Wednesday, January 20, 2010

ನನ್ನ ಪ್ರೀತಿಯ ಸ್ನೇಹ,

ನನ್ನ ಪ್ರೀತಿಯ ಸ್ನೇಹ,ಪ್ರೀತಿ ಮಾಡಿದ್ದು ನನ್ನ ತಪ್ಪಾ ಅಥವಾ ನಿನ್ನ ಪ್ರೀತಿ ಮಾಡಿದ್ದು ತಪ್ಪಾ ನಂಗೆ ಗೊತ್ತಿಲ್ಲ ಆದ್ರೆ ಒಂದಾಂತ್ತು ನಿಜ ಪ್ರೀತಿ ಶುರು ಆದ್ಮೇಲೆ ನಾನು ತುಂಬಾ ಬದಲಾಗಿದ್ದೀನಿ ನಾನು ನನ್ನ ಪಾಡಿಗೆ ಇರೋದಕ್ಕೆ ಆಗ್ತಾ ಇಲ್ಲ ನೀನು ನನ್ನ ತುಂಬಾ Disturb ಮಾಡ್ತಾ ಇದ್ದೀಯಾ ಅದರಿಂದ ನಿಂಗೆ ಏನು ಸಿಗುತ್ತೆ ಅಂತ ಗೊತ್ತಿಲ್ಲ ಆದ್ರೆ ನಂಗೆ ಮಾತ್ರ ತುಂಬಾ ಬೇಜಾರಾಗುತ್ತೆ ನಿನ್ನ ಹಟ ನನಗೆ ತಲೆ ಕೆಡಿಸುತ್ತೆ ನಾನು ಸ್ವಲ್ಪ ಮುಂಗೋಪಿ ಅದು ನಿನಗೂ ಗೊತ್ತು ಆದ್ರೂ ಯಾಕೆ ನನ್ನ ವಿಪರೀತ ಕಾಡಿಸ್ತೀಯ ನಿಂಗೆ ಯಾಕೆ ಹಾಗಾಗಿದೆ ಅಂತ ನಾನೇ ಹೇಳ್ತೇನೆ ಕೇಳು ನೀನು ನನ್ನ ಜಾಸ್ತಿ ಪ್ರೀತಿಸ್ತೀಯ ಎಲ್ಲಿ ನಂಗೆ ನನ್ ಹುಡುಗ ಸಿಗಲ್ವೋ ಅಂತ ಭಯ. ನೀನು ನನ್ ಮೇಲೆ ಇಟ್ಟಿರೋ ಪ್ರೀತಿಗೆ ನನ್ ಯಾವತ್ತೂ ಮೋಸ ಮಾಡಲ್ಲ ಆ ನಂಬಿಕೆ ಬೆಳೆಸ್ಕೋ ಆಗ ನಿನ್ನ ಮನಸ್ಸು ಫ್ರೀ ಆಗುತ್ತೆ. ಯಾಕೆಂದ್ರೆ ಪ್ರೀತಿಗೆ ನಂಬಿಕೆನೇ ಮುಖ್ಯ ಅದು ನಮ್ಮ ಪ್ರೀತಿನಾ ಕಾಪಾಡುತ್ತೆ ನೀನು ನನ್ನ ಬಗ್ಗೆ ತಪ್ಪಾಗಿ ತಿಳ್ಕೊಂಡಿದ್ದಿಯ ನಾನು ನೀನು ತಿಳ್ಕೊಂಡಿರೋ ಥರ ಕೆಟ್ಟ ಹುಡುಗ ಅಲ್ಲ ಆದ್ರೆ ನೀನು ಹಾಗೆ ಆಗೋ ಥರ ಮಾಡ್ತಾ ಇದ್ದೀಯಾ ನಿಂಗೆ ಇನ್ನೊಂದು ವಿಷಯ ಗೊತ್ತಾ ನಿನ್ನ ಲವ್ ಮಾಡೋಕೆ ಶುರು ಆದ ದಿನದಿಂದ ನಾನು ಯಾರ ಜೊತೇನು ಜಾಸ್ತಿ ಮಾತು ಆಡಲ್ಲ ಅದ್ರಿಂದ ತುಂಬಾ ಜನ ಫ್ರೆಂಡ್ಸ್ ಕಳ್ಕೊಂಡೆ ಅದೆಲ್ಲ ನಿನಗೋಸ್ಕರ. ನಿನ್ನಲ್ಲಿ ಪೋಸ್ಸೆಸ್ಸಿವೆನೆಸ್ಸ್ ಜಾಸ್ತಿ ಇದೆ ಅದ್ಕೆ ನನ್ನ ಮೇಲೆ ಸಂಶಯ ಪಡ್ತೀಯ ಅದ್ಕೆ ನಂಗೆ ತುಂಬಾ ಹರ್ಟ್ ಆಗುತ್ತೆ ನನ್ನ ಬಗ್ಗೆ ಬೇರೆ ಯಾರೇ ಏನೇ ಅಂದ್ರೂ OK ಆದ್ರೆ ನಾನು ಪ್ರೀತಿಸಿದ ಹುಡುಗಿನೆ ನನ್ನ ನಂಬಲ್ಲ ಅಂದ್ರೆ ಅದು ನಂಗೆ ತುಂಬಾ ಹರ್ಟ್ ಆಗೋ ವಿಷಯ.

ನೀನು ನಿನ್ನದೆ ಯೋಚನೆಯಿಂದ ಹೇಳ್ತೀಯ ನೀವು ನನ್ನ ನೆಗ್ಲೆಕ್ಟ್ ಮಾಡ್ತೀಯಾ ಅಂತ ಆದ್ರೆ ನೀನು ನನ್ನ ಪ್ಲೇಸ್ ನಲ್ಲಿ ನಿಂತಕೊಂಡು ಯೋಚನೆ ಮಾಡು ನೀನು ಆಗಿದ್ರೆ ಏನು ಮಾಡ್ತೀಯಾ ಅಂತ. ಇವಾಗ ನೀನು ಕಾಲೇಜ್ ಗೆ ಹೋಗೋ ಹುಡುಗಿ ನಿಂಗೆ ಅದೆಲ್ಲ ಅರ್ಥ ಆಗಲ್ಲ ನಂಗೆ ಸಾವಿರಾರು ಟೆನ್ಶನ್ ಇರುತ್ತೆ ಅದೆಲ್ಲ ಇದ್ರು ದಿನಕ್ಕೆ ಅರ್ಧ ಗಂಟೆ ಮಾತ್ಆಡ್ತೀನಿ ಆದ್ರೆ ಆ ಅರ್ಧ ಗಂಟೆಲೀ ನೀನು ನೂರು ಸಲ ಜಗಳ ಮಾಡ್ತೀಯಾ ಅದು ನಂದೇ ತಪ್ಪು ಇರಬಹುದು ಆದ್ರೆ ನೀನು ಅದ್ಕೆ ಅಡ್ಜಸ್ಟ್ ಮಾಡ್ಕೋಬೇಕು ನನ್ನಲ್ಲಿ ಫಾಲ್ಟ್ ಏನಿದೆ ಅಂತಾನೆ ಹುಡುಕ್ತಿಯ ಅದ್ಬಿಟ್ಟು ನನ್ನ ಅರ್ಥ ಮಾಡ್‌ಕೊಳ್ಳೋಕೆ ಟ್ರೈ ಮಾಡು ನಮ್ಮಿಬ್ಬರ ಮಧ್ಯೆ ಈ ಪ್ರೀತಿ ಹೀಗೆ ಇರಬೇಕು ಅಂದ್ರೆ ಅದ್ಕೆ ಹೊಂದಾಣಿಕೆ ಕೂಡ ಮುಖ್ಯ.


ನನ್ನ ನೀನು
Understand ಮಾಡ್‌ಕೊಳ್ಳಿಲ್ಲ ಅಂದ್ರೆ ನನ್ನ ಮೇಲೆ ಪ್ರೀತಿ ಹೇಗೆ ಬರುತ್ತೆ. ಅಂತೂ ಇದೆ ಅಂದ್ರೆ ಅದು ನೀರ ಮೇಲಿನ ಗುಳ್ಳೆಯಂತೆ ಯಾವಾಗ ಬೇಕಾದ್ರೂ ಒಡೆದು ಹೋಗುತ್ತೆ. ಹಾಗೆ ಆಗಬಾರದು ನಮ್ಮ ಪ್ರೀತಿ. ನಿಂಗೆ ಪ್ರೀತಿಸೋದು ಮಾತ್ರ ಗೊತ್ತು ಆದ್ರೆ ಅದನ್ನ ಕಾಪಾಡೋದು ಗೊತ್ತಿಲ್ಲ. anyway bye take care I LOVE YOU

0 comments:

Post a Comment