀತಿ.
ನೀ ಕೊಟ್ಟ ಪ್ರೀತಿಗೆ ನಾನು ಏನು ಕೊಟ್ಟರು ಕಡಿಮೆನೆ ಅಲ್ವಾ....
ಅದ್ಕೆ ಆ ಪ್ರೀತಿನ ಜೀವನ ಪೂರ್ತಿ ನೆನಪಿಟ್ಟ್ಕೋತೇನೆ. ಆ ನೆನಪಿನಿಂದ ನಿನ್ನ ನೋಡ್ತೆನೆ, ನಿನ್ ಜೊತೆ ಮಾತಾಡ್ತೆನೆ,
ಅದು ನಂಗೆ ಮಾತ್ರ ಕುಶಿ ಕೊಡುತ್ತೆ ಆದ್ರೆ ಅದೇ ನೆನಪು ನಿನ್ನ ನೋಹಿಸುತ್ತೆ. ಎಲ್ಲವನ್ನು ಮರೆತು ಹೊಸ ಜೀವನ
ಶುರು ಮಾಡೋ ಆತುರದಲ್ಲಿ ಒಂದು ಪುಟ್ಟ ಮನಸ್ಸಿನ ಯೋಚನೆ ಯಾಕೆ ನಿನಗೆ ಮರೆತು ಬಿಡು.
ಆ ಹೃದಯ ಎಲ್ಲೇ ಇದ್ದರು ನಿನ್ನ
ಪ್ರೀತಿ ಮಾಡ್ತಾನೆ ಇರುತ್ತೆ ಅಂತ ಮಾತ್ರ ನೆನಪು ಇಟ್ಕೋ.
ನಾನು ಸ್ವಲ್ಪ ಜಾಸ್ತಿನೆ ಭಾವಜೀವಿ ನಂಗೆ ಯಾವುದನ್ನು ಅಸ್ಟು ಸುಲಭವಾಗಿ ಮರೆಯೋದಿಲ್ಲ.
ನನ್ನ ಹತ್ತಿರಕ್ಕೆ ಬಂದ ಏನೇ ವಸ್ತು ಆದ್ರೂ ತುಂಬಾ ಹಚ್ಚಿಕೊಂಡು ಬಿಡ್ತೆನೆ ಅದ್ಕೆ ಮತ್ತೆ ಕಳ್ಕೊಂಡ್ರೇ
ತುಂಬಾ ನೋವು ಅನುಭವಿಸ್ತೇನೆ ಅದು ಫ್ರೆಂಡ್ಸ್ ಆಗಿರಲಿ ಅಥವಾ ನಾನು ಉಪಯೋಗಿಸುವ ಯಾವುದೇ
ವಸ್ತು ಆಗಿರಲಿ ನನ್ನ ಮತ್ತು ಅದರ ನಡುವೆ ಒಂದು ಅವಿನಾಭಾವ ಸಂಬಂದ ಇರುತ್ತೆ.
ಅದು ನಾನು ಬರೆಯೋ ಪೆನ್ನು ಆಗಿರಬಹುದು ತಲೆ ಬಾಚೋ ಕೋಮು ಆಗಿರಬಹುದು,
ಎರಡು ರೂಪಾಯಿ ಕೊಟ್ಟರೆ ಹೊಸದೆ ಸಿಗಬಹುದು
ಆದ್ರೆ ಆ ಸಂಬಂದ ಮತ್ತೆ ಸಿಗಲ್ಲ. ಅದ್ಕೆ ನಾನು ಏನನ್ನು ಕಳ್ಕೊಳ್ಳೋದಕ್ಕೆ ಈಸ್ಟಾ ಪಡಲ್ಲ
ಎಸ್ಟೇ ಕಸ್ಟ ಆದ್ರೂ ಹುಡುಕ್ತೇನೆ. ಆದ್ರೆ ನನ್ನ ಲೈಫ್ ಪಾರ್ಟ್ನರ್ ನ ನಾನು ಕಳ್ಕೊಂಡುಬಿಟ್ಟೆ.

