Monday, September 19, 2011

ಪ್ರೀತಿ ನಿನ್ನ ಮರೆಯಲು ಸಾಧ್ಯವೇ..?

ಪ್ರೀತಿಯ ಸ್ನೇಹ, “ಜೀವನಪೂರ್ತಿ ಮರೆಯಲಾಗದಂತ ಪ್ರೀತಿ ಕೊಟ್ಟು, ಸಾಯುವವರೆಗು ಜೊತೆಯಲ್ಲಿರುವೆ ಎಂದು ಮಾತನ್ನಿಟ್ಟು, ನಾ ಸಾಯುವ ಮುನ್ನವೆ ಪ್ರೀತಿಯ ಕೊಂದ, ನನ್ನ ಪ್ರೀತಿಯ ಹುಡುಗಿಗೆ ಹುಟ್ಟುಹಬ್ಬದ ಶುಭಾಷಯಗಳು”.
ನನ್ನ ತುಂಬಾ ದಿನದಿಂದ ಕಾಡ್ತಾ ಇರೋ ಒಂದು ಚಿತ್ರ ತಮಿಳಿನ ಜಯಂ ರವಿ ಮತ್ತು ಭಾವನ ಅಭಿನಯದ "ದೀಪಾವಳಿ", ಅದರ ಬಗ್ಗೆ ಹೇಳೋ ಮೊದಲು ಯಾರಾದ್ರು ನೋಡಿಲ್ಲ ಅಂದ್ರೆ ಒಮ್ಮೆ ನೋಡಿ ಬನ್ನಿ. ಇದು ಕೂಡ ಒಂದು ಲವ್ ಸ್ಟೋರಿನೇ ಅದ್ರೂ ತುಸು ವಿಭಿನ್ನವಾಗಿದೆ, ಪ್ರೀತಿಯನ್ನ ವ್ಯೆಜ್ನಾನಿಕ ನೆಲೆಯಲ್ಲಿ ಹಿಡಿದಿಟ್ಟಿರೋದು ಈ ಕಥೆಗೆ ಗಟ್ಟಿತನ ತಂದಿದೆ, ಅಪಘಾತವೊಂದರಲ್ಲಿ ತಲೆಗೆ ಪೆಟ್ಟು ಬಿದ್ದ ಹುಡುಗಿ(ನಾಯಕಿ) ಹಿಂದಿನ ಮೂರು ವರ್ಷದ ಎಲ್ಲ ವಿಷಯಗಳನ್ನು ಮರೆತುಬಿಡ್ತಾಳೆ, ಆನಂತರ ಪರಿಚಯ ಆಗೋ ನಾಯಕನ ಮೇಲೆ ಪ್ರೀತಿ ಹುಟ್ಟುತ್ತೆ, ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಸ್ಟು ಪ್ರೀತಿಸ್ತಾರೆ, ಒಂದು ಸುಂದರ ಪ್ರೇಮಕಥೆ ಹೀಗೆ ಸಾಗುತ್ತಿರುವಾಗಲೆ, ಖ್ಯಾತ ವ್ಯೆದ್ಯರೊಬ್ಬರು ಹುಡುಗಿಯ ಆ ಮೂರು ವರ್ಷದ ಹಳೆ ನೆನಪು ಮತ್ತೆ ಬರುವ ಸಾದ್ಯತೆ ಇದೆ, ಆದ್ರೆ ಆನಂತರ ನಡೆದ ಎಲ್ಲ ಘಟನೆಗಳು ಅಳಿಸಿಹೋಗಬಹುದು, ಅಂದರೆ ನಾಯಕನನ್ನು ಪ್ರೀತಿಸಿದ್ದು ಕೂಡ ಅಂದಾಗ ಹುಡುಗಿಗೆ ಅದು ಬೇಡವೆನ್ನಿಸುತ್ತೆ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗನ್ನ ಕಳೆದುಕೊಳ್ಳಬಾರದೆಂದು, ನನಗೆ ಮುಂದೆ ನಿನ್ನ ನೆನಪೆ ಇಲ್ಲ ಅಂದ್ರೂ ನನ್ನ ಬಿಡಬೇಡ, ಎಸ್ಟೇ ಕಸ್ಟ ಬಂದ್ರು ನೀ ನನ್ನೆ ಮದುವೆ ಮಾಡ್ಕೋಬೇಕು ಅಂತ ಆಣೆ ತಗೋತಾಳೆ,
