
ಹೀಗೆ ಪ್ರೀತಿಯೆಂದರೇನು, ಹುಡುಕುತ್ತಾ
ಹೊರಟೆ ಒಂದು ಸಂಜೆ,
ತುಂತುರು ಹನಿಯನ್ನು ಕೇಳಿದೆ,
ನನ್ನ ಸ್ಪರ್ಶಕ್ಕೆ ಮೈ ಅರಳಿಸಿದ ಭೂದೇವಿಯು
ಮೈ ಗಂಧ ಪಡೆವ ಪರಿಯೇ
ಪ್ರೀತಿಯೆಂದಿತು!
ನಲಿವ ಗುಲಾಬಿಯ ಕೇಳಿದೆ,
ನನ್ನ ಮಕರಂದ ಕದ್ದ ದುಂಬಿ
ನಾನೊಪ್ಪುವ ರೀತಿಯಲ್ಲೇ ಸಂತ್ಯೆಸಿ
ಸಂತೋಷಿಸುವ ಪರಿಯೆಂದಿತು.
ಪಾರ್ಕಿನ ಕತ್ತಲಲ್ಲಿ ಒತ್ತಿಕೊಂಡು ಕುಳಿತ ಪ್ರೇಮಿಗಳ ಕೇಳಿದೆ,
ಆಕೆ ಅವನ ಬಿಗಿಯಾದ ಬಾಹು ಬಂಧನವೆಂದಳು,
ಆತ ಅವಳ ಮಿದುವೆದೆಯಲ್ಲಿ ಉಸಿರು ಕಟ್ಟಿಸಿಕೊಂಡು
ನರಳುವುದೆಂದ.
ನಿಜಕ್ಕೂ ಪ್ರೀತಿಯೆಂದರೆ
ಕದಿಯುವುದು,
ಪಡೆಯುವುದು,
ಬಂಧಿಸುವುದು,
ನರಳುವುದು,
ಮತ್ತು ಉಸಿರು ಕಟ್ಟಿಸಿಕೊಳ್ಳುವುದು
ನೀವೇನಂತೀರ?
0 comments:
Post a Comment