ನನ್ನ ಪ್ರೀತಿ ಮಾಡಿ ಬಿಟ್ಟು ಹೋದ ಹುಡುಗಿಗೆ ನಾನು ಆಶಿಸುವುದು ಎಲ್ಲೇ ಇದ್ದರು ನಗು ನಗುತ ಇರು ಅಂತ ಅಸ್ಟೆ.
ಅದಕ್ಕಿಂತ ಜಾಸ್ತಿ ಏನೇ ಕೊಟ್ಟರು ಅದು ನಿನಗೆ ಬೇಡವಾದ ವಸ್ತು.
ನಿನಗೆ ಜೀವನದ ಕೊನೆಯಲ್ಲಾದರೂ ನನ್ನ ನೆನಪು ಆದ್ರೆ ನೋಡೋಕೆ ದಯವಿಟ್ಟು ಬರಬೇಡ. ಯಾಕಂದ್ರೆ
ನಿನ್ನ ನೋಡದೇ ನಿನ್ನ ನೆನಪಿನಲ್ಲೇ ಹೇಗೋ ಜೀವನ ಕಳಿತ ಇರ್ತೇನೆ. ಮತ್ತೆ ನಿನ್ನ ನೋಡಿದ್ರೆ ನಾನು ಬದುಕೋದೇ ಕಸ್ಟ.
ನಿನಗೆ ದಿನ ಬೆಳಗ್ಗೆ ಎದ್ದ ಮೇಲೆ ನನ್ನ wake up ಮಾಡೋ ಹಾಗೆ ಬೇರೆ ಹುಡುಗನಾ ಎಳಿಸಬಹುದು,
ಅಲ್ಲಿಂದ ರಾತ್ರಿ ಜೋ ಜೋ ಹಾಡೀ ಮಲಗುವವರೆಗೂ ನಿನ್ನ ಬೆಟ್ಟದಸ್ತು
ಪ್ರೀತಿನಾ ಕೊಡಬಹುದು. ಆದ್ರೆ ನಂಗೆ ಇನ್ಮೇಲೆ ಅದೆಲ್ಲ ಸವಿನೆನಪು
ಅಸ್ಟೆ ಅಲ್ಲ ನಾನು ಸಾಯೋವರೆಗೂ ಜೋಪಾನ ಮಾಡ್‌ಬೆಕಾದ ಅಸ್ತಿ ಅದು.

2 comments:

  1. ಇದನ್ನೆ ಪ್ರೀತಿ ಅನ್ನೋದು ಆದರೆ ನಿಮ್ಮಂತ ಪ್ರೇಮಿ ಯಾರ್ ಗೂ ಸಿಗೊದಿಲ್ಲಾ ಅನ್ ಸುತ್ತೆ ಖಂಡಿತ ಮುಂದೆ ನಿಮಗೆ ಒಳ್ಳೆಮನಸಿನ ಹುಡುಗಿ ಸಿಗತಾಳೆ ಹಾಗೆ ಸುಂದರವಾದ ಬದುಕು ನಿಮಗೆ ಸಿಗುತ್ತೆ ನಿವ್ ಹೆಳ್ಬೊದು ಅವಳು ಇದ್ದ ಹಾಗೆ ಆಗೊದಿಲ್ ವಲ್ಲ ಅಂತ ಅಲ್ವಾ ನಾವು ಪ್ರಿತ್ಸೋರು ನಮಗೆ ಸಿಗಬೇಕು ಅನ್ನೊದು ಸ್ವಾರ್ಥ ಆದರೆ ನಮ್ಮನ್ನ ಪ್ರಿತ್ಸೋರು ಎಲ್ಲಿದ್ರು ಚನ್ನಾಗಿರಬೇಕು ಅನ್ನೊದು ನಿಜವಾದ ಪ್ರೀತಿ ಅಂತಾ ಒಂದು ಪ್ರೀತಿ ನಿಮ್ದು ವ್ಹಾವ್.......................................

    ReplyDelete