ಮುಂದೆ ಹಾಗೆ ಆಗುತ್ತೆ ಹುಡುಗಿಗೆ Accident ಆದ ಹಿಂದಿನದೆಲ್ಲ ನೆನಪಾಗುತ್ತೆ, ಅದ್ರೆ ಅಮೇಲೆ ನಡೆದ ಅವಳ ಪ್ರೀತಿಯ ಬಗ್ಗೆ ಕಿಂಚಿತ್ತೂ ಗೊತ್ತಿರಲ್ಲ, ಅಲ್ಲಿಂದ ಹುಡುಗನ ಪಾಡು ನೋಡುವವರ ಕಣ್ಣು ಒದ್ದೆಯಾಗಿಸುತ್ತೆ, ಅವಳು ಇವನನ್ನು ಪ್ರೀತಿಸಿದ್ದು, ಇವನು ಆಣೆ ಮಾಡಿದ್ದು, ಮತ್ತು ಅವನ ಪ್ರೀತಿಯನ್ನು ಅರ್ಥ ಮಾಡಿಸೋಕೆ ಹರ ಸಾಹಸ ಪಡ್ತಾನೆ, ಕೊನೆಗು ಅವರಿಬ್ಬರು ಒಂದಾಗ್ತಾರೆ. Happy Ending. ಚಿತ್ರ ಮೂರು ಗಂಟೆಯೊಳಗೆ ಮುಗಿದ್ರು ಇದನ್ನ ವಿಶ್ಲೇಷಣೆ ಮಾಡೋಕೆ, ಅದರ ಬಗ್ಗೆ ಚಿಂತನೆ ಮಾಡೋಕೆ ಒಂದು ದಿನ ಆದ್ರು ಸಾಕಾಗಲ್ಲ. ಎಲ್ಲ ಹೇಳೊ ರೀತಿ ಪ್ರೀತಿ ಮನಸ್ಸಿಗೆ ಸಂಭಂದಿಸಿದ್ದು, ಪರಸ್ಪರ ಪ್ರೀತಿಸೋ ಏರಡು ದೇಹಗಳ ನಡುವೆ ಎನೆಲ್ಲಾ ಬದಲಾವಣೆ ಆದ್ರು, ಅದು ಮನಸ್ಸಿಗೆ ಧಕ್ಕೆಯಾಗಲ್ಲ, ಆ ಪ್ರೀತಿ ದೂರ ಅಗಲ್ಲ ಅಂತ. ಇಲ್ಲಿ ಮನಸ್ಸು ಅಂದ್ರೆ ಮ್ಯೆಂಡ್ ಅಂತಾನೇ ಅರ್ಥ ಮಾಡ್ಕೊಬೇಕು, ಆದ್ರೆ ಮನಸ್ಸಿಗು ಮೆದುಳಿಗು ತುಂಬಾನೆ ವ್ಯತ್ಯಾಸ ಇದೆ., ಕಂಪ್ಯೂಟರ್ ನ ಮೆದುಳು ಅಂತ ಕರೆಯೋ C P U ಗೆ ಹೇಗೆ Hard disc, Ram & Processor ಇದೆಯೋ ಹಾಗೆ ನಮ್ಮ Mindನಲ್ಲು ಕೂಡ Hard disc ಇರುತ್ತೆ ನಮ್ಮ ನೆನಪಿನ ಪುಟಗಳು ಅಲ್ಲಿ ಅಡಗಿರುತ್ತೆ. ಪ್ರೀತಿಯ ವಿಷಯ ಬಂದಾಗಲು ಹಾಗೆ, ನಾವು ಪ್ರೀತಿಸಿದ ವ್ಯಕ್ತಿ, ಅವರ ಮುಖಚಹರೆ, ಸಂವಾದಗಳು ನಮ್ಮ ನೆನಪಿನಲ್ಲಿ ಇರುವವರೆಗೆ ಮಾತ್ರ ಅದು ಪ್ರೀತಿ, ಆಕಸ್ಮಿಕವೊ, ಉದ್ದೇಶಪೂರ್ವಕವೋ ಆ ನೆನಪು ಮರೆಯಾದರೆ ಆ ಪ್ರೀತಿ ಹೇಳ ಹೆಸರಿಲ್ಲದಂತೆ ಎದ್ದು ನಡೆದುಬಿಡುತ್ತೆ, ಎಲ್ಲಾ ಹುಡುಗರು ತಮ್ಮ ಪ್ರಿಯತಮೆಯ ಹುಟ್ಟಿದ ದಿನವನ್ನ ಭಾರತಕ್ಕೆ ಸ್ವತಂತ್ರ ಸಿಕ್ಕಿದ್ದು August 15 1947 ಆಂತ ಹೇಗೆ ನೆನಪು ಇಟ್ಕೋತಾರೋ ಹಾಗೆ mind ಅಲ್ಲಿ store ಮಾಡ್ಕೋತಾರೆ ಹೊರತು ಅವರ ಪ್ರೀತಿ ಪವಾಡದಿಂದ ಎನು ಶುಭಾಷಯ ಬರೋದಿಲ್ಲ. ಆದ್ರು ಕೆಲವರು ವಾದ ಮಾಡ್ತಾರೆ, ನಾನು ಎಸ್ಟೇ ವರ್ಷ ಕಳೆದರು ಅಸ್ಟು easy ಆಗಿ ಮರೆಯೋದಿಲ್ಲ ಅಂತ ಅದಕ್ಕೆ ನಾನು ಕೊಡೋ ಕಾರಣ ಇಸ್ಟೆ "ಇಸ್ಟ ಆಗಿರೋದು ಅಸ್ಟು ಸುಲಭಕ್ಕೆ ಮರೆಯೋದಿಲ್ಲ". Scientific ಆಗಿ ಹೇಳಬೇಕಂದ್ರೆ ನಮ್ಮ mind ಅಲ್ಲಿ ಇರೋ ಯಾವ ವಿಷಯ ಕೂಡ ಅಳಿಸಿ ಹೋಗಲ್ಲ, ಆದ್ರೆ ಅದನ್ನ ನೆನಪಿಸಿಕೊಳ್ಳೊ ಸಾಮರ್ಥ್ಯ ಕಡಿಮೆ ಆಗುತ್ತೆ, ಅದನ್ನೇ ಮರೆವು ಅನ್ನೋದು. ಆದ್ರೆ ಪ್ರೀತಿ ವಿಷಯ ಬಂದಾಗ ಯಾರು ಅಸ್ಟು ಬೇಗ ಮರೆಯೊದಿಲ್ಲ, ಸಾಯುವವರೆಗು ಪ್ರೀತಿಯ ನೆನಪಲ್ಲೆ ಕೊರಗುವವರು ಇದ್ದಾರೆ. ಹುಡುಗ time pass ಗೆ ಅಂತ ಹತ್ತು ಹುಡುಗಿಯರನ್ನ ಲವ್ ಮಾಡಿದ್ರು, ಅಜ್ಜ ಅದ್ಮೇಲೂನು ಆ ಹತ್ತು ಜನರ ಹೆಸರನ್ನು ತಡವರಿಸದೆ ಹೇಳ್ತಾನೆ ಇನ್ನು true love ಮಾಡೋರ ಬಗ್ಗೆ ಹೇಳೊದೆ ಬೇಡ ಬಿಡಿ. ಆದ್ರೆ ನಾನಿಲ್ಲಿ ಹೇಳ್ಬೇಕು ಅಂತ ಇರೋದು ನ್ಯೆಸರ್ಗಿಕ ಮರೆವಿನ ಬಗ್ಗೆ ಅಲ್ಲ by accident ಎನಾದ್ರು ತಲೆಗೆ ಪೆಟ್ಟು ಬಿದ್ದು ಕೆಲವು ವಿಷಯಗಳು, ಅವರ ಪ್ರೀತಿ ಪಾತ್ರದವರು ಸೇರಿ ಮರೆತು ಹೋದ್ರೆ, ಅವರನ್ನ ಮೋಸಗಾರ ಅನ್ನೋಕಾಗುತ್ತ..? ನಮ್ಮ್ ಪ್ರೀತಿ ಸುಳ್ಳು ಅನ್ನೋಕಾಗುತ್ತ...? Mind never creates Love but love controlled by mind ಎನಾದ್ರು ಮಾಡಿ ಅವರಿಗೆ ನಂಬಿಕೆ ಬರೋ ಹಾಗೆ ಮಾಡೋದೆ ಜಾಣತನ. ಮೇಲೆ ಹೇಳಿದ ಚಿತ್ರದಲ್ಲು ಕೂಡ ನಾಯಕನ ಶತಪ್ರಯತ್ನದ ನಂತರ ಹುಡುಗಿ ಅವನ್ನನ್ನ ನಂಬಿ ಮತ್ತೆ ಪ್ರೀತಿಸ್ತಾಳೆ. ಆದ್ರೆ ಚಿತ್ರದಲ್ಲಿ ಸಾರಸ್ಯ ಇರೋದು ಹುಡುಗಿಗೆ ಕೊನೆಗು ಅವಳ ಹಳೆ ಪ್ರೇಮದ ಬಗ್ಗೆ ನೆನಪೆ ಬರೋದಿಲ್ಲ, ಆದ್ರೂ ನಾಯಕನ ಪ್ರೀತಿಯ ತೀವ್ರತೆಗೆ ಮನಸೋತು ಅವನ ಪ್ರೀತಿಯನ್ನು ಒಪ್ಕೋತಾಳೆ ಅಸ್ಟೆ. ಇದರ ಬಗ್ಗೆ ಇನ್ನು ತುಂಬಾ ಬರೆಯೋದಿದೆ ಸಮಯ ಸಿಕ್ಕಾಗ ಖಂಡಿತಾ post ಮಾಡ್ತೇನೆ. ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಕ್ಕೆ ಸ್ವಾಗತ.
ಇಂತಿ ನಿಮ್ಮ ಪ್ರೀತಿಯ ರಾಜೇಶ (ಪ್ರಜು).
9686333367

3 comments: